ಮಂಡ್ಯ: ನಾನು ಇನ್ನು ಮುಂದೆ ಕಣ್ಣಲ್ಲಿ ನೀರು ಹಾಕಬಾರದು ಎಂದು ನಿರ್ಧರಿಸಿದ್ದೇನೆ. ನಾನು ಕಟುಕ ಹೃದಯ ಹೊಂದಿಲ್ಲ. ಜನರ ಕಷ್ಟ, ಅನುಕಂಪ ಭಾವನಾತ್ಮಕ ವಿಚಾರ ನೋಡಿದಾಗ ನನ್ನ ಹೃದಯ ಮಿಡಿಯುತ್ತದೆ. ಹಾಗಾಗಿ ಕಣ್ಣೀರು ಹಾಕುತ್ತಿದ್ದೆ ಆದರೆ ಇನ್ನು ಮುಂದೆ ಹಾಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
Advertisement
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಕನಗನಮರಡಿ ಬಸ್ ದುರಂತ ನಡೆಯಿತು. ಅದನ್ನು ನೋಡಿ ನಾನು ಕಣ್ಣಲ್ಲಿ ನೀರು ಹಾಕಿದ್ದೀನಿ. ಕೆಲವರು ಟವಲ್ ನಲ್ಲಿ ಗ್ಲಿಸರಿನ್ ಹಾಕೊಂಡು ಅಳುತ್ತಾರೆ ಅಂತಾರೆ. ಭಾವನಾತ್ಮಕ ವಿಚಾರಗಳು ಬಂದಾಗ ನನ್ನ ಕಣ್ಣಲ್ಲಿ ನೀರು ತರಿಸುತ್ತವೆ ಎಂದು ಎಚ್‍ಡಿಕೆ ಭಾವನಾತ್ಮಕ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದ್ದಕ್ಕೆ ಆತ್ಮ ರಕ್ಷಣೆಗೆ ಗುಂಡಿನ ದಾಳಿ
Advertisement
Advertisement
ನಮ್ಮ ಅಭ್ಯರ್ಥಿ ಪರವಾಗಿ ಶಾಸಕರು ಒಗ್ಗಟ್ಟಿನ ಪ್ರಚಾರ ಮಾಡುತ್ತಿದ್ದಾರೆ. ನಿಖಿಲ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ನಿನ್ನೆ ಜಿಲ್ಲೆಗೆ ಬಂದಿದ್ದರು. ವಿಧಾನಪರಿಷತ್‍ನ 6 ಸ್ಥಾನಗಳಿಗೆ ನಮ್ಮ ಅಭ್ಯರ್ಥಿ ಹಾಕಿದ್ದೇವೆ. ಕೋಲಾರ, ಮೈಸೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಪ್ರಚಾರದಲ್ಲಿ ತೊಡಗಿದ್ದೆ. ಮಂಡ್ಯದಲ್ಲಿ ಪ್ರಚಾರ ನಡೆಸಲು ಸಮಯದ ಅಭಾವವಿದೆ. ನಿನ್ನೆ ಬಿಜೆಪಿ ನಾಯಕರು ಮಂಡ್ಯಕ್ಕೆ ಬಂದು ನೀಡಿದ ಹೇಳಿಕೆ ಗಮನದಲ್ಲಿದೆ. ಬಿಜೆಪಿ ಸಚಿವರ ಶಿಷ್ಯನೇ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ. ದುಡ್ಡಿಗಾಗಿ ಕಾಂಗ್ರೆಸ್ ನಾಯಕರು ಕೈಕಟ್ಟಿ ನಿಂತಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇಂತಹ ಹೀನಾಯ ಪರಿಸ್ಥಿತಿ ಬರಬಾರದಿತ್ತು. 