ಬೆಂಗಳೂರು: ಕೆಎಸ್‍ಆರ್‌ಟಿಸಿ (KSRTC) ಬಸ್‍ಗಳಲ್ಲಿ (Bus) ಇನ್ಮುಂದೆ 30 ಕೆಜಿವರೆಗೆ ಉಚಿತ ಲಗೇಜ್ ಸಾಗಿಸಲು ಅವಕಾಶ ಕಲ್ಪಿಸಿದೆ. ಆದ್ರೆ ನಾಯಿಗಳನ್ನು (Dog) ಬಸ್‍ಗಳಲ್ಲಿ ಕೊಂಡೊಯ್ಯುವುದಾದ್ರೇ ಅದಕ್ಕೆ ಫುಲ್ ಟಿಕೆಟ್ (Ticket) ಪಡೆಯಬೇಕು ಎಂದು ಕೆಎಸ್‍ಆರ್‌ಟಿಸಿ ಸುತ್ತೋಲೆ ಹೊರಡಿಸಿದೆ. ನಾಯಿ ಮರಿಗೆ ಅರ್ಧ ಟಿಕೆಟ್ ಎಂದು ಉಲ್ಲೇಖಿಸಿದೆ.
Advertisement
ಬಸ್‌ನಲ್ಲಿ 30 ಕೆ.ಜಿವರೆಗೂ ಉಚಿತ ಲಗೇಜ್ ಸಾಗಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಬಸ್‍ನಲ್ಲಿ ಇರುವ ಸ್ಥಳಾವಕಾಶ ಬಳಕೆಗೆ ಪ್ರಯಾಣಿಕರ ಸಹಿತ, ಪ್ರಯಾಣಿಕರ ರಹಿತ ಸಾಗಣೆ ಬಗ್ಗೆ ಉಲ್ಲೇಖಸಿದೆ. ಪ್ರಯಾಣಿಕರ ವೈಯಕ್ತಿಕ ಲಗೇಜ್, ಬ್ಯಾಗ್, ಸೂಟ್ ಕೇಸ್ ಇತ್ಯಾದಿ ಪರಿಮಿತಿ ಮೀರದಂತೆ ಸೂಚಿಸಿದೆ. ಇದನ್ನೂ ಓದಿ: ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ – ಕಾಂಗ್ರೆಸ್‍ಗೆ ಬೊಮ್ಮಾಯಿ ಸವಾಲು
Advertisement
Advertisement
ಒಂದು ವೇಳೆ 30 ಕೆ.ಜಿಗಿಂತ ಹೆಚ್ಚು ಲಗೇಜ್ ಇದ್ದರೆ 30 ಕೆ.ಜಿಯನ್ನು ಉಚಿತವಾಗಿ ಪರಿಗಣಿಸಿ ಉಳಿದ ಲಗೇಜ್‍ಗೆ ಚಾರ್ಜ್ ಮಾಡಲು ತಿಳಿಸಿದೆ. 30 ಕೆಜಿ ವರೆಗೂ ಉಚಿತ ಲಗೇಜ್‍ಗೆ ಅವಕಾಶ ಕೊಟ್ಟು ನಾಯಿ ಕೊಂಡೊಯ್ಯುವುದಾದರೆ ಫುಲ್ ಟಿಕೆಟ್ ವಿಧಿಸಿದೆ. ನಾಯಿ ಮರಿ ಕೊಂಡೊಯ್ದರೆ ಅರ್ಧ ಟಿಕೆಟ್ ವಿಧಿಸಿದೆ. ಇದನ್ನೂ ಓದಿ: 5 ದಿನಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಗುಜರಾತ್‌ನ ಕೇಬಲ್ ಸೇತುವೆ ಕುಸಿತ – ಅಪಾಯದಲ್ಲಿ 100ಕ್ಕೂ ಹೆಚ್ಚು ಮಂದಿ