CrimeDistrictsKarnatakaLatestMain PostYadgir

ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ಫೇಲ್ – ಸರಣಿ ಅಪಘಾತ, ತಪ್ಪಿತು ದುರಂತ

Advertisements

ಯಾದಗಿರಿ:  ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ನಡೆದ ಘಟನೆ ನಗರದ ಹಳೆ ಬಸ್ ನಿಲ್ದಾಣದ ಬಳಿ ನಡೆದಿದೆ.

ರಾಯಚೂರ್ ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದಿಂದ ಯಾದಗಿರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಬ್ರೇಕ್ ಫೇಲ್ ಆಗಿ ಎರಡು ಕಾರು ತಲಾ 1 ಬೈಕ್, ಆಟೋಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಹಾಗೂ ಆಟೋದಲ್ಲಿದ್ದ ಓರ್ವ ಮಹಿಳೆ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಆದಿತ್ಯಾ ಠಾಕ್ರೆಗೆ ಬೆದರಿಕೆ – ಬೆಂಗಳೂರು ವ್ಯಕ್ತಿ ಬಂಧನ

ಸರಣಿ ಅಪಘಾತದ ಬಳಿಕ ಬಸ್ ಸುಮಾರು 500 ಮೀ. ದೂರದಲ್ಲಿ ಹೋಗಿ ನಿಂತಿದ್ದು, ಬಸ್‍ನಲ್ಲಿ ಯಾರು ಪ್ರಯಾಣಿಕರು ಇಲ್ಲದ ಕಾರಣ ದೊಡ್ಡ ದುರಂತ ತಪ್ಪಿದೆ. ಘಟನೆಯ ಬಳಿಕ ಯಾದಗಿರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬ್ರೇಕ್ ಫೇಲ್ ಆಗಿ ಈ ದುರಂತ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಳಿಕ ಯಾದಗಿರಿ ಡಿಪೋಗೆ ಬಸ್ಸನ್ನು ತೆಗೆದುಕೊಂಡು ಹೋಗಲಾಗಿದೆ. ಇದನ್ನೂ ಓದಿ: ಕೈಗಳನ್ನು ಮುರಿದು, ಕಾಲುಗಳಿಗೆ ಮೊಳೆ ಚುಚ್ಚಿ ಆರ್‌ಟಿಐ ಕಾರ್ಯಕರ್ತನಿಗೆ ಚಿತ್ರಹಿಂಸೆ

Leave a Reply

Your email address will not be published.

Back to top button