ಬೆಂಗಳೂರು: ಕುಮಾರಸ್ವಾಮಿ (HD Kumaraswamy) ಸಿಎಂ ಆಗಿದ್ದಾಗ ಯಥೇಚ್ಚವಾಗಿ ನೀರು ಇತ್ತು. ಡ್ಯಾಮ್ ನಲ್ಲಿ ನೀರು ತುಂಬಿ ನಾವು ಹಿಡಿದುಟ್ಟುಕೊಳ್ಳಲು ಆಗದೇ ನೀರು ಬಿಟ್ಟಿದ್ದು. ಇಂತಹ ಪರಿಸ್ಥಿತಿಯನ್ನ ದೇವರು ನಮಗೆ ಕೊಟ್ಟಿದ್ದ. ಇವರ ಪಾಪದ ಕೆಲಸ ಲೂಟಿ ಹೊಡೆಯೋ ಕೆಲಸದಿಂದ ಪ್ರಕೃತಿ ಇವರಿಗೆ ಸಹಕಾರ ಕೊಡ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Advertisement
ಕಾವೇರಿ ನೀರು (Cauvery Water) ತಮಿಳುನಾಡಿಗೆ ಬಿಟ್ಟ ವಿಚಾರ ಸಂಬಂಧ ಕುಮಾರಸ್ವಾಮಿ ಇದ್ದಾಗಲೂ ನೀರು ಬಿಟ್ಟಿದ್ದಾರೆ ಎಂಬ ಡಿಕೆಶಿ (DK Shivakumar) ಆರೋಪಕ್ಕೆ ಹೆಚ್ಡಿಕೆ ಪ್ರತಿಕ್ರಿಯಿಸಿದರು. ಹೌದು ನೀರು ಬಿಟ್ಟಿದ್ದೇವೆ. ದೇವೇಗೌಡರ ಕಾಲದಲ್ಲೂ ನೀರು ಬಿಟ್ಟಿದ್ದರು. ದೇವೇಗೌಡರು ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ರಿಕ್ವೆಸ್ಟ್ ಮಾಡಿದಾಗ ನೀರು ಬಿಟ್ಟಿದ್ದರು. ದೇವೇಗೌಡರು (HD Devegowda) ನೀರು ಬಿಡುವಾಗ ನಮ್ಮ ರೈತರ ಹಿತಾಸಕ್ತಿ ಮರೆತು ನೀರು ಬಿಟ್ಟಿಲ್ಲ. ಇದನ್ನ ಅರ್ಥ ಮಾಡಿಕೊಳ್ಳಬೇಕು. ಈ ರಾಜ್ಯದಲ್ಲಿ ಕಾವೇರಿ ಬಗ್ಗೆ ಹೋರಾಟದ ಮಾಡಿದ ಯಾವುದಾದ್ರು ರಾಜಕಾರಣಿ ಇದ್ದರೆ ಅದು ದೇವೇಗೌಡರು ಮಾತ್ರ. ನಾಡಿನ ರೈತರ ಹಿತರಕ್ಷಣೆಗೆ ಹೋರಾಟ ಮಾಡಿದ್ದು ದೇವೇಗೌಡರು. ಅವರ ಬಗ್ಗೆ ಚರ್ಚೆ ಮಾಡೋ ನೈತಿಕತೆ ಅವರಿಗೆ ಇಲ್ಲ ಎಂದು ಹೆಚ್ಡಿಕೆ ಕಿಡಿಕಾರಿದರು.
