ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ವಿರುದ್ಧವಾಗಿ ನಾನು ಯಾವುದೇ ರೀತಿಯ ಹೇಳಿಕೆಯನ್ನ ನೀಡಿಲ್ಲ ಎಂದು ಕುಲ್ದೀಪ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಬರುತ್ತಿರುವ ಆರೋಪ ಆಧಾರ ರಹಿತ. ಮಾಧ್ಯಮಗಳು ನನ್ನನ್ನು ಅನಗತ್ಯವಾಗಿ ವಿವಾದದಲ್ಲಿ ಸಿಲುಕುವಂತೆ ಮಾಡಿವೆ. ನನ್ನ ಹೇಳಿಕೆಯ ವಿಡಿಯೋವನ್ನು ತಿರುಚಿ ಈ ರೀತಿ ಸುದ್ದಿ ಮಾಡಿದ್ದಾರೆ ಎಂದು ಕುಲ್ದೀಪ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಧೋನಿ ಅವರು ನೀಡುವ ಸಲಹೆಗಳು ಸಾಕಷ್ಟು ಬಾರಿ ವಿಫಲವಾಗಿದೆ ಎಂದು ಕುಲ್ದೀಪ್ ಹೇಳಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕುಲ್ದೀಪ್ ಯಾದವ್ ಸ್ಪಷ್ಟನೆ ನೀಡಿದ್ದಾರೆ. ಧೋನಿ ಎಂದರೆ ಸಾಕಷ್ಟು ಗೌರವವಿದೆ. ಕ್ರೀಡಾಂಗಣದಲ್ಲಿ ಧೋನಿ ಅವರ ಸಲಹೆಗಳು ಸಾಕಷ್ಟು ಉಪಯುಕ್ತವಾಗುತ್ತವೆ ಎಂದು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
ಧೋನಿ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್‍ನಲ್ಲಿ ಗೆಲುವು ಪಡೆದಿದೆ. ಅಲ್ಲದೇ ಐಸಿಸಿ ಚಾಂಪಿಯನ್ ಟ್ರೋಫಿಯನ್ನ ಟೀಂ ಇಂಡಿಯಾ ಧೋನಿ ನಾಯಕತ್ವದಲ್ಲಿ ಗೆಲುವು ಪಡೆದಿದೆ. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿಯಾಗಿದ್ದರು. 37 ವರ್ಷದ ಧೋನಿ ಸದ್ಯ 2019ರ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸಿದ್ದಾರೆ.