ಕೋಲ್ಕತ್ತಾ: ದೇಶದ ಟಾಪ್ 10 ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕುಮಾರ ಮಂಗಲಂ ಬಿರ್ಲಾ ಅವರ ಪುತ್ರ ಆರ್ಯಮನ್ ರಣಜಿ ಟ್ರೋಫಿಯಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ರಣಜಿ ಟೂರ್ನಿಯಲ್ಲಿ ಮಧ್ಯಪ್ರದೇಶದ ಪರ ಆಡುತ್ತಿರುವ 21 ವರ್ಷದ ಆರ್ಯಮನ್ ಎಡಗೈ ಬ್ಯಾಟ್ಸ್‍ಮನ್ ಆಗಿದ್ದು, ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಬಂಗಾಳ ತಂಡದ ವಿರುದ್ಧದ ಪಂದ್ಯದಲ್ಲಿ 189 ಎಸೆತಗಳನ್ನು ಎದುರಿಸಿ 103 ರನ್ ಸಿಡಿಸಿ ಅಜೇಯರಾಗಿ ಉಳಿದರು.
Advertisement
Aryaman Birla, son of Kumar Mangalam Birla (chairman of the Aditya Birla Group), registers his maiden first-class century for Madhya Pradesh against Bengal at the Eden Gardens!#BenvMP#RanjiTrophy
— Mohandas Menon (@mohanstatsman) November 15, 2018
Advertisement
ಪಂದ್ಯದ ಬಳಿಕ ಮಾತನಾಡಿದ ಆರ್ಯಮನ್ ಚೊಚ್ಚಲ ಶತಕದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಕುಟುಂಬ ಹೆಸರು ಹೊರತು ಪಡಿಸಿ ನನ್ನ ಹೆಸರಿನಲ್ಲಿ ಗುರುತಿಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದರು. ಅಲ್ಲದೇ ಅಂಡರ್ 23 ರ ಹಂತದಲ್ಲಿ ತೋರಿದ ಪ್ರದರ್ಶನದ ಫಲವಾಗಿ ನನಗೆ ರಣಜಿ ಟ್ರೋಫಿಯಲ್ಲಿ ಅವಕಾಶ ಲಭಿಸಿದೆ. ಯಾರೇ ಆದರೂ ಒಂದು ನಿರ್ದಿಷ್ಟ ಕುಟುಂಬದಲ್ಲಿ ಜನಿಸುತ್ತಾರೆ. ಆದರೆ ಅದು ಅವರಿಗೆ ಅಡ್ಡಿಯಾಗುವುದಿಲ್ಲ. ಜೀವನದಲ್ಲಿ ಸಾಧನೆ ಮಾಡಲು ಇಂತಹದ್ದೇ ನಿಯಮ ಎಂಬುವುದಿಲ್ಲ. ಕಳೆದ ಐದು ವರ್ಷಗಳಿಂದ ನಾನು ಕ್ರಿಕೆಟ್ ಆಡುತ್ತಿದ್ದೇನೆ. ನನಗೆ ಈ ಜವಾಬ್ದಾರಿ ನಿರ್ವಹಿಸಲು ಹೆಮ್ಮೆ ಎನಿಸಿದೆ ಎಂದು ತಿಳಿಸಿದ್ದಾರೆ.
Advertisement
@AryamanBirla A century on the day of retention, now that’s always a good sign. Welcome back to the team Arya! #RoyalsAreHere https://t.co/h3pya7c2HH
— Rajasthan Royals (@rajasthanroyals) November 16, 2018
Advertisement
ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತಿರುವ ಆರ್ಯಮನ್ ತಮಿಳುನಾಡಿನ ವಿರುದ್ಧದ ಪಂದ್ಯದಲ್ಲಿ 51 ರನ್ ಸಿಡಿಸಿದ್ದರು. ಅಲ್ಲದೇ ಇದು ಆರ್ಯಮನ್ ಅವರ ಮೂರನೇ ಪ್ರಥಮ ದರ್ಜೆ ಶತಕವಾಗಿದೆ. ಅಂದಹಾಗೇ ಆರ್ಯಮನ್ 2017 ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾರ್ದಾಪಣೆ ಮಾಡಿದ್ದು, 2018ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ 30 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. ಆದರೆ ಆಡುವ ಅಂತಿಮ 11ರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ.
https://twitter.com/AryamanBirla/status/1063092000038248448
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews