ಬೆಂಗಳೂರು: ಸಾರಿಗೆ ಸಿಬ್ಬಂದಿ ಬಿಟ್ಟರೆ ಬೇರೆಯವರಿಗೆ ಸಾರಿಗೆ ಬಸ್ ಒಡಿಸಲು ಅವಕಾಶವಿಲ್ಲ. ಆದರೆ ಶಾಸಕ ರೇಣುಕಾಚಾರ್ಯ ಅವರು ಕೆಎಸ್‌ಆರ್‌ಟಿಸಿ ಬಸ್ ಚಲಾಯಿಸಿದ್ದಾರೆ, ಇದು ತಪ್ಪು ಎಂದು ಸಾರಿಗೆ ಸಿಬ್ಬಂದಿ ಶಾಸಕರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಹೊನ್ನಾಳಿ ಶಾಸಕ ರೇಣುಕಾಚಾರ್ಯಗೂ ವಿವಾದಗಳಿಗೂ ಬಿಡಲಾರದ ನಂಟು. ಸದಾ ಒಂದಿಲ್ಲೊಂದು ಗಾಸಿಪ್ ಗಳಿಂದಲೇ ಸುದ್ದಿಯಾಗೋರು ರೇಣುಕಾಚಾರ್ಯ ಅವರು ಪ್ರವಾಹದ ವೇಳೆಯಲ್ಲಿ ಅಂಬಿಗನಾಗಲು ಹೋಗಿ ಭಾರೀ ಟೀಕೆಗೆ ಒಳಗಾಗಿದ್ದರು. ತದನಂತರ ಜನವರಿ 5ರಂದು ಹೊನ್ನಾಳಿಯಲ್ಲಿ ಬಸ್ ಉದ್ಘಾಟನೆ ವೇಳೆ ಕೆಎಸ್‌ಆರ್‌ಟಿಸಿ ಡ್ರೈವರ್ ಡ್ರೆಸ್ ಹಾಕ್ಕೊಂಡು ಸುಮಾರು 60 ಕಿ.ಮೀ ಬಸ್ ಓಡಿಸಿದ್ದು ಎಲ್ಲೆಡೆ ಭಾರೀ ವಿವಾದವಾಗಿತ್ತು. ಇದನ್ನೂ ಓದಿ: 60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ
Advertisement
Advertisement
ಈ ವಿಷಯಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ವಿರುದ್ಧ ಕೇಸ್ ಹಾಕಲು ಸಾರಿಗೆ ಸಿಬ್ಬಂದಿ ನಿರ್ಧರಿಸಿದ್ದಾರೆ. ಶಾಸಕರು ಅನ್ಯ ವ್ಯಕ್ತಿಗಳು ಬಸ್ ಓಡಿಸಬಹುದೇ ಎಂದು ಬಸ್ ಕಂಡೆಕ್ಟರ್ ಆಗಿರೋ ಯೋಗೇಶ್ ಗೌಡ ಆರ್‌ಟಿಐ ಮೂಲಕ ಮಾಹಿತಿ ಕೋರಿ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದರು. ಆರ್‌ಟಿಐ ನಿಯಮದ ಮಾಹಿತಿ ಪ್ರಕಾರ ಸರ್ಕಾರಿ ಬಸ್ಸನ್ನು ಈ ರೀತಿ ಶಾಸಕರು ಬಸ್ ಓಡಿಸುವಂತಿಲ್ಲ. ಸಾರಿಗೆಯ ನುರಿತ ಸಿಬ್ಬಂದಿಗಷ್ಟೇ ಬಸ್ ಓಡಿಸಲು ಅವಕಾಶವಿದೆ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: ದಡ ಸೇರಿದ್ದ ತೆಪ್ಪಕ್ಕೆ ಹುಟ್ಟು ಹಾಕಿ ಪೋಸ್- ರೇಣುಕಾಚಾರ್ಯ ಟ್ರೋಲ್
Advertisement
ಇದನ್ನೇ ಆಧರಿಸಿ ಯೋಗೇಶ್ ಅವರು ರೇಣುಕಾಚಾರ್ಯ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ಹೀಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯರ ಹೊಸ ಅವತಾರಗಳು ಅವರ ಪಾಲಿಗೆ ಮುಳುವಾಗಿತ್ತಿರೋದಂತೂ ಸತ್ಯ.