DistrictsKarnatakaLatestMain PostRaichur

ತೆಲಂಗಾಣದಲ್ಲೂ ಪ್ರತಿಧ್ವನಿಸುತ್ತಿದೆ ರಾಜ್ಯದ 40% ಕಮಿಷನ್ – ಕರ್ನಾಟಕ ಸರ್ಕಾರವನ್ನು ಅಣಕಿಸಿದ ಕೆಟಿಆರ್

ರಾಯಚೂರು: ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಪಕ್ಷ ಬಲವರ್ಧನೆಗೆ ಬಿಜೆಪಿ ಪಾದಯಾತ್ರೆ ನಡೆಸಿದೆ. ಆದ್ರೆ ತೆಲಂಗಾಣ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರೀಯ ಸಮಿತಿ ರಾಜ್ಯದ 40% ಕಮಿಷನ್ ವಿಚಾರವನ್ನು ಇಟ್ಟುಕೊಂಡು ತಿರುಗೇಟು ನೀಡುತ್ತಿದೆ.

ತೆಲಂಗಾಣ ಸಚಿವ ಕೆ.ಟಿ ರಾಮರಾವ್ ಕರ್ನಾಟಕದ ಬಿಜೆಪಿ ಸರ್ಕಾರ ಕಮಿಷನ್ ದಂಧೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಕೆಟಿಆರ್ ರಾಜ್ಯದ ಕುರಿತು ಮಾತನಾಡಿರುವ ವೀಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಅದರಲ್ಲಿ ಕಮಿಷನ್ ವಿಚಾರ ಇಟ್ಕೊಂಡು ಕರ್ನಾಟಕ ಸರ್ಕಾರ ಹಾಗೂ ತೆಲಂಗಾಣ ಬಿಜೆಪಿ ನಾಯಕರನ್ನು ಕೆಟಿಆರ್ ಕೆಣಕಿದ್ದಾರೆ. ಕರ್ನಾಟಕದಲ್ಲಿ 40 ಪರ್ಸಂಟೇಜ್ ವಿಚಾರವಾಗಿ ದೊಡ್ಡ ಚರ್ಚೆ ಆಗ್ತಿದೆ. ಸಚಿವರೇ ಗುತ್ತಿಗೆದಾರರಿಗೆ ಕಿರುಕುಳ ನೀಡ್ತಿದ್ದಾರೆ ಎಂದು ಹೋರಾಟ ನಡೆದಿವೆ. ಗುತ್ತಿಗೆದಾರ ಸಚಿವರ ಹೆಸರೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಧಾನ ಮಂತ್ರಿಯವರಿಗೂ ಕಮಿಷನ್ ದಂಧೆಯ ಬಗ್ಗೆ ದೂರು ನೀಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ತೆಲಂಗಾಣ ಆಫರ್ – ಬಿಜೆಪಿ ನಾಯಕರು ಕಿಡಿ

ಆಂಧ್ರಪ್ರದೇಶದ ಕರೀಂನಗರ ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಪಾದಯಾತ್ರೆಗೆ ಟಾಂಗ್ ಕೊಡಲು ಕೆಟಿಆರ್ ಕರ್ನಾಟಕ ಸರ್ಕಾರವನ್ನು ಅಣಕವಾಡಿದ್ದು, ತೆಲಂಗಾಣ ಗಡಿ ಭಾಗದ ಕರ್ನಾಟಕದ ಜಿಲ್ಲೆಗಳಿಗೆ ಹೋಗಿ ಬನ್ನಿ. ರಾಯಚೂರು, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಹೋಗಿ. ಅಲ್ಲಿ ಸರಿಯಾಗಿ ಪಿಂಚಣಿ ಬರುತ್ತಿಲ್ಲ, ವಿದ್ಯುತ್ ಇಲ್ಲ, ಸರ್ಕಾರಿ ಸೌಲಭ್ಯಗಳೇ ಸರಿಯಾಗಿ ಸಿಗುತ್ತಿಲ್ಲ ಇದೇ ಕಾರಣಕ್ಕೆ ನಮ್ಮನ್ನು ತೆಲಂಗಾಣಕ್ಕೆ ಸೇರಿಸಿ ಅಂತ ರಾಯಚೂರಿನ ಬಿಜೆಪಿ ಶಾಸಕ ಡಾ ಶಿವರಾಜ್ ಪಾಟೀಲ್ ಹೇಳಿದ್ರು. ಕರ್ನಾಟಕದ ಬಿಜೆಪಿ ಶಾಸಕರೇ ನಮ್ಮ ಆಡಳಿತ ಮೆಚ್ಚಿಕೊಂಡಿದ್ದಾರೆ. ಇದು ಬಿಜೆಪಿಯ ಪರಸ್ಥಿತಿ ಹೇಳುತ್ತದೆ ಎಂದು ಕೆ.ಟಿ.ರಾಮರಾವ್ ಅಣಕವಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆ ದಾಟುತ್ತಿದ್ದ ಶ್ವಾನದ ಮೇಲೆ ಕಾರು ಚಲಾಯಿಸಿ ಕ್ರೌರ್ಯ ಮೆರೆದ ಕಿಡಿಗೇಡಿ

ಕೆಲದಿನಗಳ ಹಿಂದೆ ಬೆಂಗಳೂರಿನ ಸ್ಟಾರ್ಟ್ ಕಂಪನಿಗಳನ್ನು ಹೈದ್ರಾಬಾದ್‍ಗೆ ಬನ್ನಿ ಎಂದು ಆಹ್ವಾನಿಸಿ ಕೆಟಿಆರ್ ವಿವಾದ ಕಿಡಿ ಹೊತ್ತಿಸಿದ್ದರು. ಇದೀಗ ಬಿಜೆಪಿ ನಾಯಕರನ್ನು ಟೀಕಿಸಲು ಕರ್ನಾಟಕವನ್ನು ಅಸ್ತ್ರವನ್ನಾಗಿಸಿಕೊಂಡು ಕರ್ನಾಟಕದಲ್ಲಿ ವಿಫಲ ಸರ್ಕಾರ ಇದೆ. ಸುಮ್ನೆ ನಮ್ ಸರ್ಕಾರದ ಬಗ್ಗೆ ಮಾತಾಡ್ತಿದ್ದೀರಾ ನಿಮಗೆ ನಾಚಿಕೆ ಆಗ್ಬೇಕು ಎಂದು ಬಿಜೆಪಿ ನಾಯಕ ಬಂಡಿ ಸಂಜಯ್‍ರನ್ನು ಕೆಟಿಆರ್ ತರಾಟೆಗೆ ತೆಗೆದುಕೊಂಡಿದ್ದಾರೆ.

 

Leave a Reply

Your email address will not be published.

Back to top button