– ಕರ್ನಾಟಕದಲ್ಲಿರೋದು ದರೋಡೆಕೋರರ ಸರ್ಕಾರ ಎಂದ ಕೇಂದ್ರ ಸಚಿವ
– ರಾಷ್ಟ್ರ ರಾಜಧಾನಿಯಲ್ಲೂ ಮುಡಾ ಹಗರಣ ಸದ್ದು
ನವದೆಹಲಿ: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ಪ್ರತಿಭಟನೆ ಮಾಡಿದ್ರಿ, ಪ್ರತಿಕೃತಿಗೆ ಚಪ್ಪಲಿ ಹಾರಹಾಕಿ ದಹನ ಮಾಡಿದ್ರಿ. ಈಗ ಹೈಕೋರ್ಟ್ ಆದೇಶ ಆಗಿದೆಯಲ್ಲ, ಈಗ ಚಪ್ಪಲಿ ಹಾರ ಯಾರಿಗೆ ಹಾಕಬೇಕು? ಸಿದ್ದರಾಮಯ್ಯ (Siddaramaiah) ಅವರಿಗೆ ಹಾಕಬೇಕಾ? ಇನ್ಯಾರಿಗೆ ಹಾಕ್ತಿರಿ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಕಾಂಗ್ರೆಸ್ ನಾಯಕರ ವಿರುದ್ಧ ಲೇವಡಿ ಮಾಡಿದ್ದಾರೆ.
Advertisement
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್‌ಡಿಕೆ, ಸಿದ್ದರಾಮಯ್ಯ ಅವರಿಗೆ ವಕೀಲರಾಗಿರುವ ಅನುಭವ ಇದೆ. ನೈತಿಕತೆ ಉಳಿಸಿಕೊಂಡು ಬಂದವರಲ್ಲವೇ? ಲೋಕಾಯಕ್ತ ತನಿಖೆಗೆ ಆದೇಶ ಮಾಡಿದಾಗ ಅಧಿಕಾರದಲ್ಲಿ ಉಳಿಬೇಕಾ ಅಂತ ಅವರೇ ಹೇಳಬೇಕು. ಹೈಕೋರ್ಟ್ (Karnataka Highcourt) ಆದೇಶ ನೀಡಿದೆಯಲ್ಲ, ಈಗ ಚಪ್ಪಲಿ ಹಾರ ಯಾರಿಗೆ ಹಾಕಬೇಕು? ಸಿದ್ದರಾಮಯ್ಯ ಅವರಿಗೆ ಹಾಕಬೇಕಾ? ಇನ್ಯಾರಿಗೆ ಹಾಕ್ತಿರಿ? ಎಂದು ಲೇವಡಿ ಮಾಡಿದ್ದಾರೆ.
Advertisement
ಮೂಡಾ ಹಗರಣ (MUDA Scam) ದೇಶದ್ಯಾಂತ ಪ್ರಾಮುಖ್ಯತೆ ಪಡೆದಿದೆ. ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಿನ್ನೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಪ್ರಕರಣ ವರದಿಯನ್ನು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಕಾನೂನು ತಜ್ಞರು ಅನುಭವದ ಆಧಾರದ ಮೇಲೆ ವಿಶ್ಲೇಷಣೆ ಮಾಡ್ತಿದ್ದಾರೆ. ಆದೇಶದ ಪ್ರತಿ ಎಲ್ಲರಿಗೂ ಸಿಕ್ಕಿದೆ. ಆದರೆ ಸಿಎಂಗೆ ಮಾತ್ರ ತೀರ್ಪಿನ ಪ್ರತಿ ಸಿಕ್ಕಿಲ್ಲ, ಓದಿಲ್ಲ ಅಂತಿದ್ದಾರೆ. ಅಲ್ಲದೇ ಕುಮಾರಸ್ವಾಮಿ ರಾಜೀನಾಮೆಯನ್ನೂ ಸಿಎಂ ಕೇಳಿದ್ದಾರೆ. ಅವರೂ ಜಾಮೀನಿನ ಮೇಲೆ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ನನ್ನ ಪ್ರಕರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ಬಹಳ ವ್ಯತಾಸ ಇದೆ. ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರವನ್ನು ಅಸ್ಥಿರ ಮಾಡಲು, ನನ್ನ ವರ್ಚಸ್ಸಿಗೆ ಕಪ್ಪು ಮಸಿ ಬಳೆಯಲು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಹೇಳ್ತಿದ್ದಾರೆ. ನಾನು ಆರೋಪದಿಂದ ಮುಕ್ತನಾಗಿ ಮಾತನಾಡುತ್ತೇನೆ ಎಂದಿದ್ದೆ. ಆದ್ರೆ ಇವತ್ತು ನಿಮ್ಮ ಭಂಡತನ ಏನೂ ಅನ್ನೋದು ತೋರಿಸುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ.
ನನ್ನ ಮೇಲೆ 2 ಕೇಸ್ ಇದೆ:
ಕುಮಾರಸ್ವಾಮಿ ಸರ್ಕಾರಿ ಭೂಮಿ ಹೊಡೆದಿದ್ದೀರಿ ಎಂದು ಎಂದು ಆರೋಪ ಮಾಡ್ತಾರೆ. ಹೀಗಾಗೀ ನನ್ನ ಮೇಲಿನ ಕೇಸ್ ಬಗ್ಗೆ ಹೇಳ್ತಿನಿ. ನನ್ನ ಮೇಲೆ ಎರಡು ಪ್ರಕರಣ ಇದೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣ ಇದೆ ಮತ್ತೊಂದು ಕಾನೂನು ಬಾಹಿರವಾಗಿ ಭೂಮಿ ಹಂಚಿಕೆ ಮಾಡಿದ್ದೆ ಎಂದು ಆರೋಪಿಸಿದ್ದಾರೆ. ಆದರೆ ನಾನು ಅರ್ಜಿ ಹಾಕಿದವರಿಗೆ ಭೂಮಿ ನೀಡಿದ್ದೆ. ಮುಖ್ಯವಾಗಿ ಇನ್ನೂ ಭೂಮಿ ಹಂಚಿಕೆ ಆಗಿಲ್ಲ. ಅಧಿಕಾರಿಗಳು ಮಾಡಿರುವ ತಪ್ಪಿಗೆ ಕುಮಾರಸ್ವಾಮಿ ಮೇಲೆ ಅರ್ಜಿ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಹಾಕಿದ್ದ ಕೇಸ್ ಮೇಲೆ ಅರ್ಜಿ ಹಾಕಿಸಿದ್ರು:
ಸಿದ್ದರಾಮಯ್ಯ ಹುಟ್ಟು ಹೋರಾಟಗಾರರಂತೆ. ಅವರು ಯಾವ ಹೋರಾಟ ಮಾಡಿದ್ದಾರೆ ಇವರು. ಬಳ್ಳಾರಿ ಪಾದಯಾತ್ರೆ ಬಿಟ್ಟು ಇನ್ನೇನು ಹೋರಾಟ ಮಾಡಿದ್ದಾರೆ? ವಿರೋಧ ಪಕ್ಷದ ನಾಯಕರಾಗಿ ಅವರು ಯಾವ ಹೋರಾಟ ಮಾಡಿದ್ದಾರೆ? ನಾನು ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದಕ್ಕೆ ಅವರು ಹಾಕಿಸಿದ್ದ ಕೇಸ್ ಇದು. ಸಿದ್ದರಾಮಯ್ಯ ಬಂದ ಮೇಲೆ ನನ್ನ ಮೇಲಿನ ದ್ವೇಷಕ್ಕೆ ಕೇಸ್ ದಾಖಲಿಸಿದರು. ಬಿಜೆಪಿ ಹಾಕಿದ್ದ ಕೇಸ್ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಸಿದ್ದರಾಮಯ್ಯ ಅರ್ಜಿ ಹಾಕಿಸಿದರು. ಅದನ್ನು ಇಟ್ಟುಕೊಂಡು ಈಗ ರಾಜೀನಾಮೆ ಕೇಳ್ತಿದ್ದಾರೆ. ನಾನೇನು ಸರ್ಕಾರದ ಆಸ್ತಿ ಹೊಡೆದಿದ್ದಿನಾ? ಈಗ ಗಂಗೇನಹಳ್ಳಿ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಇದರಲ್ಲಿ ಯಡಿಯೂರಪ್ಪ ಮತ್ತು ನನ್ನನ್ನು ಸೇರಿಸಿದ್ದಾರೆ. ಇದರಲ್ಲಿ ಕುಮಾರಸ್ವಾಮಿ ಪಾತ್ರ ಏನು? ಗಂಗೇನಹಳ್ಳಿ ಡಿ ನೋಟಿಫಿಕೇಷನ್‌ನಲ್ಲಿ ರಾಜೀನಾಮೆ ಕೇಳ್ತಿದ್ದಾರೆ. ಪ್ರಕರಣ ದಾಖಲಾದಾಗ ಲೋಕಾಯುಕ್ತ ಏನ್ ಮಾಡ್ತಿತ್ತು? ಆ ನಂತರ ನಿಮ್ಮ ಕೇಸ್‌ಗಳನ್ನ ಮುಚ್ಚಿಕೊಳ್ಳಲು ಎಸಿಬಿಗಳನ್ನ ಶುರು ಮಾಡಿದ್ರಿ ಎಂದು ತಿರುಗೇಟು ನೀಡಿದ್ದಾರೆ.
ಗಂಗೇನಹಳ್ಳಿ ಡಿನೋಟಿಕೇಷನ್ ಮಾಡಿಲ್ಲ. ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದೆ ಎಂದು ಕೃಷ್ಣಭೈರೇಗೌಡ ಆರೋಪ ಮಾಡ್ತಾರೆ. ಇದೇಲ್ಲ ಗೊತ್ತಿದ್ದು ನನ್ನ ಮಂತ್ರಿ ಮಂಡಲದಲ್ಲಿ ಯಾಕೆ ಸಚಿವರಾಗಿದ್ದರು? ಈಗ ಜನಪ್ರತಿನಿಧಿಗಳ ನ್ಯಾಯಲಯ ಏನ್ ಹೇಳಿದೆ? 90 ದಿನಗಳಲ್ಲಿ ತನಿಖಾ ವರದಿ ನೀಡಲು ಹೇಳಿದೆ. ನಿನ್ನೆ ಹೈಕೋರ್ಟ್ ತೀರ್ಪಿನಲ್ಲಿ ಟ್ರಯಲ್ ಮುಗಿದು ಚಾರ್ಜ್ ಶೀಟ್ ಫೈಲ್ ಆಗಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ, ಇದು ಕಾನೂನು ಹೋರಾಟ ಮೂಲಕವೇ ಆಗಬೇಕು ಎಂದು ಹೇಳಿದ್ದೆ. ತಪ್ಪು ಮಾಡಿಲ್ಲ ಅಂದರೆ ಕಾನೂನಿನಲ್ಲಿ ರಕ್ಷಣೆ ಪಡೆಯಬಹುದು ಎಂದು ಹೇಳಿದೆ. ನಾನು ರಾಜೀನಾಮೆ ಈಗಲೂ ಕೇಳಿಲ್ಲ. ನಾನು ರಾಜೀನಾಮೆ ಕೇಳುವ ನೈತಿಕತೆ ಇಟ್ಟುಕೊಂಡಿದ್ದೇನೆ ಸಿದ್ದರಾಮಯ್ಯ ಅವರೇ ಎಂದು ಕುಟುಕಿದ್ದಾರೆ.
ನನ್ನ ನೈತಿಕತೆ ಪ್ರಶ್ನೆ ಮಾಡ್ತಿರಾ, ರಿಡೂ ನಲ್ಲಿ ಏನ್ ಮಾಡಿದ್ದಿರಿ? ಅದರಲ್ಲಿ ಎಷ್ಟು ಜನರಿಗೆ ಭೂ ಮಾಲೀಕರಿಗೆ ವಾಪಸ್ ಹೋಗಿದೆ? ಎಷ್ಟು ಜನ ಬಿಲ್ಡರ್ ಗಳಿಗೆ ಭೂಮಿ ಹೋಗಿದೆ? ಇದ್ಯಾವ ನೈತಿಕತೆ? ನಾನು ಆರೋಪದಿಂದ ಮುಕ್ತವಾಗಿ ಬಂದ ಮೇಲೆ ಈ ವಿಷಯದ ಮೇಲೆ ಮಾತನಾಡ್ತಿನಿ. ನಾನು ನೈತಿಕತೆ ಕಳೆದುಕೊಂಡಿದ್ದೇನೆ ಎಂದು ಹೇಳಿಲ್ಲ. ನಿಮ್ಮ ಥರಕ್ಕೆ ಡಿನೋಟಿಫಿಕೇಷನ್ ಮಾಡಿಲ್ಲ. ಬಾಮೈದನ ಹೆಸರಿನಲ್ಲಿ ಭೂಮಿ ತಗೊಂಡಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಕರ್ನಾಟಕದಲ್ಲಿರೋದು ದರೋಡೆಕೋರರ ಸರ್ಕಾರ:
ಕರ್ನಾಟಕದಲ್ಲಿ ಸರ್ಕಾರ ಇದಿಯಾ, ದರೋಡೆಕೋರರ ಸರ್ಕಾರ ಇದು. ಸಿದ್ದರಾಮಯ್ಯ ಸರ್ಕಾರ ಹಿಂದಿನ ಅವಧಿಯಲ್ಲೂ ದರೋಡೆ ಮಾಡಿದೆ. ಈ ಸರ್ಕಾರದಿಂದ ಆಡಳಿತ ನಿರೀಕ್ಷೆ ಮಾಡ್ತಿದ್ದೀರಾ? ನೈತಿಕತೆ ಇಲ್ಲ ಅಂತ ರಾಜೀನಾಮೆ ಕೇಳಿಲ್ಲ ಅಂತ ಅಲ್ಲ. ನಾನು ರಾಜೀನಾಮೆ ಕೇಳುವ ನೈತಿಕತೆ ಇಟ್ಟುಕೊಂಡಿದ್ದೇನೆ. ನಾನು ಆರೋಪ ಮುಕ್ತನಾಗಬೇಕು ಅಂತಾ ಸುಮ್ನೆ ಇದ್ದೇನೆ. ನಾನು ಹಿಟ್ ಆಂಡ್ ರನ್ ಅಲ್ಲ, ವರ್ಗಾವಣೆಗೆ ಎಷ್ಟೇಷ್ಟು ಹಣ ತಗೊಬೇಕು ಎನ್ನುವ ಚರ್ಚೆ ನಡೆದಿದೆ. ಅದರದ್ದೇ ಪೆನ್ ಡ್ರೈವ್ ಇದೆ, ಅದನ್ನೇ ತೋರಿಸಿದ್ದು ಎಂದು ಮತ್ತೆ ಪೆನ್‌ಡ್ರೈವ್ ವಿಚಾರ ಪ್ರಸ್ತಾಪಿಸಿದ್ದಾರೆ.