ಬೆಂಗಳೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪ್ರಯಾಣಿಕರಿಗೆ ವಿಶೇಷ ಟೂರ್ ಪ್ಯಾಕೇಜ್ ಬಿಡುಗಡೆ ಮಾಡಿದೆ.
ಮೈಸೂರು ದಸರಾ ವೈಭವ ನೋಡಲು ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಿ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಮೈಸೂರಿನಿಂದ ಒಂದು ದಿನದ ಟೂರ್ ವ್ಯವಸ್ಥೆ ಮಾಡಲಾಗಿದೆ. ಈ ಪ್ಯಾಕೇಜ್ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 13ರವರೆಗೆ ಇರಲಿದೆ. ಇದರಲ್ಲಿ ಗಿರಿ ದರ್ಶಿನಿ, ಜಲದರ್ಶಿನಿ ಹಾಗೂ ದೇವ ದರ್ಶಿನಿ ಎಂಬ ಮೂರು ರೀತಿಯ ವಿಶೇಷ ಪ್ಯಾಕೇಜ್‍ಗಳಿದ್ದು, ಎಲ್ಲಾ ದರಗಳು ಮೈಸೂರಿನಿಂದ ಅನ್ವಯವಾಗುತ್ತವೆ.
Advertisement
ಗಿರಿ ದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ. ಈ ಒಂದು ದಿನದ ವಿಶೇಷ ಪ್ಯಾಕೇಜ್‍ಗಾಗಿ ವಯಸ್ಕರಿಗೆ 350 ರೂ. ಹಾಗೂ ಮಕ್ಕಳಿಗೆ 175 ರೂ. ಪಡೆಯಲಾಗುತ್ತದೆ.
Advertisement
Advertisement
ಜಲ ದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ, ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ, ಕೆಆರ್‍ಎಸ್. ಈ ಪ್ಯಾಕೇಜ್ ಅನ್ವಯ ವಯಸ್ಕರಿಗೆ 375 ರೂ. ಹಾಗೂ ಮಕ್ಕಳಿಗೆ 190 ರೂ. ನಿಗದಿಯಾಗಿದೆ.
Advertisement
ದೇವ ದರ್ಶಿನಿ: ನಂಜನಗೂಡು, ಬ್ಲಫ್, ಮುಡುಕು ತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗ ಪಟ್ಟಣ. ಈ ಪ್ಯಾಕೇಜ್‍ನ ದರವು ವಯಸ್ಕರಿಗೆ 275 ರೂ. ಹಾಗೂ ಮಕ್ಕಳಿಗೆ 140 ರೂ. ಆಗಿದೆ.
ಇವುಗಳ ಜೊತೆಗೆ ಐರಾವತ ಕ್ಲಬ್ ಕ್ಲಾಸ್ ಬಸ್ ಪ್ಯಾಕೇಜ್ ಸಹ ನೀಡಲಾಗಿದೆ. ಇದರಲ್ಲಿ ಮಡಿಕೇರಿ, ಬಂಡೀಪುರ, ಶಿಂಷಾ, ಊಟಿ ಎಂಬ 4 ರೀತಿಯ ವಿಶೇಷ ಪ್ಯಾಕೇಜ್ ಇರಲಿದೆ.
ಮಡಿಕೇರಿ ಪ್ಯಾಕೇಜ್: ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ರಾಜಾಸೀಟ್, ಅಬ್ಬಿ ಫಾಲ್ಸ್. ಈ ಪ್ಯಾಕೇಜ್‍ಗಾಗಿ ವಯಸ್ಕರಿಗೆ 1,200 ರೂ. ಹಾಗೂ ಮಕ್ಕಳಿಗೆ 900 ರೂ. ಪಡೆಯಲಾಗುತ್ತದೆ
ಬಂಡೀಪುರ ಪ್ಯಾಕೇಜ್: ಸೋಮನಾಥಪುರ, ತಲಕಾಡು, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ, ನಂಜನಗೂಡು. ಈ ವಿಶೇಷ ಪ್ಯಾಕೇಜ್‍ನ ದರವು ವಯಸ್ಕರಿಗೆ 1,000 ರೂ. ಹಾಗೂ ಮಕ್ಕಳಿಗೆ 750 ರೂ. ನಿಗದಿಯಾಗಿದೆ.
ಶಿಂಷಾ ಪ್ಯಾಕೇಜ್: ಶಿವನ ಸಮುದ್ರ, ಶ್ರೀರಂಗ ಪಟ್ಟಣ, ರಂಗನತಿಟ್ಟು, ಬಲಮುರಿ ಫಾಲ್ಸ್, ಕೆಆರ್‍ಎಸ್. ಈ ಪ್ಯಾಕೇಜ್‍ಗಾಗಿ ವಯಸ್ಕರಿಗೆ 800 ರೂ. ಹಾಗೂ ಮಕ್ಕಳಿಗೆ 600 ರೂ. ಪಡೆಯಲಾಗುತ್ತದೆ.
ಊಟಿ ಪ್ಯಾಕೇಜ್: ಊಟಿ, ಬಟಾನಿಕಲ್ ಗಾರ್ಡನ್, ಇಟಾಲಿಯನ್ ಮತ್ತು ರೋಸ್ ಗಾರ್ಡನ್, ಬೋಟ್ ಹೌಸ್. ಈ ಪ್ಯಾಕೇಜ್‍ನ ದರವು ವಯಸ್ಕರಿಗೆ 1,600 ಹಾಗೂ ಮಕ್ಕಳಿಗೆ 1,200 ಆಗಿದೆ.
ಈ ವಿಶೇಷ ಸಾರಿಗೆಗಳು ಬೆಳಗ್ಗೆ ಮೈಸೂರಿನಿಂದ ಹೊರಟು, ವಿವಿಧ ಸ್ಥಳಗಳಿಗೆ ಸಂದರ್ಶಿಸಿ, ಸಂಜೆ ವೇಳೆಗೆ ಮೈಸೂರಿಗೆ ಮರಳುತ್ತವೆ. ಈ ವಿಶೇಷ ಪ್ಯಾಕೇಜ್ ಟೂರ್ ಟಿಕೆಟ್‍ಗಳನ್ನು Ksrtc.in ನಲ್ಲಿ ಕಾಯ್ದಿರಸಬಹುದಾಗಿದೆ.