ಕಳೆದ ವರ್ಷ ಬೆಂಚ್ ಬಿಸಿ ಮಾಡಿದ ಆಟಗಾರರು ಈ ಬಾರಿ ಮ್ಯಾಚ್ ವಿನ್ನರ್ಸ್‌

Public TV
1 Min Read
UMESH YADAV AND KULDEEP YADAV

ಮುಂಬೈ: 14ನೇ ಆವೃತ್ತಿ ಐಪಿಎಲ್‍ನಲ್ಲಿ ಉಮೇಶ್ ಯಾದವ್ ಮತ್ತು ಕುಲ್‍ದೀಪ್ ಯಾದವ್ ಬೆರಳೆಣಿಕೆ ಪಂದ್ಯವಾಡಿದ್ದನ್ನು ಹೊರತು ಪಡಿಸಿ ಹೆಚ್ಚಿನ ಪಂದ್ಯಗಳಲ್ಲಿ ಹೊರಗುಳಿದಿದ್ದರು. ಆದರೆ ಈ ಬಾರಿ ಇವರಿಬ್ಬರೂ ಕೂಡ ಮ್ಯಾಚ್ ವಿನ್ನರ್‌ಗಳಾಗಿ ಸದ್ದು ಮಾಡುತ್ತಿದ್ದಾರೆ.

IPL 2022 2

14ನೇ ಆವೃತ್ತಿ ಐಪಿಎಲ್‍ನಲ್ಲಿ ಉಮೇಶ್ ಯಾದವ್ ಡೆಲ್ಲಿ ಕಾಪಿಟಲ್ಸ್ ಪರ ಕೇವಲ 2 ಪಂದ್ಯ ಆಡಿದ್ದರು. ಉಳಿದ ಬಹುತೇಕ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಉಮೇಶ್ ಯಾದವ್‍ರಂತೆ ಕುಲ್‍ದೀಪ್ ಯಾದವ್ 14ನೇ ಆವೃತ್ತಿ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಬೆರಳೆಣಿಕೆಯ ಪಂದ್ಯವಾಡಿ ಆ ಬಳಿಕ ಹೊರಗುಳಿದಿದ್ದರು. ಆದರೆ 15ನೇ ಆವೃತ್ತಿ ಐಪಿಎಲ್‍ನಲ್ಲಿ ಈ ಇಬ್ಬರೂ ಆಟಗಾರರು ಕೂಡ ತಮ್ಮ ಭರ್ಜರಿ ಬೌಲಿಂಗ್ ಮೂಲಕ ಎದುರಾಳಿ ಆಟಗಾರಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಜೊತೆಗೆ ಪರ್ಪಲ್ ಕ್ಯಾಪ್‍ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಹುಲ್ ಗೋಲ್ಡನ್ ಡಕ್ – ನಿರಾಸೆಗೊಂಡ ಆಥಿಯಾ ಶೆಟ್ಟಿ

IPL 2022 DC 2 1

ಈಗಾಗಲೇ 15ನೇ ಆವೃತ್ತಿಯ ಮೊದಲ 5 ಪಂದ್ಯಗಳನ್ನು ಗಮನಿಸಿದಾಗ ಉಮೇಶ್ ಯಾದವ್ ಮತ್ತು ಕುಲ್‍ದೀಪ್ ಯಾದವ್ ಎದುರಾಳಿ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದಾರೆ. ಉಮೇಶ್ ಯಾದವ್ 5 ಪಂದ್ಯಗಳಿಂದ 10 ವಿಕೆಟ್ ಕಬಳಿಸಿದ್ದು, ಕುಲ್‍ದೀಪ್ ಯಾದವ್ 4 ಪಂದ್ಯಗಳಿಂದ 10 ವಿಕೆಟ್ ಕಿತ್ತು ಘರ್ಜಿಸುತ್ತಿದ್ದಾರೆ. ಇದನ್ನೂ ಓದಿ: ಡೆಲ್ಲಿ ಗೆಲುವಿನ ಸಂಭ್ರಮಾಚರಣೆ- ಹೌ ಈಸ್ ದಿ ಜೋಶ್: ವಾರ್ನರ್

UMESH YADAV

ಈ ಹಿಂದಿನ ಆವೃತ್ತಿ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನವನ್ನು ಕಂಡು ಫ್ರಾಂಚೈಸಿಗಳು ಈ ಇಬ್ಬರನ್ನು ಬೆಂಚ್ ಬಿಸಿ ಮಾಡಿಸಿತ್ತು. ಈ ಬಾರಿ ನೂತನ ಫ್ರಾಂಚೈಸ್‍ಗಳು ಯಾದವ್ ದ್ವಯರ ಮೇಲೆ ಭರವಸೆ ಇಟ್ಟಿರುವುದಕ್ಕೆ ಸರಿಯಾಗಿ ತಮ್ಮ ಭರ್ಜರಿ ಬೌಲಿಂಗ್ ಮೂಲಕ ತಂಡದ ಮ್ಯಾಚ್ ವಿನ್ನರ್ ಆಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *