ಬೆಂಗಳೂರು: KSRTC ವತಿಯಿಂದ ನೂತನ 100 ಅಶ್ವಮೇಧ ಕ್ಲಾಸ್ ಬಸ್ (Ashwamedha Classic Bus) ಲೋಕಾರ್ಪಣೆಗೊಳಿಸಿದರು. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ನೂತನ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು. ಏಪ್ರಿಲ್ ವೇಳೆಗೆ 800 ಅಶ್ವಮೇಧ ಕ್ಲಾಸಿಕ್ ಬಸ್‌ಗಳು ರಸ್ತೆಗೆ ಇಳಿಯಲಿದ್ದು, ಸೋಮವಾರ (ಫೆ.5) ಮೊದಲ ಹಂತದಲ್ಲಿ 100 ಬಸ್‌ಗಳಿಗೆ ಚಾಲನೆ ನೀಡಿದ್ದಾರೆ.
Advertisement
ಅಶ್ವಮೇಧ ಕ್ಲಾಸಿಕ್ ಬಸ್ ವಿಶೇಷತೆ ಏನು?
* ಎಕ್ಸ್‌ಪ್ರೆಸ್ (Express Bus) ಹೆಸರಿನಲ್ಲಿ ಬಸ್ ಆಪರೇಟ್ ಆಗಲಿದೆ. ವಾಹನದ ಎತ್ತರ 3.4 ಮೀಟರ್ ಇದೆ. 50ಕ್ಕೂ ಹೆಚ್ಚು ಆಸನಗಳನ್ನ ಒಳಗೊಂಡಿದೆ. ಎತ್ತರದ, ಉತ್ತಮ ಗುಣಮಟ್ಟದ ಕುಷನ್ ಮತ್ತು ರೆಕ್ಸಿನ್ ಒಳಗೊಂಡ ಆಸನಗಳಿವೆ. ಪ್ರತಿ ಆಸನದ ಹಿಂಬದಿಯಲ್ಲಿ ಮ್ಯಾಗ್ ಜಿನ್ ಹಾಗೂ ವಾಟರ್ ಪೌಚ್‌ನ ಸೌಲಭ್ಯ ಒಳಗೊಂಡಿದೆ. ಇದನ್ನೂ ಓದಿ: ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ
Advertisement
Advertisement
* ವಿಶಾಲವಾದ ವಾಹನದ ಮುಂದಿನ ಹಾಗೂ ಹಿಂದಿನ ಗಾಜು. ವಿಶಾಲವಾದ ಪ್ರಯಾಣಿಕರ ಕಿಟಕಿ ಫ್ರೇಮ್ ಹಾಗೂ ಮೇಲಿನ ಗಾಜು. ಮೇಲ್ಚಾವಣಿಯಲ್ಲಿ 2 ಸಾಲು ಗ್ರಾಬ್ ರೈಲ್. ಬಸ್ಸಿನ ಹಿಂದೆ ಮತ್ತು ಮುಂದೆ LED ಮಾರ್ಗ ಫಲಕ ಅಳವಡಿಕೆ. ಜಾಹೀರಾತು ಮಾದರಿಯ ಹ್ಯಾಂಡ್ ಗ್ರಿಪ್. FRP ಡ್ಯಾಶ್ ಬೋರ್ಡ್ ವ್ಯವಸ್ಥೆ ಇದೆ. ಇದನ್ನೂ ಓದಿ: ಸಿಲಿಕಾನ್ ಸಿಟಿ ಸೇರಿದಂತೆ 4 ತಿಂಗಳು ರಾಜ್ಯವನ್ನ ಕಾಡಲಿದೆ ರಣಬಿಸಿಲು
Advertisement
* ಮೇಲ್ಚಾವಣಿ (ಸಲೂನ್) ಎಲ್‌ಇಡಿ ಸ್ಕ್ರಿಪ್ಟ್ 2 ಸಂಖ್ಯೆ ಲೈಟ್. ಪ್ರವೇಶದ ಫುಟ್ ಸ್ಟೆಪ್ ಮೇಲೆ ಸ್ಕ್ರಿಪ್ಟ್ ಮಾದರಿಯ ಎಲ್‌ಇಡಿ ಬಲ್ಬ್ ಗಳು. ಬಸ್ ಮುಂಬದಿ, ಹಿಂಬದಿ ತಲಾ 1 ಕ್ಯಾಮರಾ ಅಳವಡಿಕೆ. ಎಲೆಕ್ಟ್ರಾನಿಕ್ ವಾಹನ ಸ್ಥಿರತೆ ನಿಯಂತ್ರಣ ಉಪಕರಣ ಅಳವಡಿಕೆ (EVSC) Bs-6OBD 2 ಕಂಪ್ಲೈಂಟ್. ವಾಹನಕ್ಕೆ ಟ್ರ್ಯಾಕಿಂಗ್ ಉಪಕರಣ, ಪ್ಯಾನಿಕ್ ಬಟನ್ ಗಳು ಮತ್ತು ಬಸ್ ನಿಲ್ದಾಣಗಳ ಮಾಹಿತಿ ನೀಡುವ ಧ್ವನಿವರ್ಧಕ ಯಂತ್ರಗಳ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಜಿಡಿಎಸ್‌ಗೆ ವೋಟ್ ಹಾಕಿದ್ದಕ್ಕೆ ಗಂಗಾ ಕಲ್ಯಾಣ ಪಟ್ಟಿಗೆ ತಡೆ – ಸಚಿವ ವೆಂಕಟೇಶ್ ವಿರುದ್ಧ ರೈತರ ಕಿಡಿ