ಬೆಂಗಳೂರು: ಮಂಡ್ಯ, ಹಾಸನ, ಕೋಲಾರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಮಂಡ್ಯ, ಹಾಸನ, ಕೋಲಾರದಲ್ಲಿ ಜೆಡಿಎಸ್ (JDS) ಸ್ಪರ್ಧೆ ಮಾಡಲಿದೆ ಅಂತ ಸ್ಪಷ್ಟಪಡಿಸಿದರು. ಚುನಾವಣಾ ಉಸ್ತುವಾರಿಗಳು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ರು. ಕೆಲವು ಸೂಚನೆ ಕೊಡೋಕೆ ಕರೆದು ಚರ್ಚೆ ಮಾಡಿದ್ದೇನೆ. ಆ ಸಭೆಯಲ್ಲಿ ನಮ್ಮ ಪ್ರಮುಖರು ಅಭಿಪ್ರಾಯ ಹೇಳಿದ್ದಾರೆ. ನಮ್ಮ ಉದ್ದೇಶ ಇರೋದು ಕಾಂಗ್ರೆಸ್ ಅವರು ಜೆಡಿಎಸ್ ಮುಗಿಸ್ತೀವಿ ಅನ್ನೋ ಹೇಳಿಕೆ. 28 ಕ್ಷೇತ್ರ ಗೆಲ್ತೀವಿ ಅನ್ನೋ ಹೇಳಿಕೆಗಳ ವಿರುದ್ಧ ನಾವು ಗುರಿ ಮುಟ್ಟಬೇಕು. ನಮ್ಮ ಸಹಕಾರ ಇರೋ ರೀತಿ ಬಿಜೆಪಿಯಿಂದಲೂ ಸಹಕಾರ ಇರಬೇಕು. ಅದನ್ನ ಸರಿ ಮಾಡೋ ನಿಟ್ಟಿನಲ್ಲಿ ಕೆಲವು ಸೂಚನೆ ಬಿಜೆಪಿ ಅವರಿಗೆ ನೀಡಬೇಕು ಅಂತ ಕೆಲವರು ಹೇಳಿದ್ದಾರೆ. ಎರಡು ಪಕ್ಷದ ನಾಯಕರ ಸಭೆಗಳು, ಚುನಾವಣೆ ಪ್ರಚಾರದಲ್ಲಿ ಎರಡು ಪಕ್ಷಗಳು ಹೇಗೆ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಹೇಗೆ ಕಾರ್ಯಕರ್ತರು ಕೆಲಸ ಮಾಡಬೇಕು ಅಂತ ಸಲಹೆ ಕೊಡಬೇಕು ಅಂತ ಹೇಳಿದ್ದಾರೆ.
Advertisement
Advertisement
ಉತ್ತರ ಕರ್ನಾಟಕದ (Uttara Karnataka) ಕೆಲವು ಕ್ಷೇತ್ರಗಳ ವಿಜಯಪುರ, ಕಲಬುರಗಿಯಲ್ಲಿ ಬಿಜೆಪಿಗಿಂತ ಜೆಡಿಎಸ್ ಪ್ರಬಲವಾಗಿದೆ. ಇಂತಹ ಕ್ಷೇತ್ರದಲ್ಲಿ ನಮ್ಮ ನಾಯಕರನ್ನ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಇದರ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಆಗಬೇಕು ಅಂತ ಪ್ರಮುಖರು ಹೇಳಿದ್ದಾರೆ. ನಮಗೆ ಗೌರವಯುತವಾಗಿ ನಡೆಸಿಕೊಳ್ಳಬೇಕು, ಕಡೆಗಣಿಸಬಾರದು. ಅದರಿಂದ ಆಗೋ ಎಫೆಕ್ಟ್ ಅನ್ನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಇದೆಲ್ಲವನ್ನೂ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ಸೌಹಾರ್ದಯುತವಾಗಿ ಒಟ್ಟಾಗಿ ಕೆಲಸ ಮಾಡೋ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ ಎಂದರು.
Advertisement
ನಮ್ಮ ಪಕ್ಷದ ಮುಖಂಡರು ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಜೆಡಿಎಸ್ ಗೆ ಏನು ದೊಡ್ಡ ಲಾಭವಿಲ್ಲ ಅಂತ ಹೇಳಿದ್ದಾರೆ. 18 ಕ್ಷೇತ್ರಗಳಲ್ಲಿ JDS ಮತಗಳಲ್ಲಿ 3%-4% ಬಿಜೆಪಿಗೆ ಸ್ವಿಂಗ್ ಆದರೆ 18 ಕ್ಷೇತ್ರ ಬಿಜೆಪಿ ಗೆಲ್ಲಲಿದೆ. ನಮ್ಮ ಪಕ್ಷದ ದುಡಿಮೆ ಬಿಜೆಪಿಗೆ ಅನುಕೂಲ ಆಗುತ್ತದೆ. ಇದನ್ನ ಬಿಜೆಪಿ ಹೈಕಮಾಂಡ್ ಗಮನಕ್ಕೆ ತನ್ನಿ ಅಂತ ಹೇಳಿದ್ದಾರೆ. ಸರಿಯಾಗಿ ನಮ್ಮನ್ನ ಬಳಿಕೆ ಮಾಡಿಕೊಳ್ಳಲಿ. ಇಲ್ಲದೆ ಹೋದರೆ ಮುಂದೆ ಪೆಟ್ಟು ಬಿದ್ದರೆ ಅದರ ಸಾಧಕ-ಬಾಧಕಗಳಿಗೆ ಬಿಜೆಪಿ ಜವಾಬ್ದಾರಿ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳ ಪದಚ್ಯುತಿಗೊಳಿಸಿ ಚುನಾವಣಾ ಆಯೋಗ ಆದೇಶ!
