ಬೆಳಗಾವಿ: ರಾಯಭಾಗ್ ತಾಲೂಕಿನ ಕುಡಚಿ ಠಾಣೆ ಪಿಎಸ್‍ಐ ಶಿವಶಂಕರ ಅವರ ಗೂಂಡಾಗಿರಿಯ ಪ್ರಕರಣಗಳು ತಡವಾಗಿ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಚಿಕ್ಕೋಡಿ ತಾಲೂಕಿನ ಗಳತಗಾ ಜಾತ್ರೆಯಲ್ಲಿ ತಮ್ಮ ಜೀಪಿಗೆ ದಾರಿ ಬಿಟ್ಟಿಲ್ಲ ಎಂಬ ಕಾರಣಕ್ಕೆ ಯುವಕನೋರ್ವನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು 5 ರಿಂದ 6 ತಿಂಗಳ ಹಿಂದೆ ಸದಲಗ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಶಿವಶಂಕರ ಕಾರ್ಯನಿರ್ವಹಿಸುತ್ತಿದ್ದರು. ಗಳತಗಾ ಜಾತ್ರೆಯಲ್ಲಿ ಶಿವಶಂಕರ ಯುವಕನ ಮೇಲೆ ತಮ್ಮ ಅಧಿಕಾರ ದರ್ಪವನ್ನು ತೋರಿಸಿದ್ದಾರೆ. ಯುವಕನ ಮೇಲೆ ಹಲ್ಲೆ ಮಡುತ್ತಿರುವ ವೇಳೆ ಯುವಕ ಚರಂಡಿಯಲ್ಲಿ ಬಿದ್ರೂ, ಬಿಡದ ಶಿವಶಂಕರ ಯುವಕನನ್ನು ಮೇಲಕ್ಕೆ ಎತ್ತಿ ಥಳಿಸಿದ್ದಾರೆ.
Advertisement
ಇದನ್ನೂ ಓದಿ: ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ!
Advertisement
ನಿನ್ನೆ (ಭಾನುವಾರ) ಪಬ್ಲಿಕ್ ಟಿವಿ ಇದೇ ಪಿಎಸ್‍ಐ ಶಿವಶಂಕರ ತಮ್ಮ ಸಿಬ್ಬಂದಿಯೊಂದಿಗೆ ಕುಡಚಿಯ ಬಾರ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಬಿತ್ತರಿಸಿತ್ತು. ಇನ್ನು ಶಿವಶಂಕರ ತಾವು ಕಾರ್ಯ ನಿರ್ವಹಿಸಿದ ಪ್ರತಿಯೊಂದು ಊರಿನಲ್ಲಿ ತಮ್ಮ ಅಧಿಕಾರ ದರ್ಪವನ್ನು ತೋರಿಸಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಪಿಎಸ್‍ಐ ಮೇಲೆ ಇದೂವರೆಗೂ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಜರುಗಿಸುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ.
Advertisement
ಹೋಳಿ ಹಬ್ಬದ ದಿನದಂದು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣದ ತನಿಖಾಧಿಕಾರಿ ನಾಗರಾಜ್ ಅವರಿಗೆ ಆದೇಶ ಪತ್ರ ದೊರಕಿಲ್ಲ. ಪಿಎಸ್‍ಐ ಶಿವಶಂಕರ ಪ್ರಭಾವಿ ವ್ಯಕ್ತಿಯ ಬೆಂಬಲವಿದೆ ಎಂದು ಕೇಳಿ ಬಂದಿದೆ. ಶಿವಶಂಕರ ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವರ ಕ್ರಮ ಜರುಗಿಸಲಾಗುತ್ತದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರ ಸೆಕ್ಸೆನಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.