ತುಮಕೂರು: ನಿಮ್ಮಿಂದ ಬೆಳೆದಿರೋದು ನಾವು ಎಂದು ಹೇಳಿ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿದ್ದಾರೆ.
ಗುಬ್ಬಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಂಪರ್ಕ ಮುಗ್ಧ ಹಳ್ಳಿಗಳ ಜನರೊಂದಿಗೆ. ನಿಮ್ಮಿಂದ ನಾವು ಬೆಳೆದಿದ್ದೇವೆ. ನಮ್ಮ ಕುಟುಂಬದಲ್ಲಿ ದುಡ್ಡು ಇಟ್ಟುಕೊಂಡು ರಾಜಕಾರಣ ಮಾಡಿಲ್ಲ. ನಿಮ್ಮಂಥಹ ಲಕ್ಷಾಂತರ ಜನರ ಬೆಂಬಲ ಇಟ್ಟುಕೊಂಡು ರಾಜಕಾರಣ ಮಾಡಿದ್ದೇವೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸೋದೇ ಸಿದ್ದು & ಟೀಂನ ಉದ್ದೇಶ: ಹೆಚ್‍ಡಿಕೆ ಕಿಡಿ
ಲಕ್ಷಾಂತರ ಕಾರ್ಯಕರ್ತರಿಂದ ನಾವು ಕೆಲಸ ಮಾಡಿದ್ದೇವೆ. ದುಡ್ಡಿನ ವ್ಯವಹಾರ ನಡೆಸಿ ನಾವು ಅಧಿಕಾರಕ್ಕೆ ಬಂದಿಲ್ಲ. ಒಮ್ಮೆ ರಾತ್ರಿ 10 ಗಂಟೆಗೆ ಈ ನಮ್ಮ ಸ್ನೇಹಿತರು ನಾನೇ ತಪ್ಪು ಮಾಡಿದ್ದೇನೆ ಎಂದು ಆರೋಪಿಸಿದರು. ನಾನೇ ತಪ್ಪು ಮಾಡಿದ್ದೇನೆ ಎಂದು ಕೆಲವರು ಪಂಚಾಯಿತಿಯನ್ನು ಮಾಡಿದ್ದಾರೆ. ಅದು ಏಕೆ? ಹಣಕಾಸಿನ ವಿಚಾರದಲ್ಲಿಯೇ ಈ ರೀತಿ ಪಂಚಾಯಿತಿಯಾಗಿದೆ ಎಂದರು. ಇದನ್ನೂ ಓದಿ: ಆಟೋ ಚಾಲಕರನ್ನ ಅವಾಚ್ಯ ಪದಗಳಿಂದ ನಿಂದಿಸಿದ ಸಿವಿಲ್ ಪೊಲೀಸ್
ನಾವು ನಿಮ್ಮ ಆಶೀರ್ವಾದದಿಂದ ಕೆಲಸ ಮಾಡಿರೋರು ಎಂದು ಹೇಳುತ್ತಾ ಅವರು ಪಕ್ಷ ಕಟ್ಟಿದನ್ನು ನೆನೆದು ಕುಮಾರಸ್ವಾಮಿ ಭಾವುಕರಾದರು.