2018ರಲ್ಲಿ ನಾನು ಸಿಎಂ ಆಗಿದ್ದಾಗ ಮಂಡ್ಯ ನಗರದ ಮೂಲಭೂತ ಸೌಕರ್ಯಗಳಿಗೆ ಹಣ ಮೀಸಲಿಟ್ಟಿದ್ದೆ. ಯಾವ ದುಡ್ಡನ್ನು ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ನಮ್ಮ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ. ಮಂಡ್ಯದಲ್ಲಿ 4-5 ಸ್ಥಾನ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮಂಡ್ಯಕ್ಕೆ ಏನು ಮಾಡಿದ್ದಾರೆ ಎಂದು ಇವರು ಜಿಲ್ಲೆಗೆ ಬರುತ್ತಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಅಪ್ಪಾಜಿಗೌಡ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತ. ಅಧಿಕಾರದಲ್ಲಿದ್ದಾಗ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೆಲವರು ಜಾತ್ಯತೀತವಾದಿಗಳು, ಎಲ್ಲಾ ಸಮಾಜಗಳನ್ನು ಗೌರವಿಸುತ್ತಾರೆ ಎನ್ನುತ್ತಾರೆ. ಆದರೆ ಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ಮತ ಕೇಳುತ್ತಾರೆ. ಮಂಡ್ಯ ಜನ ಇವರಿಗೆ ತಕ್ಕ ಉತ್ತರ ಕೊಡುತ್ತಾರೆ. ವಿಧಾನಪರಿಷತ್ ಚುನಾವಣೆ 2023ರ ಚುನಾವಣೆಗೆ ಜೆಡಿಎಸ್‍ಗೆ ಭದ್ರ ಬುನಾದಿಯಾಗಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ನೈತಿಕವಾಗಿ ಗೆದ್ದಿದ್ದೇವೆ. ಕೇವಲ ನಂಬರ್ ಗೇಮ್‍ನಲ್ಲಿ ಸೋತೆವು. ಮಂಡ್ಯ ಜಿಲ್ಲೆಯ ಜನ ನಮ್ಮನ್ನ ಆಗಲೂ ಬೆಂಬಲಿಸಿದ್ದಾರೆ. ಮಂಡ್ಯ ಜಿಲ್ಲೆಯ ಜನ ಹಾಸನಕ್ಕಿಂತೂ ಹೆಚ್ಚಾಗಿ ಜೆಡಿಎಸ್ ಉಳಿಸಿದ್ದಾರೆ. ದೇವೇಗೌಡರ ಸಂಕಷ್ಟ ಸಮಯದಲ್ಲಿ ಕೈ ಹಿಡಿದಿದ್ದಾರೆ. ಎಲ್ಲಾ ಪಕ್ಷ ಸೇರಿ ಹೆಣೆದ ಚಕ್ರವ್ಯೂಹದಲ್ಲಿ ನಿಖಿಲ್ ಸೋತರು. ಆ ಚಕ್ರವ್ಯೂಹದಿಂದ ನಾವು ಆಚೆ ಬರಲಿದ್ದೇವೆ. ಈ ಚುನಾವಣೆಯಲ್ಲಿ ಕುತಂತ್ರದ ರಾಜಕಾರಣಕ್ಕೆ ಉತ್ತರ ಸಿಗಲಿದೆ ಎಂದು ಮಗನ ಸೋಲಿನ ಸೇಡು ತೀರಿಸಿಕೊಳ್ಳುವ ಬಗ್ಗೆ ಕುಮಾರಸ್ವಾಮಿ ಮಾತನಾಡಿದರು. ಇದನ್ನೂ ಓದಿ: ಗಡಿಭಾಗದಲ್ಲಿ ಜನಿಸಿದ ಮಗುವಿಗೆ ಬಾರ್ಡರ್ ಎಂದು ಹೆಸರಿಟ್ಟ ಹೆತ್ತವರು
ನಾನೆಲ್ಲೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿಲ್ಲ. ನಾವು ಅಭ್ಯರ್ಥಿ ಹಾಕದ ಕಡೆ ಬೆಂಬಲ ನೀಡಿ ಎಂದು ಯಡಿಯೂರಪ್ಪ ಕೇಳಿದ್ದಾರೆ. ಆದರೆ ನಾವು ಎಲ್ಲೂ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದಿಲ್ಲ. ನಾವು 6 ಅಭ್ಯರ್ಥಿ ಹಾಕಿರುವ ಕಡೆ ಬಿಜೆಪಿ ಅಭ್ಯರ್ಥಿಗಳು ಸರಿಸಮನಾದ ಹೋರಾಟ ಕೊಡುತ್ತಿದ್ದಾರೆ. ಬಿಜೆಪಿಯವರು ನಮ್ಮ ಶತ್ರುಗಳೇ ಅವರೇನು ನಮ್ಮ ಮಿತ್ರರಲ್ಲ.
