ಚಾಮರಾಜನಗರ: ಬಸ್ ಪಲ್ಟಿಯಾಗಿ ವೃದ್ದೆ ಸಾವನ್ನಪ್ಪಿ, 30ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಹನೂರು ತಾಲೂಕಿನ ಪಿ ಜಿ ಪಾಳ್ಯ ಸಮೀಪದ ಮಾಳಿಗನತ್ತ ಹಳ್ಳಕ್ಕೆ KSRTC ಬಸ್ ಉರುಳಿ ಬಿದ್ದಿದೆ. ಓರ್ವ ವೃದ್ಧೆ ಸಾವನಪ್ಪಿ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ
ಕೆಎಸ್‍ಆರ್‌ಟಿಸಿ ಬಸ್ ಮಧ್ಯಾಹ್ನ ಕೊಳ್ಳೇಗಾಲದಿಂದ ಪಿಜಿ ಪಾಳ್ಯ ಗ್ರಾಮಕ್ಕೆ ತೆರಳುವ ವೇಳೆ ಮಾಳಿಗನತ್ತ ಹಳ್ಳದ ಸಮೀಪ ಆಯತಪ್ಪಿ ಉರುಳಿಬಿದ್ದಿದೆ. ಈ ವೇಳೆ ಸಾವು, ನೋವುಗಳು ಸಂಭವಿಸಿವೆ.
ಶಿವಮ್ಮ (70) ಮೃತೆಯಾಗಿದ್ದು, ಈಕೆ ಮಾಳಿಗನತ್ತ ಗ್ರಾಮದ ನಿವಾಸಿಯಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ ಪಿಜಿ ಪಾಳ್ಯ, ಕಾಮಗೆರೆ, ಕೊಳ್ಳೇಗಾಲಕ್ಕೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.