ಕಲಬುರಗಿ: ಮಂಗಳೂರು ಗಲಭೆಯಲ್ಲಿ ಮೃತರಾವರಿಗೆ ಪಶ್ಚಿಮ ಬಂಗಾಳ ಸರ್ಕಾರ ಪರಿಹಾರ ಹಣ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಹಾಕುವ ಕೆಲಸ ಮಾಡಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಮತಾ ಬ್ಯಾನರ್ಜಿ ಒಂದು ರಾಜ್ಯದ ಸಿಎಂ ಆಗಿದ್ದು, ಅವರು ಮೊದಲು 1955ರ ನಿಯಮಗಳನ್ನು ಓದಿಕೊಳ್ಳಲಿ. ಈ ಕಾಯ್ದೆಯನ್ನು ಅವರು ಓದಿದ್ದಾರಾ? ಎಂದು ಪ್ರಶ್ನಿಸಿದ್ದರು. ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ಪೌರತ್ವ ಕಾಯ್ದೆಯ ಬಗ್ಗೆ ತಪ್ಪು ತಿಳುವಳಿಕೆ ನೀಡಿ ಅಲ್ಪಸಂಖ್ಯಾತರನ್ನು ಉದ್ವೇಗ ಆಗುವಂತೆ ಮಾಡಿ ಜನರಲ್ಲಿ ಜಗಳ ಹಚ್ಚುತ್ತಿದ್ದಾರೆ. ಆ ಮೂಲಕ ಅದರಲ್ಲಿ ನೀವು ಚಳಿ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದೀರೆ ಎಂದು ಆರೋಪಿಸಿದರು.
Advertisement
Advertisement
ಮಮತಾ ಅಕ್ಕ ಕಲ್ಲು ಹೊಡೆಯುವರಿಗೆ ಬೆಂಕಿ ಹಚ್ಚುವರಿಗೆ ಮಾತ್ರ ನೋಡಬೇಡಿ. ದೇಶದ ಗಡಿಯಲ್ಲಿ ಸಾವನ್ನಪ್ಪುವವರನ್ನು ಪ್ರವಾಹ ಸಂತ್ರಸ್ತರನ್ನು ನೋಡಿ. ಪಶ್ಚಿಮ ಬಂಗಾಳದಲ್ಲಿ ರಸ್ತೆ ಬದಿ ಇರುವ ಜನ ಚಿಂದಿ ಆಯುವಂತಹ ಜನರನ್ನು ಮೊದಲು ನೋಡಿ ಎಂದರು. ದೇಶದ ಬುದ್ಧಿಜೀವಿಗಳು ಕಾನೂನನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅಂಥವರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತದೆ. ಎನ್‍ಆರ್ ಸಿ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ, ಎನ್‍ಆರ್ ಸಿ ವಿವಾದ ಹುಟ್ಟಿಹಾಕಿದ್ದೆ ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.
Advertisement
ಮೋದಿ ನೇತೃತ್ವದಲ್ಲಿ ಮಾತ್ರ ಭಾರತ ದೇಶ ಬದಲಾವಣೆ ಕಾಣಲು ಸಾಧ್ಯ. ಅಮಾಯಕರನ್ನು ಎತ್ತಿಕಟ್ಟುವ ಕೆಟ್ಟ ಪರಂಪರೆಗೆ ಕಾಂಗ್ರೆಸ್ ಪಕ್ಷ ಕೈ ಹಾಕಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮಾನವೀಯತೆಯ ತಿದ್ದುಪಡಿ ಕಾಯ್ದೆಯಾಗಿದೆ. ಈ ಕಾಯ್ದೆಯಿಂದ ಭಾರತದ ಯಾವೊಬ್ಬರಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಬೆತ್ತಲೆಗೊಳಿಸುವ ಮೋದಿ ಪ್ರಯತ್ನಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕಿದೆ.
Advertisement
ತೊಂದರೆಗೀಡಾದ ಅಲ್ಪಸಂಖ್ಯಾಂತರಿಗೆ ಮಾತ್ರ ಪೌರತ್ವ ಕಾಯ್ದೆ ಅನ್ವಯಿಸುತ್ತದೆ. ಪಾಕಿಸ್ತಾನದಲ್ಲಿ ತೊಂದರೆಗೆ ಒಳಗಾಗಿರುವ ಮುಸ್ಲಿಮರಿಗೆ ರಕ್ಷಣೆ ನೀಡುವುದು ಪೌರತ್ವ ಕಾಯ್ದೆಯ ಉದ್ದೇಶ. ಆದರೆ ದೇಶದ ಮುಸ್ಲಿಮರನ್ನು ಕಾಂಗ್ರೆಸ್ ಪಕ್ಷ ಎತ್ತಿಕಟ್ಟುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮೊದಲು ಸಂವಿಧಾನದ ಕಲಂ 6 ರಿಂದ 12 ವರೆಗೆ ಮೊದಲು ಓದಲಿ. ದೇಶ ಕಟ್ಟುತ್ತಿರುವ ಮೋದಿಗೆ ಅಡ್ಡಗಾಲಗಿ ಕಾಂಗ್ರೆಸ್ ಪಕ್ಷ ದೇಶದ ಜನರನ್ನು ದಾರಿತಪ್ಪಿಸಿ ಅಧೋಗತಿಗೆ ಕೊಂಡ್ಯೋಯುತ್ತಿದೆ. ಪ್ರತಿಭಟನೆಗೆ ಇಳಿಯುವ ಮುಂಚೆ ಸಂವಿಧಾನದಲ್ಲಿರುವ ನಾಲ್ಕು ಸಾಲುಗಳನ್ನು ಓದಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅರಿವು ಮೂಡಿಸಲು ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.