Advertisement
Advertisement
ದೇವೇಗೌಡರ ಸಲಹೆಯಿಂದ 14 ಟಿಎಂಸಿ ನೀರು ನಮಗೆ ಸಿಕ್ಕಿದೆ. ನನ್ನ ಕಾಲದಲ್ಲಿ ಅವರು ಕೊಟ್ಟ ಸಲಹೆಯಿಂದ ನಮಗೆ 14 TMC ನೀರು ಹೆಚ್ಚಾಗಿ ಸಿಕ್ತು ಎಂದರು. ಇದೇ ವೇಳೆ ಮೇಕೆದಾಟು ಯೋಜನೆ ವಿಚಾರದ ಕುರಿತು ಪರತಿಕ್ರಿಯಿಸಿ, ಮೇಕೆದಾಟುದ್ದು ಏನ್ ಮಾಡ್ತಾರೆ. ಚಿಕನ್ ತಿಂದುಕೊಂಡು, ಚಿಕನ್ ಲೆಗ್ ತಿಂದುಕೊಂಡು ಪಾದಯಾತ್ರೆ ಮಾಡಿದ್ದು ಅಷ್ಟೇ ಗ್ಯಾರಂಟಿ. ಅಧಿಕಾರಕ್ಕೆ ಬಂದಿದ್ದಾರೆ ಈಗ ಏನ್ ಮಾಡ್ತಾರೆ? ಸ್ಟಾಲಿನ್ ನಿಮ್ಮ ಪಾಟ್ರ್ನರ್ ಅಲ್ಲವಾ ಅವರನ್ನ ಒಪ್ಪಿಸಿ ಈಗ. ಕೊಟ್ಟು ತೆಗೆದುಕೊಳ್ಳೋ ನೀತಿ ಮಾಡಿದ್ದೀರಾ ಒಪ್ಪಿಸಿ ಈಗ ಅವರನ್ನ. ನಾನು ಹೇಳಿದ ಮೇಲೆ ಸರ್ವ ಪಕ್ಷ ಸಭೆ ಕರೆಯುತ್ತೇನೆ ಅಂತ ಅವರು ಹೇಳ್ತಿದ್ದಾರೆ. ವಾಟರ್ ಮ್ಯಾನೇಜ್ಮೆಂಟ್ ಬೋರ್ಡ್ ಅವರು ನೀರು ಬಿಡು ಅಂತ ಹೇಳಿದ್ದಾರಾ ಎಂದು ಪ್ರಶ್ನಿಸಿದರು.
Advertisement
ಸುಪ್ರೀಂಕೋರ್ಟ್ ಕೂಡಾ ಡೈರೆಕ್ಷನ್ ಕೊಟ್ಟಿಲ್ಲ. ತಮಿಳುನಾಡಿನವರು ಸುಪ್ರೀಂಕೋರ್ಟ್ (Supreme Court) ನಲ್ಲಿ ಅರ್ಜಿ ಹಾಕಿದ ಮೇಲೆ ನೀವೇನು ಮಾಡ್ತಿದ್ದೀರಾ. 130 ಪೇಜ್ ಅರ್ಜಿ ತಮಿಳುನಾಡಿ ಹಾಕಿದೆ. ನಮ್ಮವರು ಯಾರೆ ಇದನ್ನೆ ಕೌಂಟರ್ ಆಗಿ ಅರ್ಜಿ ಹಾಕಿಲ್ಲ. ನೀವೇ ನೀರು ಬಿಡೋ ನಿರ್ಧಾರ ಮಾಡಿದ್ದು ಯಾಕೆ?, ನಾವು ತೋರಿಸೋ ಔದಾರ್ಯ ಅವರಲ್ಲಿ ಇದೆಯಾ?, 4 ಲಕ್ಷ ಹೆಕ್ಟೇರ್ ಬೆಳೆ ಹೆಚ್ಚು ಮಾಡಿಕೊಂಡು ಅವರು ನೀರು ಕೇಳಿದ್ರೆ ಕೊಡೊಕೆ ಆಗುತ್ತಾ?, ನಮ್ಮ ರೈತರು ಇನ್ನು ಮೊದಲ ಬೆಳೆಗೆ ನಾಟಿ ಮಾಡಲು ಆಗಿಲ್ಲ. ಇದು ನಮ್ಮ ಪರಿಸ್ಥಿತಿ ಎಂದರು.