ಕೆಆರ್‍ಪೇಟೆ ಗೆಲುವಿನ ಬಳಿಕ ಜೆಡಿಎಸ್ ಮುಳುಗಿಸುತ್ತೇವೆ ಎಂದು ಬಿಜೆಪಿ ನಾಯಕ ಹೇಳುತ್ತಿದ್ದಾರೆ. ನಾವು ಅಭ್ಯರ್ಥಿ ಹಾಕದ ಕಡೆ ಯಡಿಯೂರಪ್ಪ ಸಹಕಾರ ಕೇಳಿದ್ದಾರೆ ಅಷ್ಟೇ. ಬಿಜೆಪಿಯವರು ಯಾರು ಮೈತ್ರಿಯ ಬಗ್ಗೆ ಮಾತನಾಡಿಲ್ಲ, ಕೇವಲ ಸಹಕಾರ ಕೇಳಿದ್ದಾರೆ. 2023ರ ಚುನಾವಣೆಗೂ ಈ ಚುನಾವಣೆಗೂ ಸಂಬಂಧ ಇಲ್ಲ. 2023ರ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ. 224 ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿ ಹಾಕುತ್ತೇವೆ. ಯಡಿಯೂರಪ್ಪ ನನ್ನ ಬಳಿ ವೈಯಕ್ತಿಕ ಮನವಿ ಮಾಡಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಅವರು ನನ್ನ ಸಹಕಾರ ಕೇಳಿಲ್ಲ. ನಾನು ನಾಳೆ ಪತ್ರಿಕಾಗೋಷ್ಠಿ ನಡೆಸಿ ನಿರ್ಧಾರ ಪ್ರಕಟಿಸುತ್ತೇನೆ ಎಂದರು. ಇದನ್ನೂ ಓದಿ: ಹೆಚ್‍ಡಿ.ರೇವಣ್ಣರನ್ನು ರಾವಣನಿಗೆ ಹೋಲಿಸಿ ಜರಿದ ಎಚ್.ಎಂ.ವಿಶ್ವನಾಥ್
ಜೆಡಿಎಸ್ ಪಕ್ಷವನ್ನ ಕುಟುಂಬ ಪಕ್ಷ ಎನ್ನುವ ಸಿದ್ದರಾಮಯ್ಯ, ಡಾಕ್ಟರ್ ಆಗಿದ್ದ ತಮ್ಮ ಮಗನನ್ನ ಯಾಕೆ ರಾಜಕೀಯಕ್ಕೆ ಕರೆತಂದಿದ್ದು. ಈಗಿನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ 8 ಅಭ್ಯರ್ಥಿಗಳನ್ನು ಕುಟುಂಬದಲ್ಲೇ ನಿಲ್ಲಿಸಿದ್ದಾರೆ. ಸಂವಿಧಾನದಲ್ಲಿ ಒಂದು ಕುಟುಂಬದಲ್ಲಿ ಎಷ್ಟು ಜನ ಚುನಾವಣೆಗೆ ಸ್ಪರ್ಧಿಸಬೇಕೆಂಬ ಬಗೆಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಹಾಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಕುಟುಂಬ ರಾಜಕಾರಣದ ಬಗೆಗೆ ಮಾತನಾಡೋದನ್ನು ಬಿಡಬೇಕು ಎಂದು ಗುಡುಗಿದರು.