ಈಗಾಗಲೇ ಎರಡು ಬಾರಿ ಚುನಾವಣೆಯಲ್ಲಿ (Election) ಸೋತಿರುವ ನಿಖಿಲ್ ಕುಮಾರ್ (Nikhil Kumar) ಗೆ ಅತ್ಯುತ್ತಮ ಸಲಹೆಯೊಂದನ್ನು ನೀಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy). ನಿಖಿಲ್ ಗೆ ರಾಜಕೀಯ ಸಹವಾಸ ಬೇಡ. ಅವರು ಸಿನಿಮಾ (Cinema) ರಂಗದಲ್ಲೇ ಮುಂದುವರೆಯಲಿ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ‘ನಿಖಿಲ್‌ಗೆ ರಾಜಕೀಯದ ಸಹವಾಸ ಹೋಗಬೇಡ ಅಂತ ಹೇಳಿದ್ದೇನೆ. ಭಗವಂತ ಕೊಟ್ಟಿರೋ ಕಲೆಯಲ್ಲೇ ಮುಂದುವರೆಯುವಂತೆ ಹೇಳಿದ್ದೇನೆ. ಹಾಗಾಗಿ ಮುಂದಿನ ಐದು ವರ್ಷ ನಿಖಿಲ್ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ’ ಎಂದು ಹೇಳಿದರು. ಇದನ್ನೂ ಓದಿ:ಬಹುಕಾಲದ ಗೆಳತಿ ಜೊತೆ ಎಂಗೇಜ್ ಆದ ಸಿಂಗರ್ ಅರ್ಮಾನ್ ಮಲಿಕ್
‘ದಯವಿಟ್ಟು ರಾಜಕೀಯ ಜಂಗುಳಿ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ಹೇಳಿದ್ದೇನೆ. ನಿಖಿಲ್ ಚುನಾವಣೆಗೆ ನಿಲ್ಲುವ ಪ್ರಶ್ನೆ ಇಲ್ಲ. ಈಗಾಗಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಸಿನಿಮಾ ಮಾಡಲು ನಿಖಿಲ್ ಮುಖ ಮಾಡಿದ್ದಾರೆ. ಮಂಡ್ಯ ಎಂಪಿಗೆ ನಿಲ್ಲುವಾಗಲೂ ಬೇಡ ಅಂದಿದ್ದೆ. ನಿಖಿಲ್ ಮಂಡ್ಯದಲ್ಲಿ ನಿಲ್ಲಲು ತಯಾರು ಇರಲಿಲ್ಲ. ಶಾಸಕರು ಹಾಗೂ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ತಲೆ ಕೊಟ್ಟ’ ಎನ್ನುವುದು ಕುಮಾರಸ್ವಾಮಿ ಮಾತು.
ಮುಂದುವರೆದು ಮಾತನಾಡಿದ ಅವರು, ‘ಸೋಲು ಗೆಲುವು ಇರುತ್ತೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ. ಜನಾಭಿಪ್ರಾಯ ಏನು ಇದೆ ಅದಕ್ಕೆ ತಲೆಬಾಗಬೇಕು. ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ. ಸದ್ಯಕ್ಕೆ ನಿಖಿಲ್‌ಗೆ ರಾಜಕೀಯ ಬೇಡಾ ಅಂತಾ ಹೇಳಿದ್ದೇನೆ. ಮುಂದೆ ನೋಡೋಣ, ಅವನ ಹಣೆಯಲ್ಲಿ ಬರೆದಿದ್ರೆ ನಾನು ತಪ್ಪಿಸೋಕೆ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನ ಜೀವನ ರೂಪಿಸಿಕೋ ಎಂದು ನಿಖಿಲ್‌ಗೆ ಹೇಳಿದ್ದೇನೆ. ಭಗವಂತ ನಿಖಿಲ್‌ಗೆ ಒಂದು ಕಲೆ ಕೊಟ್ಟಿದ್ದಾನೆ. ಆ ಕಲೆಯಲ್ಲಿ ಮುಂದುವರೆಯಪ್ಪಾ ಅಂತಾ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷ ಚುನಾವಣೆಗೆ ಬರಲ್ಲ. ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಇದೀಗ ಅದೇ ಜನ ಪಶ್ಚಾತ್ತಾಪ ಪಡುವಂತೆ ಆಗಿದೆ. ಇದೇ ರಾಮನಗರದ ಜನರು ಎಲ್ಲಾ ನೋಡ್ತಾ ಇದ್ದಾರೆ. ರಾಮನಗರವನ್ನು ಹೇಗೆ ಉದ್ಧಾರ ಮಾಡ್ತಾ ಇದಾರೆ ಅಂತಾ ನೋಡ್ತಾ ಇದೀನಿ’ ಎಂದರು.
Web Stories