ಬೀದರ್: ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು ಗುಂಬಜ್ ನಿರ್ಮಿಸಿ ಕನ್ನಡಾಭಿಮಾನ ಮೆರೆದಿದ್ದಾರೆ. ಗಡಿ ಜಿಲ್ಲೆಯ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಅಷ್ಟೂರು ಗುಂಬಜ್ ನಿರ್ಮಾಣ ಮಾಡಿ ಕನ್ನಡದ ಹಬ್ಬಕ್ಕೆ ಸಮರ್ಪಣೆ ಮಾಡಿದ್ದಾರೆ. ಡಿಪೋದಲ್ಲಿನ ವಸ್ತುಗಳಿಂದ 20ಕ್ಕೂ ಹೆಚ್ಚು ಸಿಬ್ಬಂದಿಗಳು ಕಲಾವಿದರಾಗಿ ನಿರ್ಮಾಣ ಮಾಡಿದ ಅಪರೂಪದ ಕನ್ನಡದ ಗುಂಬಜ್ ಇದು.
Advertisement
ಬೀದರ್‍ನ ನೌಬಾದ್‍ನಲ್ಲಿರುವ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಕೆಲಸದ ನಡುವೆ ಬಿಡುವಿನ ವೇಳೆಯಲ್ಲಿ ಡಿಪೋದಲ್ಲಿನ ಕಬ್ಬಿಣದ ವಸ್ತುಗಳಿಂದ ಅಪರೂಪದ ಕನ್ನಡದ ಗುಂಬಜ್ ಮಾಡಿ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದ್ದಾರೆ. 20ಕ್ಕೂ ಹೆಚ್ಚು ಕೆಎಸ್‍ಆರ್‍ಟಿಸಿ ಡೀಪೋ ಸಿಬ್ಬಂದಿಗಳು ಹಿಂದೂ, ಮುಸ್ಲಿಂ ಧರ್ಮದ ಐಕ್ಯತೆ ಸಾರುವ ಅಷ್ಟೂರು ದರ್ಗಾದ ಗುಂಬಜ್ ನಿರ್ಮಾಣ ಮಾಡಿ ಕನ್ನಡ ಕಹಳೆ ಮೊಳಗಿಸಿದ್ದಾರೆ.
Advertisement
Advertisement
ಸತತ 12 ದಿನಗಳ ಪರಿಶ್ರಮದಿಂದ ಈ ಐತಿಹಾಸಿಕ ಅಷ್ಟೂರು ಗುಂಬಜ್ ನಿರ್ಮಾಣ ಮಾಡಿದ್ದು, ಗಡಿ ಭಾಗದಲ್ಲಿ ಅನ್ಯಭಾಷೆಗಳ ಪ್ರಭಾವಕ್ಕೆ ಒಳಗಾಗುತ್ತಿರುವ ಕನ್ನಡಕ್ಕೆ ಮತ್ತೆ ಜೀವ ತುಂಬಿದ್ದಾರೆ.
Advertisement
ಒಂದು ಕಡೆ ತೆಲುಗು ಮೊತ್ತೊಂದು ಕಡೆ ಮರಾಠಿ, ಮೊಗದೊಂದು ಕಡೆ ಉರ್ದು, ಹಿಂದಿ ಭಾಷೆಗಳ ಪ್ರಭಾವಕ್ಕೆ ನಲುಗಿ ಹೋಗಿರುವ ಗಡಿ ಜಿಲ್ಲೆ ಬೀದರ್‍ನಲ್ಲಿ ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು ಮತ್ತೆ ಕನ್ನಡದ ಕಂಪನ್ನು ಸೂಸಿದ್ದಾರೆ. ಈ ಕನ್ನಡದ ಗುಂಬಜ್ ಇಂದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಮಾಡಿ ನಂತರ ನೆಹರು ಸ್ಟೇಡಿಯಂನಲ್ಲಿ ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜೋತ್ಸವ ಕಾರ್ಯಕ್ರಮದ ಭಾಗವಾಗಲಿದೆ.