ಹೈದರಾಬಾದ್: ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡುವ ಅಕ್ಕಿಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟು ಎಂಬ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗದ ಜಿಲ್ಲಾಧಿಕಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಛೀಮಾರಿ ಹಾಕಿದ್ದಾರೆ. ಇದಕ್ಕೆ ತೆಲಂಗಾಣ ಸಚಿವ ಕೆಟಿ ರಾಮರಾವ್ ಆಘಾತ ವ್ಯಕ್ತಪಡಿಸಿದ್ದಾರೆ.
Advertisement
ಕೇಂದ್ರ ಸಚಿವೆ ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಪಡಿತರ ಪರಿಶೀಲನೆ ವೇಳೆ ತೆಲಂಗಾಣದ ಬಿಕ್ರೂರ್‌ನಲ್ಲಿ ಜಿಲ್ಲಾಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
#ParliamentPravasYojana లో భాగంగా బాన్సువాడలో పర్యటిస్తున్న కేంద్ర ఆర్థిక మంత్రి శ్రీమతి @nsitharaman నిజామాబాద్, కామారెడ్డి జిల్లాల సివిల్ సప్లై అధికారికి క్లాస్ పీకారు. ఓ రేషన్ షాపు సందర్శించిన మంత్రి రూపాయికి కిలో బియ్యం పథకంలో రాష్ట్ర ప్రభుత్వ వాటా ఎంతని అధికారిని అడిగారు. pic.twitter.com/bdl117sX28
— BJP Telangana (@BJP4Telangana) September 2, 2022
Advertisement
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಲ್ಲಾಧಿಕಾರಿ ಜಿತೇಶ್ ಪಾಟೀಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಇಲ್ಲಿ ಯಾಕೆ ಇಲ್ಲ ಎಂದು ಕೇಳಿದ್ದರು. ಬಳಿಕ ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡುವ ಅಕ್ಕಿಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಉತ್ತರಿಸಲು ತಡಪಡಿಸಿದ್ದು, ಇದಕ್ಕೆ ಗರಂ ಆದ ಸೀತಾರಾಮನ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: IT-BT ಕಂಪನಿಗಳಿಂದ ಸಿಎಂಗೆ ಪತ್ರ- ಬೇಡಿಕೆ ಈಡೇರದಿದ್ರೆ ವಲಸೆ ಹೋಗುವ ಎಚ್ಚರಿಕೆ
Advertisement
I am appalled by the unruly conduct of FM @nsitharaman today with District Magistrate/Collector of Kamareddy
These political histrionics on the street will only demoralise hardworking AIS officers
My compliments to @Collector_KMR Jitesh V Patil, IAS on his dignified conduct ????
— KTR (@KTRTRS) September 2, 2022
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕೆಟಿಆರ್ ಟ್ವೀಟ್ ಮಾಡಿ, ಇಂದು ಎಫ್‌ಎಂ ನಿರ್ಮಲಾ ಸೀತಾರಾಮನ್ ಅವರು ಜಿಲ್ಲಾಧಿಕಾರಿ ಅವರೊಂದಿಗೆ ನಡೆದುಕೊಂಡ ಅಶಿಸ್ತಿನ ವರ್ತನೆಯಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ಈ ರಾಜಕೀಯ ಇತಿಹಾಸಕಾರರು ಬೀದಿಯಲ್ಲಿ ಶ್ರಮವಹಿಸುವ ಎಐಎಸ್ ಅಧಿಕಾರಿಗಳನ್ನು ನಿರುತ್ಸಾಹಗೊಳಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಕ್ಷಮ್ಯ : ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಕಿಡಿ