KSRTC ಟಿಕೆಟ್ ವಿತರಣ ಯಂತ್ರ ಸ್ಫೋಟ – ಸುಟ್ಟುಹೋದ ಕಂಡಕ್ಟರ್ ಕೈ

Public TV
1 Min Read
BUS ticket machine

ತಿರುವನಂತಪುರಂ: KSRTC ಬಸ್‍ನ ಟಿಕೆಟ್ ವಿತರಣ ಯಂತ್ರ ಸ್ಫೋಟಗೊಂಡು ಕಂಡಕ್ಟರ್ ಗಾಯಗೊಂಡಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ.

KSRTC KERALA

ರಾಜ್ಯ ಸಾರಿಗೆ ನಿಗಮದ ಬಸ್‍ನಲ್ಲಿ ಕಂಡೆಕ್ಟರ್ ಆಗಿ ಕೆಲಸ ನಿರ್ವಹಿಸುವ ಪೆರುಂಬೂರ್ ನಿವಾಸಿ ಎಂ.ಎಂ ಮೊಹಮ್ಮದ್ ಟಿಕೆಟ್ ವಿತರಣ ಯಂತ್ರ ಸ್ಫೋಟದಿಂದ ಗಾಯಗೊಂಡಿದ್ದಾರೆ. ತಿರುವನಂತಪುರಂ-ಸುಲ್ತಾನ್ ಬತ್ತೇರಿ ಸೂಪರ್ ಡಿಲಕ್ಸ್ ಬಸ್‍ನ ಕಂಡಕ್ಟರ್ ಮೊಹಮ್ಮದ್ ವಿಶ್ರಾಂತಿ ಕೊಠಡಿಯಲ್ಲಿ ಇರುವ ವೇಳೆ ಯಂತ್ರ ಸ್ಫೋಟಗೊಂಡಿದೆ. ಈ ವೇಳೆ ಕಂಡಕ್ಟರ್ ಕೈಗೆ ಸುಟ್ಟ ಗಾಯಗಳಾಗಿದ್ದು. ಯಂತ್ರ ಸುಟ್ಟು ಕರಕಲಾಗಿದೆ. ಬತ್ತೇರಿ ಡಿಪೋಗೆ ಸೇರಿದ ಟಿಕೆಟ್ ವಿತರಣ ಯಂತ್ರ, ಮೈಕ್ರೋಎಫ್‍ಎಕ್ಸ್ ಕಂಪನಿಗೆ ಸೇರಿದ್ದಾಗಿದೆ. ಇದನ್ನೂ ಓದಿ: ಗೋಣಿ ಚೀಲ ಒಣಗಿಸುವ ವಿಚಾರಕ್ಕೆ ಮಹಿಳೆಗೆ ಮಚ್ಚಿನೇಟು

ಶಾರ್ಟ್ ಸರ್ಕ್ಯೂಟ್‌ನಿಂದ ಯಂತ್ರ ಸ್ಫೋಟಗೊಂಡಿದೆ ಎಂದು ಕಂಪನಿ ಕಾರಣ ತಿಳಿಸಿದೆ. ಆದರೆ ಈ ಹಿಂದೆ ಕೇರಳದಲ್ಲಿ ಆಡಳಿತ ನಡೆಸಿದ್ದ LDF ಸರ್ಕಾರ ಈ ಯಂತ್ರಗಳನ್ನು ಖರೀದಿಸಿತ್ತು. ಈ ವೇಳೆ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೆ KSRTC ಯಂತ್ರ ಖರೀದಿಯ ಗುತ್ತಿಗೆಯನ್ನು ಸಾರ್ವಜನಿಕ ಕಂಪನಿಗೆ ನೀಡದೆ ಖಾಸಗಿ ಕಂಪನಿಗೆ ನೀಡಿ ಗೋಲ್‌ಮಾಲ್ ನಡೆಸಿದೆ ಎಂಬ ಮಾತು ಸದ್ದು ಮಾಡುತ್ತಿದೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

Share This Article