LatestLeading NewsMain PostRaichur

ಗೌರವಾನ್ವಿತ ಮುಠ್ಠಾಳರನ್ನು ಪಠ್ಯ ಸಮಿತಿಗೆ ನೇಮಕ ಮಾಡಿದ್ದೇ ತಪ್ಪು: ಕುಂ.ವೀರಭದ್ರಪ್ಪ ಆಕ್ರೋಶ

- ಶಿಕ್ಷಣ ಸಚಿವರ ರಾಜೀನಾಮೆ, ಚಕ್ರತೀರ್ಥ ಬಂಧನಕ್ಕೆ ಒತ್ತಾಯ

Advertisements

ರಾಯಚೂರು: ಪರಿಷ್ಕೃತ ಪಠ್ಯದ ಬಗ್ಗೆ ಲೇಖಕ, ಚಿಂತಕ ಕುಂ.ವೀರಭದ್ರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನ ಕೂಡಲೇ ಬಂಧಿಸಬೇಕು, ಶಿಕ್ಷಣ ಸಚಿವ ನಾಗೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಗೌರವಾನ್ವಿತ ಮುಠ್ಠಾಳರನ್ನ ಪಠ್ಯ ಸಮಿತಿಗೆ ನೇಮಕ ಮಾಡಿರುವುದೇ ತಪ್ಪು. ಸರ್ಕಾರದ ಅಧಿಕೃತ ಆದೇಶವಿಲ್ಲದೆ ಟ್ಯೂಟೋರಿಯಲ್ ನಡೆಸುವಂತವರಿಗೆ ಪಠ್ಯ ರಚನೆ‌ ನೀಡಿರುವುದು ಸರಿಯಲ್ಲ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನೇ ತಿರುಚುವಂತ ಹೀನ ವ್ಯಕ್ತಿ ಪಠ್ಯ ರಚನೆ ಮಾಡುವುದು ಸರಿಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಬಗ್ಗೆ ಆಸಕ್ತಿ ಇದ್ದವರು ದೇಶ ಸೇವೆ ಮಾಡಿ ಅಂದ್ರೆ ಇವರಿಗ್ಯಾಕೆ ಇಷ್ಟೊಂದು ಉರಿತಿದೆ:  ಬಿ.ಶ್ರೀರಾಮುಲು

ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ರೋಹಿತ್ ಚಕ್ರತೀರ್ಥ ಅಪಮಾನ ಮಾಡಿದ್ದಾರೆ. ಬಸವಣ್ಣ ಸೇರಿ ಅನೇಕ ದಾರ್ಶನಿಕರಿಗೆ ಅವಹೇಳನ ಮಾಡಿದ್ದಾರೆ. ಕೂಡಲೇ ರೋಹಿತ್ ಚಕ್ರತೀರ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ʼ777 ಚಾರ್ಲಿʼ ಸಿನಿಮಾದ ನಾಯಿಯ ನಟನೆ ಮೆಚ್ಚಿ ಕಣ್ಣೀರಿಟ್ಟು, ತೆರಿಗೆ ವಿನಾಯಿತಿ ನೀಡಿದ್ದಾರೆ. ಇಷ್ಟೊಂದು ಹೃದಯ ವೈಶಾಲ್ಯತೆ ಮೆರೆಯುವ ಸಿಎಂ ಅವರಿಗೆ ಪರಿಷ್ಕೃತ ಪಠ್ಯ ಪುಸ್ತಕದ ಅವಾಂತರಗಳು‌ ಕಾಣಿಸುತ್ತಿಲ್ಲವೆ? ಕೂಡಲೇ ಶಿಕ್ಷಣ ಸಚಿವ ನಾಗೇಶರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇಲ್ಲಿ ಕೈದಿಗಳನ್ನ ನೋಡಬೇಕಂದ್ರೂ ಜೈಲರ್‌ಗಳಿಗೆ ಲಂಚ ಕೊಡಬೇಕು – ವೀಡಿಯೋ ವೈರಲ್

Live Tv

Leave a Reply

Your email address will not be published.

Back to top button