ಫಾರಿನ್‍ನಿಂದ ಬಂದ ಹೆಚ್‍ಡಿಕೆಯಿಂದ ಮಿಡ್‍ನೈಟ್ ಬಾಂಬ್?: ಮೆಸ್‍ನಲ್ಲಿ ನಡೆದ ಸಭೆಯಲ್ಲಿ YST!

Public TV
2 Min Read
HD KUMARASWAMY

ಬೆಂಗಳೂರು: ಎರಡು ವಾರ ರಾಜ್ಯ ರಾಜಕೀಯ ಗುದ್ದಾಟಕ್ಕೆ ಬಿದ್ದಿದ್ದ ಬ್ರೇಕ್ ತೆರವುಗೊಂಡಿದೆ ಅನ್ಸುತ್ತೆ. ಹೆಚ್‍ಡಿಕೆ (HD Kumaraswamy) ಫಾರಿನ್ ಟೂರ್ ನಿಂದ ವಾಪಸ್ ಬರ್ತಿದ್ದಿದ್ದಂತೆ ಚಾರ್ಜ್‌ಶೀಟ್ ಪಾಲಿಟಿಕ್ಸ್ ಶುರುವಾಗಿದೆ. ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ ನಡುವೆ ಅಸಲಿ ವಾರ್ ಶುರುವಾಗಿದೆ. ಪೊಲೀಸ್ ಮೆಸ್‍ನಲ್ಲಿ ವೈಎಸ್‍ಟಿ (YST) ಹಾಜರ್ ಬಾಂಬ್ ಹೆಚ್‍ಡಿಕೆ ಫ್ರೆಶ್ ಫೈಲ್ಸ್ ಹಾಕಿದ್ದಾರೆ.

ರಾಜ್ಯ ರಾಜಕಾರಣದಲ್ಲಿ 15 ದಿನ ಯುದ್ಧ ವಿರಾಮ. ಫಾರಿನ್‍ನಿಂದ ಬರ್ತಿದ್ದಂತೆ `ಕುಮಾರ’ ಸಮರ ಭರ್ಜರಿಯಾಗಿಯೇ ಶುರುವಾಗಿದೆ. ಸಿಎಂ, ಪರಂ ಸಭೆಯಲ್ಲಿ `ವೈಎಸ್‍ಟಿ ಟ್ಯಾಕ್ಸ್ ಏಕೆ ಇದ್ದರು..? ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್‍ನಲ್ಲಿ ಸಭೆ ನಡೆದಿತ್ತು ಎಂದು ಹೆಚ್‍ಡಿಕೆ ಫ್ರೆಶ್ ಫೈಲ್ಸ್ ಬಿಟ್ಟಿದ್ದಾರೆ. ಹಲವು ಪೊಲೀಸ್ ಇನ್ಸ್ಪೆಕ್ಟರ್‍ಗಳ ವರ್ಗಾವಣೆಗೆ ತಡೆ ಬೆನ್ನಲ್ಲೇ ಹೆಚ್‍ಡಿಕೆ ವೈಎಸ್‍ಟಿ ರಹಸ್ಯ ಬಾಂಬ್ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಪೊಲೀಸ್ ವರ್ಗಾವಣೆ ಸಂಬಂಧ ಸಿಎಂ, ಪರಂ ರಹಸ್ಯ ಸಭೆ ನಡೆಸಿದ್ರು. ರಹಸ್ಯ ಸಭೆ ನಡೆಸಿರುವುದನ್ನ ಸ್ವತಃ ಗೃಹ ಸಚಿವ ಪರಮೇಶ್ವರ್ ಒಪ್ಪಿಕೊಂಡಿದ್ರು. ಆದರೆ ಆ ಸಭೆ ನಡೆದಿದ್ದು ಪೊಲೀಸ್ ಮೆಸ್‍ನಲ್ಲಿ, ವರ್ಗಾವಣೆ ಸಂಬಂಧಿತ ಸಭೆಯಲ್ಲಿ ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್‍ವಿ ಟ್ಯಾಕ್ಸ್ (YST Tax) ನವರು ಏಕೆ ಇದ್ರು..? ಎಂದು ಹೆಚ್‍ಡಿಕೆ ಖಾರವಾಗಿ ಪ್ರಶ್ನಿಸಿದ್ದಾರೆ. ಇದೇ ವೇಳೆ ನಾವು ಕುಟುಂಬ ಸಮೇತ ಹೋಗಿದ್ದು ಯುರೋಪ್ ಪ್ರವಾಸಕ್ಕೆ. ಸರ್ಕಾರ ಬೀಳಿಸಲು ಹೋಗಿದ್ವಿ ಅಂತಾ ಸೃಷ್ಟಿಸಿದ್ದಾರೆ. 19 ಸೀಟ್ ಗೆದ್ದ ನಮ್ ಬಗ್ಗೆ ಭಯ ಎಷ್ಟಿರಬಹುದೆಂದು ಡಿಕೆಶಿಗೂ ಟಾಂಗ್ ಕೊಟ್ಟಿದ್ದಾರೆ.

