ಕಾರವಾರ: ಇಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಎಲ್ಲರೂ ತಮ್ಮ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಹೀಗೆಯೇ ಕಾರವಾರದ ಬಸ್ ಚಾಲಕರೊಬ್ಬರು ಕರ್ತವ್ಯದ ನಡುವೆ ಬಸ್ ನಿಲ್ಲಿಸಿ ಮತ ಹಾಕಿದ್ದಾರೆ.
ಶಿರಸಿ ಡಿಪೋದ ಚಾಲಕ ಇಬ್ರಾಹಿಂ ಶೇಖ್ ಬಸ್ ನಿಲ್ಲಿಸಿ ಮತದಾನ ಮಾಡಿದ್ದಾರೆ. ಶಿರಸಿಯ ಹುಬ್ಬಳ್ಳಿ ರಸ್ತೆಯಲ್ಲಿರುವ 93ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿ ನಂತರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಏಪ್ರಿಲ್ 18 ಮೊದಲ ಹಂತದ ಚುನಾವಣೆಯ ವೇಳೆ ದಕ್ಷಿಣ ಕನ್ನಡದ ಬಸ್ ಚಾಲಕರೊಬ್ಬರು ಇದೇ ರೀತಿ ಕರ್ತವ್ಯದ ನಡುವೆ ಬಸ್ ನಿಲ್ಲಿಸಿ ಮತ ಹಾಕಿದ್ದರು. ಜಯರಾಜ್ ಎಂಬ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಜಯರಾಜ್ ಶೆಟ್ಟಿ ಡ್ರೈವಿಂಗ್ ಮಾಡುತ್ತಿದ್ದರು. ಈ ವೇಳೆ ಅವರು ತಮ್ಮ ಬೂತ್ ಹತ್ತಿರ ಬಂದಾಗ ಬಸ್ ನಿಲ್ಲಿಸಿ, ಓಡಿಕೊಂಡು ಹೋಗಿ ಮತ ಹಾಕಿ ಬಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.