ಪ್ರಯಾಗ್‌ರಾಜ್: ಕುಂಭಮೇಳ ಕಾಲ್ತುಳಿತ ದುರಂತ ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದೆ. ಕಾಲ್ತುಳಿತದಿಂದ ಉಂಟಾದ ಸಾವುಗಳ ಬಗ್ಗೆ ಯುಪಿ ಸರ್ಕಾರ ಅಧಿಕೃತ ಅಂಕಿ ಸಂಖ್ಯೆ ನೀಡದ್ದನ್ನೇ ಅಸ್ತ್ರ ಮಾಡಿಕೊಂಡ ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.
ಈ ನಡುವೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ಸಾವಿನ ಸಂಖ್ಯೆ ಮುಚ್ಚಿಡಲು ಸರ್ಕಾರ, ಶವಗಳನ್ನು ನದಿಗೆ ಎಸೆದಿದೆ. ಇದ್ರಿಂದ ತ್ರಿವೇಣಿ ಸಂಗಮ ಮಲಿನವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
#WATCH | Delhi: Samajwadi Party MP Jaya Bachchan says, “… Where is the water most contaminated right now? It’s in Kumbh. Bodies (of those who died in the stampede) have been thrown in the river because of which the water has been contaminated… The real issues are not being… pic.twitter.com/9EWM2OUCJj
— ANI (@ANI) February 3, 2025
Advertisement
ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಲ್ತುಳಿತದ ಸಂದರ್ಭದಲ್ಲಿ ಸಂಭವಿಸಿದ ಸಾವುಗಳ ನಿಜವಾದ ಅಂಕಿಅಂಶಗಳನ್ನು ಸರ್ಕಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Advertisement
ಜನವರಿ 13ರಂದು ಮಹಾ ಕುಂಭಮೇಳ ಶುರುವಾಯಿತು. ಜನವರಿ 29ರಂದು ಅಮೃತ ಸ್ನಾಹದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 30 ಜನ ಸಾವನ್ನಪ್ಪಿದ್ದಾರೆ ಎಂದು ಯುಪಿ ಸರ್ಕಾರ ಅಂಕಿ ಅಂಶ ಬಿಡುಗಡೆ ಮಾಡಿತ್ತು. ಶವಗಳನ್ನು ನದಿಗೆ ಎಸೆದಿದ್ದರಿಂದ ತ್ರಿವೇಣಿ ಸಂಗಮದಲ್ಲಿ ನೀರು ಕಲುಷಿತಗೊಂಡಿದೆ ಎಂದು ಹೇಳೀದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಅತ್ತ, ಲೋಕಸಭೆಯಲ್ಲಿ ಕಾಲ್ತುಳಿತ ದುರಂತದ ಚರ್ಚೆಗೆ ಪಟ್ಟು ಹಿಡಿದು ವಿಪಕ್ಷಗಳು ಗದ್ದಲ ಎಬ್ಬಿಸಿದ್ವು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ಇದಕ್ಕೆ, ತೆರಿಗೆ ಪಾವತಿದಾರರ ಹಣ ವ್ಯರ್ಥ ಮಾಡ್ಬೇಡಿ. ಮರ್ಯಾದಾಪೂರ್ವಕವಾಗಿ ವ್ಯವಹರಿಸಿ ಎಂದು ಸ್ಪೀಕರ್ ಓಂ ಬಿರ್ಲಾ ಸಿಟ್ಟಾದ್ರು. ಆದ್ರೂ ವಿಪಕ್ಷಗಳು ಶಾಂತಿಸಲಿಲ್ಲ. ಈ ಮಧ್ಯೆ, ಕುಂಭಮೇಳ ದುರಂತದ ಘಟನೆ ದುರಾದೃಷ್ಟಕರ ಮತ್ತು ಕಳವಳಕಾರಿ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದೆ. ಆದ್ರೆ, ಪ್ರಕರಣ ಸಂಬಂಧ ಯುಪಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ.. ಭಕ್ತರ ಸುರಕ್ಷತೆಗೆ ಸೂಕ್ತ ಆದೇಶ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಅಲಹಾಬಾದ್ ಹೈಕೋರ್ಟ್ಗೆ ಹೋಗಿ ಎಂದು ಅರ್ಜಿದಾರರಿಗೆ ಸೂಚಿಸಿದೆ.