ಹಾಸನ: ಗಾಳಿ ಮಳೆಗೆ (Rain) ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿಯನ್ನು ತುಳಿದು ಕೆಎಸ್‍ಆರ್‌ಟಿಸಿ ನೌಕರರೊಬ್ಬರು ಸಾವಿಗೀಡಾದ ಘಟನೆ ನಗರದ (Hassan) ಬಿಟಿ ಕೊಪ್ಪಲಿನಲ್ಲಿ ನಡೆದಿದೆ.
ಮೃತರನ್ನು ನಂದೀಶ್ (41) ಎಂದು ಗುರುತಿಸಲಾಗಿದೆ. ಅವರು ವಾಕಿಂಗ್ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿಯಾದಂತಾಗಿದೆ. ಇದನ್ನೂ ಓದಿ: ರಾಜ್ಯದ 38ನೇ ಡಿಜಿ & ಐಜಿಪಿ ಆಗಿದ್ದ ಓಂ ಪ್ರಕಾಶ್ ಹತ್ಯೆ – ಪತ್ನಿಯಿಂದಲೇ ಕೊಲೆ
ಶನಿವಾರ ರಾತ್ರಿ ಸುರಿದ ಬಾರಿ ಮಳೆ ಗಾಳಿಗೆ 11 ಕೆವಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಮುಂಜಾನೆ ವಾಕಿಂಗ್ ಮಾಡುವಾಗ, ನಂದೀಶ್ ತಂತಿ ತುಳಿದಿದ್ದಾರೆ. ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಆನೇಕಲ್ | ನಿಯಂತ್ರಣ ತಪ್ಪಿ ಬೇಕರಿಗೆ ನುಗ್ಗಿದ ಬಿಎಂಟಿಸಿ ಬಸ್