ಹಾಸನ: ಜಮೀರ್ ಅಹ್ಮದ್‍ಗೆ ನಮ್ಮ ಸುದ್ದಿ ಬೇಡ. ಕುಮಾರಸ್ವಾಮಿ ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದವರು ಕನಸಲ್ಲಿ ಕಂಡರೂ ಆಗಲ್ಲ ಎಂದು ಜಮೀರ್ ಹೇಳಿಕೆಗೆ ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ರೇವಣ್ಣ ಉಪಮುಖ್ಯಮಂತ್ರಿ ಆಗುವುದದನ್ನೇ ಕುಮಾರಸ್ವಾಮಿ ಸಹಿಸಲಿಲ್ಲ ಎಂಬ ಜಮೀರ್ ಹೇಳಿಕೆಗೆ ಹಾಸನದಲ್ಲಿ ಆಕ್ರೋಶ ಹೊರಹಾಕಿದ ಅವರು, ಪ್ರಾದೇಶಿಕ ಪಕ್ಷವಾದ ನಾವು ಒಬ್ಬರು ಸಾಬ್ರನ್ನು ಅಧ್ಯಕ್ಷರನ್ನಾಗಿ ಮಾಡಿ, ಕೇಂದ್ರದ ಮಂತ್ರಿ ಮಾಡಿದ್ದೇವೆ. ಇವರು ಇಬ್ರಾಹಿಂ ಬಳಿ ಕೆಲಸ ಮಾಡಿಸಿಕೊಂಡು ಎಂಎಲ್‍ಸಿ ಮಾಡಲು ಎಷ್ಟು ಗೋಳು ಹೊಯ್ದುಕೊಂಡಿದ್ದಾರೆ ಗೊತ್ತು. ಅವರಿಗೆ ಒಂದು ಮಾತು ಹೇಳ್ತೀನಿ, ಅವರಿಗೆ ನಮ್ಮ ಸುದ್ದಿ ಬೇಡ. ಕುಮಾರಸ್ವಾಮಿ ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಅವರು ಕನಸಲ್ಲಿ ಕಂಡರೂ ಆಗಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ
ಉಪ ಮುಖ್ಯಮಂತ್ರಿ ಆಗಬೇಕು ಎಂದರೆ ನಾನು ಕುಮಾರಸ್ವಾಮಿ ಕುಳಿತು ಮಾತನಾಡುತ್ತೇವೆ. ಕುಮಾರಣ್ಣಂದು ಏನು, ರೇವಣ್ಣಂದು ಏನು ಗೊತ್ತಿದೆ? ಕಾಲ ಬಂದಾಗ ಕುಮಾರಣ್ಣ ಸ್ಥಾನಮಾನ ಕೊಡುತ್ತಾನೆ. ಆದರೆ ನನ್ನನ್ನು ಉಪಮುಖ್ಯಮಂತ್ರಿ ಮಾಡೋಕೆ ಕಾಂಗ್ರೆಸ್‍ನವರು ಬಿಡಲಿಲ್ಲ. 17 ಜನರನ್ನು ಕರೆದುಕೊಂಡು ಹೋದರು. ಕುಮಾರಸ್ವಾಮಿ ಮಗನನ್ನು, ದೇವೇಗೌಡರನ್ನು ಸೋಲಿಸಿದ್ರು ಎಂದು ರೇವಣ್ಣ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲರ್: ಜಮೀರ್ ವಾಗ್ದಾಳಿ