ಬಾಗಲಕೋಟೆ: ಆಂಧ್ರ ಪ್ರದೇಶದ ಪ್ರಸಿದ್ಧ ಯಾತ್ರಾ ಕ್ಷೇತ್ರ ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಮತ್ತೆ ಹಲ್ಲೆ ನಡೆದಿದೆ.
ಕೆಎಸ್‍ಆರ್‌ಟಿಸಿ ಬಸ್ ಚಾಲಕ ಬಸವರಾಜ್ ಬಿರಾದಾರ್ ಮೇಲೆ 10-12 ಜನರ ಗುಂಪೊಂದು ಹಲ್ಲೆ ಮಾಡಿದೆ. ಗಾಜು ಪುಡಿ-ಪುಡಿ ಮಾಡಿದ ಕಿಡಿಗೇಡಿಗಳು, ಕಟ್ಟೆಯ ಮೇಲೆ ಮಲಗಿದ್ದ ಬಿರಾದಾರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಅಶ್ಲೀಲವಾಗಿ ನಿಂದಿಸಿ, ಕರ್ನಾಟಕದವನು ಇಲ್ಲೇಕೆ ಇದ್ದೀಯಾ? ಅಂತಲೇ ಬಸ್ ಮೇಲೆ ಕಲ್ಲು ತೂರಿದ್ದಾರೆ. ಪ್ರಶ್ನಿಸಿದ್ದಕ್ಕೆ ನನ್ನ ಮುಖ, ಕಾಲಿಗೆ ಕಲ್ಲಿನಿಂದ ಹೊಡೆದ್ದಾರೆ ಎಂದು ಡ್ರೈವರ್ ಬಸವರಾಜ್ ಹೇಳಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ- ಎಲ್ಲಾ ಆರೋಪಗಳಿಗೆ ಸರ್ಕಾರ ಸ್ಪಷ್ಟನೆ
ಬಳಿಕ ಸಾರಿಗೆ ನಿಯಂತ್ರಕರಿಗೆ ತಿಳಿಸಿ, ಬಸ್‍ಗಳ ಚಾಲಕರು, ನಿರ್ವಾಹಕರು ಎದ್ದು ಬರುವಷ್ಟರಲ್ಲಿ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ. ತೀವ್ರವಾಗಿ ಗಾಯಗೊಂಡ ಬಸವರಾಜ್ ಅವರನ್ನು ಸಮೀಪದ ಸುನ್ನಿಪೇಠ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಶ್ರೀಶೈಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆ ಯುಗಾದಿ ಸಂದರ್ಭ ಮಾರ್ಚ್ 31 ರಂದು ಕನ್ನಡಿಗರ ಮೇಲೆ ಹಲ್ಲೆ ನಡೆದಿತ್ತು.