ಮಂಡ್ಯ: ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇತ್ತ ಮಹಾಮಳೆಗೆ ಸಕ್ಕರೆ ನಾಡು ಮಂಡ್ಯ ತತ್ತರಿಸಿದೆ. ನಾಗಮಂಗಲ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ ಜಲಾವೃತಗೊಂಡಿದೆ.
ಸತತ ಮಳೆಗೆ ಬಸ್ ನಿಲ್ದಾಣವೇ ಕೆರೆಯಂತಾಗಿದೆ. ಹೀಗಾಗಿ 20ಕ್ಕೂ ಅಧಿಕ ಬಸ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಡಿಪೋದಲ್ಲಿರೋ ಕೆಎಸ್‍ಆರ್‌ಟಿಸಿ ಕಚೇರಿಯೂ ಮುಳುಗಡೆಯಾಗಿದ್ದು, ಸಿಬ್ಬಂದಿ ತೆಪ್ಪದಲ್ಲಿ ಕಡತಗಳನ್ನು ಹೊತ್ತುತಂದಿದ್ದಾರೆ. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್
ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಂಷಾ ನದಿ ಭೋರ್ಗರೆದು ಹರಿಯುತ್ತಿದೆ. ನದಿಯ ಭೋರ್ಗರೆತಕ್ಕೆ ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನ ಮುಂಭಾಗವಿರುವ ಮದ್ವವನ ಕೊಚ್ಚಿ ಹೋಗಿದೆ. ಅಲ್ಲದೆ ಇದೀಗ ಮತ್ತಷ್ಟು ಭಾಗ ಕುಸಿಯುವ ಭೀತಿಯಲ್ಲಿದೆ.