-ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಆದೇಶ ಪ್ರಕಟ
ಬೆಂಗಳೂರು: ಇನ್ಮುಂದೆ ಕಲ್ಯಾಣ ಕರ್ನಾಟಕ KSRTC ಬಸ್‍ಗಳಲ್ಲಿ ಮೊಬೈಲ್‍ನಲ್ಲಿ ಲೌಡ್ ಸ್ಪೀಕರ್ ಇಟ್ಟು ಸಾಂಗ್ ಕೇಳೋದು ಸಿನಿಮಾ ನೋಡೋದನ್ನು ನಿರ್ಬಂಧಿಸಿದೆ.
Advertisement
ಈ ಬಗ್ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ. ಒಂದ್ವೇಳೆ ಹಾಡು, ಸಿನಿಮಾ ಹಾಕಿಕೊಳ್ಳಬೇಕಿದ್ರೆ ಮೊದಲು ಬಸ್ ನಿರ್ವಾಹಕ, ಪ್ರಯಾಣಿಕರ ಅನುಮತಿ ಪಡೆದಕೊಳ್ಳಬೇಕಿದೆ. ಈ ಆದೇಶ ಉಲ್ಲಂಘಿಸಿದರೆ ಬಸ್‍ನ್ನು ಅರ್ಧದಾರಿಯಲ್ಲೇ ನಿಲ್ಲಿಸಿ ಆ ಪ್ರಯಾಣಿಕನನ್ನು ಕೆಳಗೆ ಇಳಿಸಬೇಕು ಎಂದು ತಿಳಿಸಿದೆ. ಸಮಸ್ಯೆ ಎದುರಾದರೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ನಿರ್ವಾಹಕರಿಗೆ ಸೂಚಿಸಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಮುಚ್ಚಿಹಾಕಲು ಬಿಜೆಪಿ, ಕಾಂಗ್ರೆಸ್ ಯತ್ನ: ಎಚ್‍ಡಿಕೆ
Advertisement
Advertisement
ಕೆಎಸ್‌ಆರ್‌ಟಿಸಿ ಸಾರಿಗೆ ರಾಜ್ಯದೊಳಗೆ ಮತ್ತು ನೆರೆ-ಹೊರೆಯ ಅಂತರ ರಾಜ್ಯ ಪ್ರದೇಶಗಳಲ್ಲಿ ವಿವಿಧ ಮಾದರಿಯ ಸೇವೆಗಳನ್ನು ಕಲ್ಪಿಸಿಕೊಡುತ್ತಿದೆ. ಈ ನಡುವೆ ಪ್ರಯಾಣಿಕರು ಬಸ್‍ನಲ್ಲಿ ಮೊಬೈಲ್ ದೂರವಾಣಿಯ ಮೂಲಕ ಹಾಡು, ಸಿನಿಮಾಗಳನ್ನು ಜೋರಾಗಿ ಹಾಕುವುದರಿಂದ ಶಬ್ದ ಮಾಲಿನ್ಯ ಮತ್ತು ಇತರ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ಮನಗಂಡು ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ. ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989, ನಿಯಮ 94(1)(V)ರ ಪ್ರಕಾರ ಬಸ್‍ನಲ್ಲಿ ಜೋರಾಗಿ ಹಾಡು, ಸಿನಿಮಾಗಳನ್ನು ಹಾಕುವುದನ್ನು ನಿರ್ಬಂಧಿಸಿದೆ. ಇದನ್ನೂ ಓದಿ: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆ
Advertisement