ಬೆಂಗಳೂರು: ಮನೆಯಲ್ಲಿ ನಾಯಿ, ಬೆಕ್ಕು, ಪಕ್ಷಿಗಳನ್ನೂ ಸಾಕೋ ಪ್ರಾಣಿ ಪ್ರಿಯರದ್ದು, ಒಂದೇ ಕಂಪ್ಲೇಂಟ್ ರಜೆ, ವೀಕ್ ಎಂಡ್ ಅಂತಾ ಬಂದ್ರೆ ತಮ್ಮ ಪೆಟ್ಸ್‍ನ್ನ ಬಿಟ್ಟು ಊರು ಸುತ್ತೋಕ್ಕೆ ಹೋಗೋದಕ್ಕೇ ಆಗಲ್ವಲ್ಲ ಅನ್ನೋದು.. ಆದ್ರೇ ಇನ್ಮುಂದೆ ಈ ಸಮಸ್ಯೆಗೆ ಬ್ರೆಕ್ ಬಿದ್ದಿದೆ.
ಹೌದು. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ನಿಮ್ಮ ಪೆಟ್‍ಗೆ ಒಬ್ಬ ವ್ಯಕ್ತಿಯ ಪ್ರಯಾಣ ದರವನ್ನು ನೀಡಿ ಟಿಕೇಟ್ ಪಡೆಯ ಬೇಕು ಅಷ್ಟೆ. ಇದರ ಜೊತೆ, ಇನ್ಮುಂದೆ ಬಸ್‍ನಲ್ಲಿ ಎದ್ವಾ ತದ್ವಾ ಲಗೇಜ್ ಸಹ ಕೊಂಡು ಹೂಯುವಂತ್ತಿಲ್ಲ. ಪ್ರತಿ ವ್ಯಕ್ತಿಗೆ 30 ಕೆಜಿ ಹಾಗೂ ಮಕ್ಕಳಿಗೆ 15 ಕೆಜಿ ಲಗೇಜ್ ನಿಗಧಿಗೊಳಿಸಿದ್ದು, ಅದಕ್ಕಿಂತ ಹೆಚ್ಚು ಲಗೇಜ್ ತಂದ್ರೆ ಒಂದು ಕೆಜಿಗೆ ಒಂದು ರೂಪಾಯಿ ಬಾಡಿಗೆ ನೀಡಬೇಕು.
Advertisement
ಫೆಬ್ರವರಿ ಒಂದರಿಂದ ಈ ದರ ಜಾರಿಗೆ ಬರಲಿದೆ. ಕೆಎಸ್‍ಆರ್‍ಟಿಸಿಯ ಈ ಯೋಜನೆ ಬಗ್ಗೆ ಪ್ರಯಾಣಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದ್ರಿಂದ ಬಸ್‍ನ ವಾತಾವರಣ ಹಾಳಾಗೋದ್ರ ಜೊತೆಗೆ ಆರಾಮದಾಯಕ ಪ್ರಯಾಣಕ್ಕೆ ಧಕ್ಕೆಯಾಗುತ್ತೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.