ಬೆಂಗಳೂರು: ಹೈಕಮಾಂಡ್ ನನ್ನನ್ನು ಪರಿಗಣಿಸಿದ್ರೆ ರಾಜ್ಯಾಧ್ಯಕ್ಷ ಆಗೋಕೆ ನಾನು ಸಿದ್ಧ ಎಂದು ಯತ್ನಾಳ್ (Basangouda Patil Yatnal) ಟೀಂನ ಮಾಜಿ ಸಚಿವ ಕುಮಾರ್ ಬಂಗಾರಪ್ಪ (Kumar Bangarappa) ರಾಜ್ಯಾಧ್ಯಕ್ಷ ಸ್ಥಾನದ ಆಸೆ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತಾಡಿದರು. ಈ ವೇಳೆ, ಬಂಗಾರಪ್ಪ ಮಗ ಆಗಿದ್ದಕ್ಕೆ ನನಗೆ ಅಧ್ಯಕ್ಷ ಸ್ಥಾನ ಕೊಡ್ತಾರೆ ಅಂದರೆ ಯಡಿಯೂರಪ್ಪ ಮಗ ಅಂತ ವಿಜಯೇಂದ್ರಗೆ ಕೊಟ್ಟ ಹಾಗೇ ಆಗುತ್ತದೆ. ದೊಡ್ಡವರ ಮಕ್ಕಳಾಗಿ ಹುಟ್ಟಿದ ಮಾತ್ರಕ್ಕೆ ನಾವು ದೊಡ್ಡವರಾಗಲ್ಲ. ಕಲಿಬೇಕು, ಸಂಯಮ ಬೇಕು, ಜನ ಸಾಮಾನ್ಯರ ಜೊತೆ ಇರಬೇಕು. ಎಲ್ಲರ ಅಭಿಪ್ರಾಯ ಕೇಳುವ ತಾಳ್ಮೆ ಇರಬೇಕು. ಆದರೆ ಈಗ ಅದು ಆಗಿಲ್ಲ ಅನ್ನೋದು ನಮ್ಮ ವಾದ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
Advertisement
Advertisement
ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳಿಗೆ ಸ್ವಲ್ಪ ಅವಕಾಶದಲ್ಲಿ ಹಿಂದಿದೆ. ಇದು ಕಾಂಗ್ರೆಸ್‌ಗೆ ಅನುಕೂಲ ಆಗಿದೆ .ಹಿಂದುಳಿದ ಮತ್ತು SC-STಗೆ ಅವಕಾಶ ಕೊಡಬೇಕು. ಕುಮಾರ್ ಬಂಗಾರಪ್ಪ ಅಂತ ಅಲ್ಲ ಯಾರೇ ಹಿಂದುಳಿದ ವರ್ಗ ಅಥವಾ SC-STಗೆ ಕೊಟ್ಟರೆ ಅನುಕೂಲ ಆಗುತ್ತದೆ ಎಂದಿದ್ದಾರೆ.
Advertisement
Advertisement
ರಾಜ್ಯ ಬಿಜೆಪಿಯಲ್ಲಿ ಪಕ್ಷ ಸಂಘಟನೆ ಬಿದ್ದು ಹೋಗಿದೆ. ಒಂದೇ ಕಡೆ ವಾಲಿದೆ. ಅದು ಸರಿ ಹೋಗಬೇಕು ಎಂದು ಕುಟುಕಿದ್ದಾರೆ.