ಬೆಂಗಳೂರು: ಕುಮಾರಸ್ವಾಮಿ (H.D.Kumaraswamy) ಸರ್ಕಾರ ಪತನ ಆಗುವಾಗ ನನಗೆ ಸಿಎಂ ಆಗುವ ಅವಕಾಶ ಇತ್ತು. ಆದರೆ ಕುಮಾರಸ್ವಾಮಿ ಮಾತೇ ಆಡಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದ ಅವಧಿಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಶಾಸಕರು ಮುಂಬೈನಲ್ಲಿ ಇದ್ದಾಗ ಗೋಪಾಲಯ್ಯ ಹಾಗೂ ಎಸ್.ಟಿ.ಸೋಮಶೇಖರ್, ಕುಮಾರಸ್ವಾಮಿಗೆ ಕರೆ ಮಾಡಿ ಹೇಳಿದ್ದರು. ಡಿಕೆಶಿಯನ್ನ ಸಿಎಂ ಅಂತ ಘೋಷಣೆ ಮಾಡಿದರೆ ಬರ್ತೀವಿ ಅಂತ ಹೇಳಿದ್ದರು. ಇವರು ಅವಾಗ್ಲೆ ಬಾಯಿ ಬಿಡಲಿಲ್ಲ. ಕುಮಾರಸ್ವಾಮಿ ಈಗ ಹೇಳ್ತಾರೆ. ನಾನು ಸಿಎಂ ಆದರೆ 19 ಶಾಸಕರನ್ನ ಒಪ್ಪಿಸ್ತಾರೆ ಅಂತ. ಜನರೇನು ಅಷ್ಟು ದಡ್ಡರ ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಎಲ್ಲರೂ ಒಗ್ಗಟ್ಟಾಗಿ ಹೋದರೆ ರಾಜ್ಯದಲ್ಲಿ 28 ಎಂಪಿ ಸ್ಥಾನ ಗೆಲ್ಲಬಹುದು: ಬೊಮ್ಮಾಯಿ
Advertisement
Advertisement
ನಾವು (ಕಾಂಗ್ರೆಸ್) ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ವಿ. ಜಾತ್ಯತೀತ ಸಿದ್ಧಾಂತ ಇತ್ತು ಅಂತ. ಆದರೆ ಯಾರು ಸರ್ಕಾರವನ್ನ ತೆಗೆದರೋ ಅವರ ಜೊತೆ ಕುಮಾರಸ್ವಾಮಿ ಹೋಗ್ತಾರೆ. ಅವರ ಜೊತೆ ಹೊಂದಾಣಿಕೆ ಆಗಿದೆ ಅಂತ ಹೋಗ್ತಾರೆ. ಸಂಸಾರ ಮಾಡ್ತಾರೆ, ರಾಜಕಾರಣ ಮಾಡ್ತಾರೆ. ನಾವು ಅಧಿಕಾರ ಮಾಡ್ತ ಇರೋದು ನಿಮ್ಮ ಕೈಯಲ್ಲಿ. ತಡೆದುಕೊಳ್ಳೋಕೆ ಆಗ್ತಾ ಇಲ್ಲ. ನೀವು ಆಡಳಿತ ಮಾಡುವಾಗ ನಾವು ಬಿಡಲಿಲ್ವಾ. ಅಸೂಯೆಗೆ ಮದ್ದಿಲ್ಲ. ಅರಣ್ಯ ಸಚಿವರಾಗಿದ್ದಾಗ ಆದಿ ಚುಂಚನಗಿರಿ ಶ್ರೀಗಳ ಮೇಲೆ ಯಾಕೆ ಕೇಸು ಹಾಕಬೇಕಾಯ್ತು ಅನ್ನೋದನ್ನ ಚನ್ನಿಗಪ್ಪ ನನ್ನ ಬಳಿ ಹೇಳಿಕೊಂಡಿದ್ದರು ಎಂದು ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.
Advertisement
Advertisement
ಅಕ್ರಮ ವಿದ್ಯುತ್ ಸಂಪರ್ಕದ ವಿಚಾರ ಕುರಿತು ಮಾತನಾಡಿ, ಕುಮಾರಸ್ವಾಮಿ ಅವರೇ ಮಾಡಿದ್ದಾರೆ ಅಂತ ನಾನು ಹೇಳಲು ತಯಾರಿಲ್ಲ. I dont won’t comment on that. ಯಾರೋ ಕಾರ್ಯಕರ್ತರು ಇಲ್ಲಾಂದ್ರೆ ಯಾರು ಏನೋ ಮಾಡಿದ್ದಾರೋ ಗೊತ್ತಿಲ್ಲ. ಯಾರು ಮಾಡಿದ್ರು ಅದು ಸರಿ ಇಲ್ಲ. ಕುಮಾರಸ್ವಾಮಿ ಅವರೇ ಮಾಡಿದ್ದಾರೆ ಅಂತ ನಾನು ಹೇಳಲು ತಯಾರಿಲ್ಲ. Bcoz i don’t know. ಅವರು ಹೇಳಿದಂತೆ ಯಾರೋ ಸಿಬ್ಬಂದಿ ಮಾಡಿರಬಹುದು. ಅದನ್ನ ಅವರು ಒಪ್ಪಿಕೊಂಡಿದ್ದಾರೆ. ಅದು ಅವರ ದೊಡ್ಡತನ. ಯಾರೋ ತಪ್ಪು ಮಾಡಿದ್ದಾರೆ. ಅದನ್ನ ಅವರು ಒಪ್ಪಿಕೊಂಡಿದ್ದಾರೆ. ಹತಾಶರಾಗಿ ಕಲವೊಂದು ವಿಚಾರ ಮಾತನಾಡ್ತಾರೆ. ಅದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳಲ್ಲ. ಎಫ್‌ಐಆರ್ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಅವರೇ ಫೈನ್ ಕಟ್ಟುತ್ತೇನೆ ಅಂತ ಹೇಳಿದ್ದನ್ನ ನಾನು ಟಿವಿಯಲ್ಲಿ ನೋಡಿದೆ ಎಂದು ಡಿಕೆಶಿ ತಿಳಿಸಿದ್ದಾರೆ. ಇದನ್ನೂ ಓದಿ: ಕೆಇಎ ಪರೀಕ್ಷೆಯಲ್ಲಿ ಹಿಜಬ್ ಧರಿಸಲು ಅವಕಾಶ – ಸರ್ಕಾರದ ನಡೆಗೆ ಭಾರೀ ಆಕ್ರೋಶ