ಧರ್ಮಶಾಲಾ: ಟೀಂ ಇಂಡಿಯಾ ಹಾಗೂ ಆಸೀಸ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಹಾಗೂ 4ನೇ ಟೆಸ್ಟ್ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ 300 ರನ್‍ಗೆ ಆಲೌಟ್ ಆಗಿದೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 4 ವಿಕೆಟ್ ಪಡೆಯುವ ಮೂಲಕ ಕುಲದೀಪ್ ಯಾದವ್ ಗಮನ ಸೆಳೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ತಂಡ ನಾಯಕ ಸ್ಮಿತ್ ಶತಕದಿಂದಾಗಿ ಈ ಮೊತ್ತ ಗಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಆಸ್ಟ್ರೇಲಿಯಾ ಪರವಾಗಿ 5ಕ್ಕೂ ಹೆಚ್ಚು ಆಟಗಾರರು ಎರಡಂಕಿ ದಾಟಲು ವಿಫಲರಾದರು. ಆಸ್ಟ್ರೇಲಿಯಾ ಪರವಾಗಿ ವಾರ್ನರ್ 56, ಮ್ಯಾಥ್ಯೂ ವೇಡ್ 57 ರನ್ ಗಳಿಸಿ ತಂಡದ ಮೊತ್ತ 300 ತಲುಪಿಸುವಲ್ಲಿ ಯಶಸ್ವಿಯಾದರು. ನಾಯಕ ಸ್ಮಿತ್ 174 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ 111 ರನ್ ಗಳಿಸಿ ಅಶ್ವಿನ್‍ಗೆ ವಿಕೆಟ್ ಒಪ್ಪಿಸಿದರು.
Advertisement
ಟೀಂ ಇಂಡಿಯಾ ಪರವಾಗಿ ಚೊಚ್ಚಲ ಪಂದ್ಯವಾಡುತ್ತಿರುವ ಕುಲದೀಪ್ ಯಾದವ್ 4 ವಿಕೆಟ್ ಪಡೆದು ಟೀಂ ಇಂಡಿಯಾ ಪರ ಯಶಸ್ವಿ ಬೌಲರ್ ಎನಿಸಿದರು. ಉಮೇಶ್ ಯಾದವ್ 2, ಭುವನೇಶ್ವರ್ ಕುಮಾರ್, ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ ಶೂನ್ಯ ರನ್ ಗಳಿಸಿದೆ.
Advertisement
Advertisement
Advertisement
A momentous day for Kuldeep Yadav. On debut vs Aust, picks up 4 wkts, leads the Indian team off the field. Great scenes @imkuldeep18 @BCCI
— Anjum Chopra (@chopraanjum) March 25, 2017
Innings Break! Australia all out for 300 on Day 1 of the 4th Test #INDvAUS pic.twitter.com/H7kNkJrPnr
— BCCI (@BCCI) March 25, 2017