ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಕಾರ್ಯಕರ್ತರಿಗೆ ಧೈರ್ಯ ತುಂಬೋಕೆ ಈ ರೀತಿ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಸದಾಶಿವನಗರದಲ್ಲಿ ಮಾತನಾಡಿದ ಅವರು, ಈ ಎಕ್ಸಿಟ್ ಪೋಲ್ (Exit Poll) ಬಗ್ಗೆ ನಮಗೆ ನಂಬಿಕೆ ಇಲ್ಲ. ನಮ್ಮ ಸಂಖ್ಯೆ ಅದಲ್ಲ ನಮ್ಮ ಸಂಖ್ಯೆ 140. ನಮ್ಮಲ್ಲಿ ಯಾವ ಅಧಿಕಾರ ಹಂಚಿಕೆನೂ ಇಲ್ಲ. ಖರ್ಗೆ ಸಾಹೆಬ್ರು ಏನು ಹೇಳ್ತಾರೆ. ಸೋನಿಯಾ ಗಾಂಧಿ ಏನು ಹೇಳ್ತಾರೆ ಹೈಕಮಾಂಡ್ ಏನು ಹೇಳ್ತಾರೆ ಹಾಗೆ ಅಂದ್ರು.
ಎಕ್ಸಿಟ್ ಪೋಲ್ ಸ್ಯಾಂಪಲ್ ಕಡಿಮೆ ಇದೆ, ನಮ್ಮ ಸ್ಯಾಂಪಲ್ ಜಾಸ್ತಿ ಇದೆ. ಸ್ಪಷ್ಟವಾದ ಬಹುಮತ ಕಾಂಗ್ರೆಸ್‍ಗೆ ಬರುತ್ತದೆ. ಇದು ನಮ್ಮ ಅಚಲವಾದ ನಂಬಿಕೆ. ಶನಿವಾರ 1 ಗಂಟೆ ಒಳಗೆ ಎಲ್ಲಾ ತೀರ್ಪು ಬರಲಿದೆ. ತೆರೆಮರೆಯಲ್ಲಿ ಯಾವ ಸಿದ್ಧತೆಯೂ ಇಲ್ಲಾ. ತೆರೆನೂ ಇಲ್ಲಾ ಮರೆನೂ ಇಲ್ಲಾ ಎಂದು ಹೇಳಿದರು. ಇದನ್ನೂ ಓದಿ: ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ.. ಆದ್ರೆ ಈ ಷರತ್ತು ಅನ್ವಯ – ಹೆಚ್‌ಡಿಕೆ
ಕುಮಾರಸ್ವಾಮಿ ಕಾರ್ಯಕರ್ತರಿಗೆ ಧೈರ್ಯ ತುಂಬೋಕೆ ಮಾತನಾಡಿದ್ದಾರೆ. ನನ್ನ ಪ್ರಾಣ ಇರುವವರೆಗೆ ನಾನು ಹೋರಾಟದಿಂದ ಹಿಂದೆ ಸರಿಯೋನಲ್ಲ. ನನ್ನ ಆರೋಗ್ಯ ಇರುವವರೆಗೆ ಹೋರಾಟ ಮಾಡ್ತೀನಿ. ಅವರು ಬಹುಮತ ಬರದಿದ್ದರೆ ಪಕ್ಷದ ವಿಸರ್ಜನೆ ಮಾಡುವ ಮೊದಲೇ ನಮ್ಮ ಪಕ್ಷ ಸೇರ್ಪಡೆ ಆಗಿ ಅಂತ ಅವರ ಕಾರ್ಯಕರ್ತರಿಗೆ ಕರೆ ನೀಡಿದ್ದೆ. ಈಗಲೂ ಅದನ್ನೇ ಹೇಳ್ತೀನಿ. ಅವರ ಲೆಕ್ಕಾಚಾರ, ರೆಸ್ಟ್ ಅವರ ಆರೋಗ್ಯದ ಬಗ್ಗೆ ನಾನು ಮಾತನಾಡಲ್ಲ ಎಂದು ಡಿಕೆಶಿ ಹೇಳಿದರು.
ಸಿಂಗಾಪುರ್, ದೆಹಲಿ, ಮುಂಬೈ ಎಲ್ಲಿ ಬೇಕಾದರೂ ಹೋಗಬಹುದು. ಅದರ ಬಗ್ಗೆ ನಾನು ಮಾತನಾಡಲ್ಲ. ಕಪ್ ಅವರೇ ಮಡಗಿಕೊಳ್ಳಲಿ. ನಾನು ಶ್ರಮ ಪಟ್ಟಿದ್ದೀನಿ, ನನಗೆ ಸೋನಿಯಾ ಗಾಂಧಿಯವರು ಅಧಿಕಾರ ಯಾವಾಗ ಕೊಟ್ಟರು. ದಿನೇಶ್ ಗುಂಡೂರಾವ್ ಆಗಲ್ಲ ಅಂತ ಕೈ ಬಿಟ್ರು. ಸಿದ್ದರಾಮಯ್ಯ (Siddaramaiah) ಉಪ ಚುನಾವಣೆ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಅಧ್ಯಕ್ಷನಾದೆ ಎಂದು ತಿಳಿಸಿದರು.
ಅವತ್ತಿಂದ ನಾನು ಮಲಗಿಲ್ಲ ಮಲಗೋಕು ಬಿಟ್ಟಿಲ್ಲ. ಪಕ್ಷಕ್ಕೆ ಏನು ಮಾಡಬೇಕೋ ಮಾಡಿದ್ದೇನೆ. ಎಲ್ಲರೂ ನಮಗೆ ಆಶೀರ್ವಾದ ಮಾಡ್ತಾರೆ. ಎಲ್ಲರೂ ನಮಗೆ ಸಹಕಾರ ಕೊಡ್ತಾರೆ. ಹಿರಿಯರಿರಬಹುದು ಕಿರಿಯರಿರಬಹುದು ಒಂದು ಉತ್ತಮವಾದ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಕೊಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು – ಭಾರತದ ಭೇಟಿ ಮರೆಯಲಾಗದ ನೆನಪು ಎಂದ ಇಸ್ರೇಲ್ ಅಧಿಕಾರಿ