ಕುಮಾರಸ್ವಾಮಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ವಿರೋಧ ಪಕ್ಷದಲ್ಲಿ ಇರೋದೇ ರಾಜಕೀಯ ಮಾಡೋಕೆ. ಕಾಂಗ್ರೆಸ್ ಅವರು ಮಾಡ್ತಿರೋದು ರಾಜಕೀಯನೇ. ತಮಿಳುನಾಡಿನವರಿಗೆ, ಸ್ಟಾಲಿನ್ ಗೆ ರೆಡ್ ಕಾರ್ಪೆಟ್ ಹಾಕಿ ಕುಳಿತಿದೆ ಈ ಸರ್ಕಾರ. ನಮ್ಮ ನಾಡಿನ ಜನರ, ರೈತರ ರಕ್ಷಣೆ ಮಾಡಬೇಕಾದ ಸರ್ಕಾರ ಅವರಿಗೆ ಔದಾರ್ಯ ತೋರಿಸುತ್ತಿದ್ದಾರೆ. ಅದನ್ನ ನಮ್ಮ ರೈತರಿಗೆ ತೋರಿಸಿ. ನಿಮ್ಮ ಕೃಷಿ ಸಚಿವರು ಬಿತ್ತನೆ ಮಾಡಿರೋ ಬೆಳೆ ಕೂಡಾ ಹಾಳಾಗುತ್ತೆ ಅಂತ ಹೇಳಿದ್ದಾರೆ. ಈ ಪರಿಸ್ಥಿತಿ ಇದ್ದಾಗ ನೀವೇನು ಮಾಡ್ತಿದ್ದೀರಾ. ಪೆನ್ನು ಕೊಡಿ ನನಗೆ ಅಂತ ಡಿಕೆಶಿವಕುಮಾರ್ ಕೇಳುತ್ತಿದ್ದರು. ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಡೋದಕ್ಕೆ ಪೆನ್ನು ಕೇಳಿದ್ರಾ ನೀವು ಎಂದು ಡಿಕೆಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ತಮಿಳುನಾಡಿನ (Tamilnadu) ಅರ್ಜಿ ವಿರುದ್ದ ಸುಪ್ರೀಂಕೋರ್ಟ್ ಲೀಗಲ್ ಫೈಟ್ ಮಾಡಬೇಕು. ಅಮೇಲೆ ನೀರು ಬಿಡಬೇಕಾ ಬೇಡವಾ ನೋಡೋಣ. ತಮಿಳುನಾಡಿನವರು ಈಗ ಅರ್ಜಿ ಹಾಕಿ ಮತ್ತೆ ಅರ್ಜಿ ಹಾಕಿ 25 TMC ನೀರು ಕೇಳ್ತಾರೆ. ಆಗ ಏನು ಮಾಡ್ತೀರಾ ಎಮದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಅವರು ನನ್ನ ಕೈಯಲ್ಲಿ ಕಾವೇರಿ ಕೀ ಇರಲಿಲ್ಲ ಅಂತ ಹೇಳಿದ್ರು ಅನ್ನೋ ಚೆಲುವರಾಯಸ್ವಾಮಿ (Chaluvarayaswamy) ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಯಾವಾಗ ಹಾಗೆ ಹೇಳಿದ್ದೆ. ಅಂತಹ ಪರಿಸ್ಥಿತಿಯೇ ನನಗೆ ಬಂದಿರಲಿಲ್ಲ. 2006 ರಲ್ಲಿ, 2018 ರಲ್ಲಿ ನಮಗೆ ಅ ಪರಿಸ್ಥಿತಿ ಬಂದಿರಲಿಲ್ಲ. ರೈತರು ಬೆಳೆ ಬೆಳಿಬೇಡ ಅಂತ ಸಚಿವರು ಹೇಳಿದ್ದಾರೆ. ನಮ್ಮ ರೈತರು ಬೆಳೆ ಬೆಳೆಯೋದು ಬೇಡ ತಮಿಳುನಾಡಿನವರು ಬೆಳೆದ ಅಲ್ಲಿಂದ ನಾವು ಖರೀದಿ ಮಾಡೋಣ ಅಂತ ಸಚಿವರು ಹೇಳಿದ್ದಾರೆ ಎಂದು ಚೆಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Web Stories