ಮಂಗಳೂರು: ಆದಿತ್ಯ ಮಾನಸಿಕ ರೋಗಿಯಂತೆ ಕಾಣುತ್ತಿದ್ದನು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಆರೋಪಿ ಜೊತೆ ಕೆಲಸ ಮಾಡಿದ್ದ ಸಹದ್ಯೋಗಿಗಳು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆದಿತ್ಯ ಸಹದ್ಯೋಗಿ, ಡಿಸೆಂಬರ್ 16ರಂದು ಆದಿತ್ಯ ಕುಡ್ಲ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿದ್ದು, ಇಲ್ಲಿ ಆತ ಬಿಲ್ಲಿಂಗ್ ಕೆಲಸ ಮಾಡುತ್ತಿದ್ದನು. ಜನವರಿ 13ರಂದು ಸಂಬಳವಾದ ನಂತರ ಆತ ರೆಸ್ಟೋರೆಂಟ್ ತೊರೆದಿದ್ದ. ಬಳಿಕ ಆತನ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದಿತ್ಯ ಒಂದು ವಿಭಾಗದ ಬಿಲ್ಲಿಂಗ್ ಕೆಲಸ ಮಾತ್ರ ಮಾಡುತ್ತಿದ್ದನು. ಆದಿತ್ಯ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಸೈಲೆಂಟ್ ಆಗಿ ಇರುತ್ತಿದ್ದನು ಎಂದರು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ್ದಕ್ಕೆ ಬೆದರಿಕೆ ಕರೆ ಮಾಡಿದ್ದ ಬಾಂಬರ್ ಈಗ ಬಾಂಬ್ ಇಟ್ಟ
Advertisement
Advertisement
ಅಲ್ಲದೆ ಆದಿತ್ಯ ಮಾನಸಿಕ ರೋಗಿಯಂತೆ ಕಾಣುತ್ತಿದ್ದನು. ಈ ಬಗ್ಗೆ ಆತನಿಗೆ ಪ್ರಶ್ನಿಸಿದಾಗ, ನನ್ನ ತಂದೆಗೆ ಹುಷಾರಾಗಿಲ್ಲ. ಹಾಗಾಗಿ ನಾನು ಈ ರೀತಿ ಇದ್ದೇನೆ ಎಂದು ಹೇಳುತ್ತಿದ್ದನು. ಆದರೆ ಬಿಲ್ಲಿಂಗ್ ಕೆಲಸ ಮಾತ್ರ ಚೆನ್ನಾಗಿ ಮಾಡುತ್ತಿದ್ದನು. ಆದಿತ್ಯ ಕೆಲಸ ಕೇಳಿ ಬರುವಾಗ ನಮ್ಮ ಮ್ಯಾನೇಜರ್ ಇದ್ದರು, ನಾನು ಇಲ್ಲಿ ಇರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಗಳೂರು ಬಾಂಬರ್ ಅರೆಸ್ಟ್
Advertisement
Advertisement
ಇದೇ ವೇಳೆ ಮತ್ತೊಬ್ಬ ಸಹದ್ಯೋಗಿ ಮಾತನಾಡಿ, ನಾವು ಆದಿತ್ಯ ಜೊತೆ ಹೆಚ್ಚು ಸಂಪರ್ಕದಲ್ಲಿ ಇರುತ್ತಿರಲಿಲ್ಲ. ಆತ ಎಷ್ಟು ಬೇಕೋ ಅಷ್ಟು ಮಾತನಾಡುತ್ತಿದ್ದನು. ನೀವು ಯಾಕೆ ಮಾತನಾಡಲ್ಲ ಎಂದು ನಾವು ಪ್ರಶ್ನಿಸಿದಾಗ, ನಾನು ಅಷ್ಟೇ ಮಾತನಾಡುವುದು ಎಂದು ಹೇಳುತ್ತಿದ್ದನು. ಆದಿತ್ಯ ಚಲನವಲನದ ಬಗ್ಗೆ ನಮಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಆದಿತ್ಯ ಜೊತೆ ಯಾವಾಗಲೂ ಒಂದು ಬ್ಯಾಗ್ ತನ್ನ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದನು. ಹೊರಗೆ ಹೋಗುವಾಗಲೂ ಆ ಬ್ಯಾಗ್ ತನ್ನ ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದನು ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್
ಮಣಿಪಾಲ ಮೂಲದ ಆದಿತ್ಯ ರಾವ್ ಇಂದು ಬೆಳಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಕಚೇರಿಗೆ ಆಗಮಿಸಿ ಶರಣಾಗಿದ್ದಾನೆ. ಈಗ ಪೊಲೀಸರು ಈತನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.