ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೊಡ್ಡ ಆಲದಹಳ್ಳಿಯಲ್ಲಿ ಅಕ್ಕಿ ಬೆಳೆದಿರೋದಾ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.
ಅನ್ನಭಾಗ್ಯ ಅಕ್ಕಿಯಲ್ಲಿ (Anna Bhagya Rice) ಬಿಜೆಪಿ ಅವರು ಮಂತ್ರಾಕ್ಷತೆ (Ayodhya Mantrakshate) ಕೊಡುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಬಿಜೆಪಿ ನಮಗೆ ಆಹ್ವಾನ ನೀಡಿಲ್ಲ. ರಾಮನ ಹೆಸರಲ್ಲಿ ಬಿಜೆಪಿ ರಾಜಕೀಯ (Politics) ಮಾಡುತ್ತಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದೇವೇಗೌಡರ ಮೂಲಕ ಟಿಕೆಟ್ ಲಾಬಿ – ಬಿಜೆಪಿ ನಾಯಕರ ಭೇಟಿ ರಹಸ್ಯ ಏನು?
Advertisement
Advertisement
ಜೆಪಿ ಭವನದಲ್ಲಿ ಮಾತನಾಡಿದ ಅವರು, ಇವರು ಅಕ್ಕಿ ದೊಡ್ಡ ಆಲದ ಹಳ್ಳಿಯಲ್ಲಿ ಬೆಳೆದಿದ್ದಾರಾ? ದೊಡ್ಡ ಆಲದ ಹಳ್ಳಿಯಲ್ಲಿ ಬೆಳೆದು ಕಳುಹಿಸಿರುವ ಅಕ್ಕಿಯೇ ಎಂದು ವಾಗ್ದಾಳಿ ನಡೆಸಿದರು.
Advertisement
ರಾಮ ಮಂದಿರಕ್ಕೆ ನಮಗೆ ಆಹ್ವಾನ ನೀಡಿಲ್ಲ ಎಂದ ಡಿಕೆಶಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಅವರನ್ನು ಕರೆಯಬೇಕೇ? ಪ್ರಧಾನಿಗಳು ಈಗಾಗಲೇ ಉದ್ಘಾಟನೆಯಾದ ಬಳಿಕ ಜನರ ದರ್ಶನಕ್ಕೆ ಅವಕಾಶ ನೀಡಿದ ಬಳಿಕ ಯಾರು ಬೇಕಾದರೂ ಬರಬಹುದು ಎಂದು ಹೇಳಿದ್ದಾರೆ. ಯಾರು ಬೇಕಾದ್ರು ಹೋಗಬಹುದು. ಅದಕ್ಕೆ ಅನುಮತಿ ಬೇಕೇ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಏಳು ಸುತ್ತಿನ ಕೋಟೆಯಾದ ಅಯೋಧ್ಯೆ – 30,000 ಯೋಧರು, AI ಕಣ್ಗಾವಲು – ಭದ್ರತೆಗೆ ವಿಶೇಷ ತಂಡಗಳ ನಿಯೋಜನೆ
Advertisement
ಉದ್ಘಾಟನೆ ಕಾರ್ಯಕ್ರಮದಲ್ಲಿ ಜಾಸ್ತಿ ಜನವಾದರೆ ಸಮಸ್ಯೆ ಎಂಬ ಕಾರಣಕ್ಕೆ ನಿರ್ಬಂಧ ಮಾಡಿಕೊಂಡಿದ್ದಾರೆ. ರಾಮನ ಬಗ್ಗೆ ಭಕ್ತಿ ಇರುವವರು ದೇವರ ಬಗ್ಗೆ ನಂಬಿಕೆ ಇರುವವರು ಹೋಗಬಹುದು. ಡಿಕೆಶಿವಕುಮಾರ್ ಮನೆಯಲ್ಲಿ ಬರೀ ದೇವರ ಪೋಟೋಗಳು ಇವೆ. ದೇವರ ರಕ್ಷಣೆ ಇಲ್ಲದೆ ಹೋದರೆ ಅವರು ಉಳಿಯಬೇಕಲ್ಲವಾ? ಅದಕ್ಕೆ ಫೋಟೋಗಳನ್ನು ಹಾಕಿದ್ದಾರೆ. ಅದಕ್ಕೆ ಪಾಪ ಯಾವಾಗಲು ದೇವರು ನೆನಸಿಕೊಳ್ಳುತ್ತಾರೆ ಎಂದು ಡಿಕೆಶಿವಕುಮಾರ್‌ಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.
ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ದೇವೇಗೌಡರು ಹೋಗುವ ಬಗ್ಗೆ ವೈದ್ಯರ ಸಲಹೆ ಪಡೆದು ನಿರ್ಧಾರ ಮಾಡುವುದಾಗಿ ತಿಳಿಸಿದರು.