ಶಿವಮೊಗ್ಗ: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಒಬ್ಬ ಡಮ್ಮಿ ಕ್ಯಾಂಡಿಡೇಟ್. ಜೆಡಿಎಸ್ ಅಭ್ಯರ್ಥಿ ಆಯ್ಕೆಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಕಾಗೋಡು ತಿಮ್ಮಪ್ಪ ಅವರೇ ಕಾರಣವಾಗಿದ್ದು, ಮಧು ಬಂಗಾರಪ್ಪ ಆಯ್ಕೆ, ಶಿವಮೊಗ್ಗದ ಯಾವ ಮುಖಂಡರ ಆಂತರಿಕ ಆಯ್ಕೆಯಲ್ಲ ಎಂದು ಕುಮಾರ್ ಬಂಗಾರಪ್ಪ ಅವರು ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ಮತ್ತು ಗೀತಾ ಶಿವರಾಜ್ ಕುಮಾರ್ ಬಗ್ಗೆ ವಾಗ್ದಾಳಿ ನಡೆಸಿದ್ರು. ಕುಟುಂಬಕ್ಕೆ, ಸಮಾಜಕ್ಕೆ ಅನ್ಯಾಯ ಮಾಡಿದವರಿಗೆ ಮತದಾರರು ಮಣೆ ಹಾಕಲ್ಲ. ಬಂಗಾರಪ್ಪರ ಅಂತ್ಯಕ್ರಿಯೇ ವೇಳೆ ಫ್ಲೆಕ್ಸ್ ಹಾಕಿಕೊಂಡು ಅನ್ಯಾಯ ಮಾಡಿದ್ದನ್ನು ಜನರು ಮರಿತಾರಾ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದ್ರು.
Advertisement
Advertisement
ಕಳೆದ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಗೀತಾ ಈ ಬಾರಿ ಎಲ್ಲಿ ಹೋಗಿದ್ದಾರೆ. ಅವರ ಅಡ್ರೆಸ್ ಇಲ್ಲ ಎಂದು ವ್ಯಂಗ್ಯ ವಾಡಿದ ಕುಮಾರ್ ಬಂಗಾರಪ್ಪ, ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಕುಣಿದವರು ಈ ಬಾರಿ ರಸ್ತೆಗೆ ಬಂದಿಲ್ಲ. ನಾಯಕ ನಟ, ಗೀತಾ ಶಿವರಾಜ್ ಕುಮಾರ್ ಪತಿ ಶಿವರಾಜ್ ಕುಮಾರ್ ವಿರುದ್ಧವೂ ಟೀಕೆ ಮಾಡಿದ್ರು.
Advertisement
ಕಳೆದ ಲೋಕಸಭೆ ಚುನಾವಣೆಯಲ್ಲಿಯೇ ಸರಿಯಾದ ಉತ್ತರ ಜೆಡಿಎಸ್ ಗೆ ಸಿಕ್ಕಿದೆ. ಈ ಬಾರಿ ಎರಡು ಪಕ್ಷಗಳು ನಶಿಸಿ ಹೋಗುವ ಹಂತದಲ್ಲಿದೆ. ಸಮಾಜದ ಮೇಲೆ ಕಾಳಜಿ ಇದ್ದರೆ, ಶರಾವತಿ ಡೆಂಟಲ್ ಕಾಲೇಜಿನ 97 ಎಕರೆ ಜಾಗವನ್ನು ಸಮಾಜಕ್ಕೆ ವಾಪಾಸ್ ನೀಡಿ ಎಂದು ಸವಾಲು ಹಾಕಿದ್ರು.
Advertisement
ಸಮಾಜದ ಆಸ್ತಿಯನ್ನು ಲೇಔಟ್ ಮಾಡಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಕುಮಾರ್, ಸಮಾಜದ ಆಸ್ತಿಯನ್ನು ಮಧು ತಿನ್ನಲು ಹೊರಟಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಬಾರಿ ಚುನಾವಣೆ ನಂತರ 6 ತಿಂಗಳು ಮಧು ಎಲ್ಲಿ ಇದ್ರು ಎಂಬುದೇ ಗೊತ್ತಿಲ್ಲ. ಚುನಾವಣೆ ಅನಿವಾರ್ಯವಾಗಿ ಬಂದಿದೆ ಹೊರತು ಯಾವೊಬ್ಬರ ಕಾರಣದಿಂದಲ್ಲ ಎಂದು ತಿರುಗೇಟು ನೀಡಿದ ಅವರು ಬಂಗಾರಪ್ಪನರ ಸ್ಮಾರಕವನ್ನ ಸರ್ಕಾರ ಘೋಷಣೆ ಮಾಡಬೇಕು ಅಂತ ಒತ್ತಾಯ ಮಾಡಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv