ಗಾಂಧಿನಗರ: ಪಿಜ್ಜಾ ಸವಿಯಲು ಸಖತ್ ಟೇಸ್ಟಿಯಾಗಿರುತ್ತದೆ. ಬಹುತೇಕ ಮಂದಿಗೆ ಪಿಜ್ಜಾ ಎಂದರೆ ಬಹಳ ಪ್ರಿಯ. ಪಿಜ್ಜಾದಲ್ಲಿ ವೆರೈಟಿ ಪಿಜ್ಜಾಗಳನ್ನು ನಾವು ನೋಡಿರಬಹುದು. ಆದರೆ ಮಡಿಕೆ ಪಿಜ್ಜಾವನ್ನು ಎಲ್ಲದರೂ ಕೇಳಿದ್ದೀರಾ?
Advertisement
ಹೌದು, ಗುಜರಾತ್‍ನ ಸೂರತ್ ಅಂಗಡಿಯೊಂದರಲ್ಲಿ ಮಡಿಕೆಯಿಂದ ತಯಾರಿಸಿದ ವಿಶೇಷವಾದ ಪಿಜ್ಜಾ ದೊರೆಯುತ್ತದೆ. ಮಣ್ಣಿನಿಂದ ತಯಾರಿಸಲಾದ ಪುಟ್ಟ ಮಡಿಕೆಯಲ್ಲಿ ಚೀಸ್ ಪಿಜ್ಜಾವನ್ನು ತುಂಬಿಸಿ ನೀಡಲಾಗುತ್ತದೆ. ಈ ವೀಡಿಯೋವನ್ನು ಮಾರ್ಚ್ ತಿಂಗಳಿನಲ್ಲಿ ಆಮ್ಚಿ ಮುಂಬೈ ಎಂಬ ಯೂಟ್ಯೂಬ್ ಪೇಜ್‍ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೂ ಸುಮಾರು 23 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ: ತಾಲಿಬಾನಿ ಬಿಜೆಪಿ ಸರ್ಕಾರದಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ
Advertisement
Advertisement
ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಒಂದು ಬಟ್ಟಲಿಗೆ ಬೇಯಿಸಿದ ಕಾರ್ನ್, ಕತ್ತರಿಸಿದ ಟೊಮ್ಯಾಟೋ, ಪನ್ನೀರ್, ಮೇಯನೇಸ್, ಟೊಮ್ಯಾಟೋ ಕೆಚಪ್ ನಂತಹ ಹಲವಾರು ಸಾಸ್‍ಗಳನ್ನು ಹಾಕಿ ಮಿಶ್ರಣ ಮಾಡಿ, ಅದಕ್ಕೆ ಚಿಲ್ಲಿ ಫ್ಲೇಕ್ಸ್, ಓರೆಗಾನೊ, ಉಪ್ಪು ಮತ್ತು ಚಾಟ್ ಮಸಾಲೆ ಹಾಕಿ ಮಿಕ್ಸ್ ಮಾಡುತ್ತಾರೆ. ನಂತರ ಸಣ್ಣ ಮಡಿಕೆ ಕಪ್‍ಗೆ ಅದೆಲ್ಲವನ್ನು ತುಂಬಿಸಿ, ಸಾಸ್ ಮತ್ತು ಚೀಸ್‍ನನ್ನು ಅದರ ಮೇಲೆ ಹಾಕಿ ನಂತರ ಲಿಕ್ವಿಡ್ ಚೀಸ್ ಸೇರಿದಂತೆ ಹಲವು ಚೀಸ್‍ಗಳನ್ನು ಮಿಶ್ರಣ ಮಾಡುತ್ತಾರೆ. ಕೊನೆಗೆ ಚಿಕ್ಕ ಮಡಿಕೆಯ ಕಪ್‍ನನ್ನು ಮೈಕ್ರೋವೇವ್‍ನಲ್ಲಿ ಇಟ್ಟು ಬೇಯಿಸುತ್ತಾರೆ. ಇದನ್ನೂ ಓದಿ: ಕೈ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ- ದೇಗುಲ ಧ್ವಂಸ, ಗೋವು ಕಳ್ಳರ ವಿರುದ್ಧ ಆಕ್ರೋಶ
Advertisement
ಬಳಿಕ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಪಿಜ್ಜಾ ಮೇಲೆ ಉದುರಿಸಿ ಸವಿಯಲು ನೀಡುತ್ತಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಾಮೆಂಟ್‍ಗಳ ಸುರಿಮಳೆಯೇ ಹರಿದುಬರುತ್ತಿದೆ.