Advertisement
ಸೀಟು ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗೋವರೆಗೂ ಮಾತಾಡಲ್ಲ ನಾವು 6-7 ಸೀಟು ಕೇಳಿಲ್ಲ. ನಾವು ಕೇಳಿರೋದು 3-4 ಸೀಟು ಮಾತ್ರ. ನಮ್ಮ ಶಕ್ತಿ ಅವರಿಗೂ ಗೊತ್ತಿದೆ. 3-4 ಸೀಟು ಕೊಡ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ. 2 ಸೀಟು ತೆಗೆದುಕೊಳ್ಳೋಕೆ ನಾನು ಇಷ್ಟು ಪ್ರಯತ್ನ ಮಾಡಬೇಕಿತ್ತಾ? ಇಷ್ಟೆಲ್ಲಾ ಹೊಂದಾಣಿಕೆ ಬೇಕಾ ನನಗೆ ಅಂತ ಪ್ರಶ್ನೆ ಮಾಡಿದ್ರು. ಹಾನಸ, ಮಂಡ್ಯದಲ್ಲಿ ಸ್ವತಂತ್ರವಾಗಿ ನಮ್ಮ ಅಭ್ಯರ್ಥಿ ಗೆಲ್ತಾರೆ. ತ್ರಿಕೋನ ಸ್ಪರ್ಧೆ ಆದರೆ ಸುಲಭವಾಗಿ ಗೆಲ್ತೀವಿ. ಆದರೆ 18 ಕ್ಷೇತ್ರ ಬಿಜೆಪಿ ಅವರಿಗೆ. ಹೀಗಾಗಿ ಬಜೆಪಿ ಸಂದೇಶ ಕೊಡಬೇಕು ಅಂತ ನಮ್ಮ ನಾಯಕರು ಹೇಳಿದ್ದಾರೆ. ನಮ್ಮ ಶಕ್ತಿ ಧಾರೆ ಎರೆದರೆ ಬಿಜೆಪಿಗೆ ಪ್ಲಸ್ ಆಗೋದು. ಯಾಕಂದರೆ ಕರ್ನಾಟಕದ ರಾಜಕೀಯ ಬೇರೆಯೇ ಇದೆ. ದೇಶದ ರಾಜಕೀಯ ಬೇರೆ ರಾಜ್ಯದ ರಾಜಕೀಯವೇ ಬೇರೆ, ಇದನ್ನ ಹೈಕಮಾಂಡ್ ಗಮನಕ್ಕೆ ತನ್ನಿ ಅಂತ ಹೇಳಿದ್ದಾರೆ ಎಂದರು.
ನಮ್ಮ ಪಕ್ಷದ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಗೊಂದಲಕ್ಕೆ ಎಡೆ ಮಾಡಿಕೊಡದೆ ಒಟ್ಟಾಗಿ ಕೆಲಸ ಮಾಡಿ. ನಮ್ಮ ಗುರಿ ನಾವು ಮುಟ್ಟ ಬೇಕು. ನಮ್ಮ ಗುರಿ ಅಧಿಕಾರ ಅಲ್ಲ. ರಾಜ್ಯದ ಅಭಿವೃದ್ಧಿ ಮಾತ್ರ. 75 ವರ್ಷಗಳಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ಮೈತ್ರಿ ಕಾರಣ ನಮ್ಮ ರಾಜ್ಯದ ಅಭಿವೃದ್ಧಿಗೆ ಪರಿಹಾರ ತರಬೇಕು. ನಿತ್ಯ ಕೇಂದ್ರದ ಮೇಲೆ ಆರೋಪ ಮಾಡುವ ಕಾಂಗ್ರೆಸ್ 45 ವರ್ಷ ರಾಜ್ಯ, ದೇಶ ಆಳಿದೆ. ಕಾಂಗ್ರೆಸ್ ನ ಕೊಡುಗೆ ರಾಜ್ಯಕ್ಕೆ ಏನು? ನಿಮ್ಮಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಇದನ್ನ ಸರಿ ಮಾಡೋಕೆ. ಲೋಕಸಭೆಯಲ್ಲಿ ಧ್ವನಿ ತರಬೇಕು ಅಂತ ಲೋಕಸಭೆಯಲ್ಲಿ ಮಹತ್ವದ ನಿರ್ಣಯ ನಮ್ಮ ಪಕ್ಷ ಮಾಡಿದೆ. ನಾಡಿನ ಜನರಿಗೆ ಮನವಿ ಮಾಡ್ತೀನಿ 28 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳನ್ನ ಗೆಲ್ಲಿಸುವ ಆಶೀರ್ವಾದ ಮಾಡಿ. ಒಂದು ಅವಕಾಶವನ್ನ ದೇವೇಗೌಡರ ಮಾರ್ಗದರ್ಶನದಲ್ಲಿ ನಾವು ಮೈತ್ರಿಗೆ ಸಹಕಾರ ಕೊಡ್ತಿದ್ದೇವೆ. ನಾಡಿಗೆ ಆಗಿರೋ ಅನ್ಯಾಯ ಸರಿ ಮಾಡೋಕೆ ನಾವು ಮೈತ್ರಿ ಆಗಿದ್ದೇವೆ. ರಾಜ್ಯದ ಅನ್ಯಾಯ ಸರಿ ಮಾಡೋದ್ರಲ್ಲಿ ನಾವು ವಿಫಲವಾದರೆ ನೀವು ನಮ್ಮನ್ನ ನೇರವಾಗಿ ನಮ್ಮನ್ನ ಪ್ರಶ್ನೆ ಮಾಡಿ ಎಂದು ಹೇಳಿದರು.