ಬೆಂಗಳೂರು:ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ (KSTDC) ಪ್ರವಾಸಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅಂತರರಾಜ್ಯ ಪ್ರವಾಸಿ ತಾಣಗಳಿಗೆ ಕೆಎಸ್‌ಟಿಡಿಸಿಯಿಂದ ಪ್ಯಾಕೇಜ್ ಟೂರ್ (Package Tour) ಆಯೋಜನೆ ಮಾಡಲಾಗುತ್ತಿದೆ. ಪ್ರಮುಖವಾಗಿ ವಿವಿಧ ಹಾಗೂ ಪ್ರಖ್ಯಾತ 9 ಸ್ಥಳಗಳಿಗೆ ಸರ್ಕಾರದಿಂದ ಕೈಗೆಟ್ಟಕುವ ದರದಲ್ಲಿ ಪ್ಯಾಕೇಜ್ ಮಾಡಲಾಗಿದೆ.ಇಂದಿನಿಂದಲೇ ಬುಕ್ಕಿಂಗ್ ಆರಂಭವಾಗಿವೆ.
ಈ ಪ್ಯಾಕೇಜ್ ನಲ್ಲಿ ಪ್ರವಾಸಿಗರ ಊಟ, ಹೋಟೆಲ್, ವಸತಿ ವ್ಯವಸ್ಥೆಯನ್ನು ಕೆಎಸ್‌ಟಿಡಿಸಿಯಿಂದಲೇ ಆಯೋಜನೆ ಮಾಡಲಾಗಿದೆ. ಎಲ್ಲಾ ಪ್ಯಾಕೇಜ್‌ಗಳಲ್ಲೂ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಲಾಗಿದೆ. ಒಂದು ಟಿಕೆಟ್ ಗಿಂತ ಮೂರು ಜನ ಬುಕ್ ಮಾಡಿದರೆ ಟೂರ್ ಪ್ಯಾಕೇಜ್ ರೇಟ್ ನಲ್ಲಿ ಕಡಿಮೆ ದರ ದೊರೆಯಲಿದೆ.
Advertisement
ಯಾವ ಸ್ಥಳಕ್ಕೆ ಎಷ್ಟು ರೂ?
ಕೃಷ್ಣಗಿರಿ ಡ್ಯಾಮ್ ಹೊಗೆನಕಲ್ ಒಂದು ದಿನದ ಟೂರ್ ಪ್ಯಾಕೇಜ್ – ಒಬ್ಬರಿಗೆ 1,480 ರೂ.
ಸೀನಿಯರ್ ಸಿಟಿಜನ್ ಗೆ 200 ರೂಪಾಯಿ ರಿಯಾಯಿತಿ
Advertisement
ತಿರುವಣ್ಣಮಲೈ-ಗಿರಿವಲಂ 2 ದಿನದ ಟೂರ್ ಪ್ಯಾಕೇಜ್ – ಒಬ್ಬರಿಗೆ 5,210 ರೂ.
ಸೀನಿಯರ್ ಸಿಟಿಜನ್ 300 ರೂ. ರಿಯಾಯಿತಿ
Advertisement
Advertisement
ಯಗಚಿ-ಚಿಕ್ಕಮಗಳೂರು ಟೂರ್ ಪ್ಯಾಕೇಜ್ – ಎರಡು ದಿನದ ಪ್ಯಾಕೇಜ್‌ಗೆ 6,460 ರೂ.
ಸೀನಿಯರ್ ಸಿಟಿಜನ್ 325 ರೂ. ರಿಯಾಯಿತಿ
ಕೊಚ್ಚಿ-ಆಲೆಪ್ಪಿ ಟೂರ್ ಪ್ಯಾಕೇಜ್ -ನಾಲ್ಕು ದಿನಕ್ಕೆ 12,980 ರೂ.
ಸೀನಿಯರ್ ಸಿಟಿಜನ್ 675 ರೂ.ರಿಯಾಯಿತಿ
ತಮಿಳುನಾಡು-ನವಗ್ರಹ ಟೂರ್ ಪ್ಯಾಕೇಜ್ – ನಾಲ್ಕು ದಿನಕ್ಕೆ ಒಬ್ಬರಿಗೆ 7,820 ರೂ.
ತೆಕ್ಕಡಿ-ಮುನ್ನಾರ್ ಟೂರ್ ಪ್ಯಾಕೇಜ್ ಐದು ದಿನಕ್ಕೆ ಒಬ್ಬರಿಗೆ 13,030 ರೂ.
ತೆಕ್ಕಡಿ-ಆಲೆಪ್ಪಿ-ಮುನಾರ್-ಆರು ದಿನಕ್ಕೆ ಒಬ್ಬರಿಗೆ 20,050 ರೂ.
ಪಂಡಾರಪುರ-ಶಿರಡಿ-ಎಲ್ಲೋರ-ಕೊಲ್ಲಾಪುರ ಟೂರ್ ಒಬ್ಬರಿಗೆ ಆರು ದಿನಕ್ಕೆ 18,590 ರೂ.