ಈ ನಡುವೆ ಹೆಚ್‍ಡಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaih) ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಹೀ ಇಸ್ ಆಲ್ವೇಸ್ ಹಿಟ್ ಅಂಡ್ ರನ್ ಎಂದು ವ್ಯಂಗ್ಯವಾಡಿದ್ದಾರೆ. ಪೆನ್ ಡ್ರೈವ್ ಬಗ್ಗೆ ಹೇಳಿದರು. ಜೇಬಲ್ಲಿ ಇಟ್ಕೊಂಡ್ರೆ ಗೊತ್ತಾಗುತ್ತಾ..? ಅದರಲ್ಲಿ ಏನಾದರು ಇದ್ದರೆ ತಾನೆ ಬಿಡೋಕೆ..? ವೈಎಸ್ ಟಿ ಟ್ಯಾಕ್ಸ್ ಹಂಗಂದ್ರೆ ಏನು…!? ಅದೆಲ್ಲಾ ಏನು ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು. ಇನ್ನೊಂದೆಡೆ ಗೃಹ ಸಚಿವ ಪರಮೇಶ್ವರ್ (Parameshwar) ಕೂಡ ಹೆಚ್‍ಡಿಕೆಗೆ ಕೌಂಟರ್ ಆಟ್ಯಾಕ್ ಮಾಡಿ ಅವರು ಸಿಎಂ ಆಗಿದ್ದಾಗ ನಾನು ಗೃಹ ಮಂತ್ರಿ ಆಗಿದ್ದೆ, ಆಗ ಯಾವ ರೀತಿ ಸೂಚನೆ ಕೊಡ್ತಿದ್ರು ಅನ್ನೋದು ನನಗೆ ಗೊತ್ತಿಲ್ವಾ..? ನಾನು ಅದನ್ನ ಯಾವತ್ತು ಹೇಳಿಲ್ಲ, ಅದನ್ನ ಹೇಳೋದು ಸರಿ ಕಾಣಿಸಿಲ್ಲ ಎಂದು ಪರಂ ಟಾಂಗ್ ಕೊಟ್ಟರು. ಇನ್ನೊಂದೆಡೆ ಅಣ್ಣ ಹೇಳ್ತಿರಬೇಕು.. ತಮ್ಮ ಕೇಳ್ತಿರಬೇಕು..! ಬ್ರದರ್‍ಗೆ ಬಂಡೆ ಸಾಫ್ಟ್ ಪಂಚ್..! ಕೊಟ್ಟಿದ್ದಾರೆ. ಐ ಆಮ್ ಎ ಗೌವರ್ನಮೆಂಟ್ ಐ ಸೇ..! ಎಂದು ಹೆಚ್‍ಡಿಕೆ ವಿರುದ್ಧ ಡಿಕೆಶಿ ಚೆಸ್‍ಗೇಮ್ ಚಾಲೂ..! ಮಾಡಿದ್ದಾರೆ.

ಒಟ್ಟಿನಲ್ಲಿ ಹೆಚ್‍ಡಿಕೆ ಫಾರಿನ್ ನಿಂದ ವಾಪಸ್ ಆದ ಬಳಿಕ ಮತ್ತೊಂದು ಚಾಜ್ರ್ಶೀಟ್ ಪಾಲಿಟಿಕ್ಸ್ ಜೋರಾಗಿದ್ದು, ಏಟಿಗೆ ಎದಿರೇಟು ಎಲ್ಲಿಗೆ ಹೋಗಿ ನಿಲ್ಲುತ್ತೋ..? ಕಾದುನೋಡಬೇಕಿದೆ.

Web Stories

Share This Article