ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ(KSRTC) ಪ್ರಯಾಣಿಸುವವರೇ ಗಮನಿಸಿ. ಶನಿವಾರ ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪರಿಷ್ಕೃತ ಟಿಕೆಟ್ ದರ ಜಾರಿಗೆ ಬರಲಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ನಲ್ಲಿ ಶೇ.15ರಷ್ಟು ಟಿಕೆಟ್ ದರ ಏರಿಕೆಗೆ ಅನುಮೋದನೆ ಸಿಕ್ಕಿದ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ದರವನ್ನು ಏರಿಕೆ ಮಾಡಿದೆ. ಪಬ್ಲಿಕ್ ಟಿವಿಗೆ ಸಿಕ್ಕಿರುವ ಸಾಮಾನ್ಯ ಬಸ್ಸುಗಳ ಟಿಕೆಟ್ ದರದಲ್ಲಿ ಬೆಂಗಳೂರಿನಿಂದ ರಾಮನಗರಕ್ಕೆ ಕನಿಷ್ಠ 7 ರೂಪಾಯಿಯಿಂದ ಬೀದರ್‌ಗೆ ಗರಿಷ್ಠ 115 ರೂಪಾಯಿ ಹೆಚ್ಚಾಗಲಿದೆ.
ಇದನ್ನೂ ಓದಿ: ಚಹಲ್, ಧನಶ್ರೀ ದಾಂಪತ್ಯದಲ್ಲಿ ಬಿರುಕು – ಮದ್ವೆಯಾಗಿ 4 ವರ್ಷದ ಬಳಿಕ ಡಿವೋರ್ಸ್?
ಎಲ್ಲಿಂದ ಎಲ್ಲಿಗೆ? ಎಷ್ಟು ದರ?
ಬೆಂಗಳೂರಿನಿಂದ ಬೀದರ್‌ಗೆ 821 ರೂ. ದರ ಇದ್ದರೆ ಇನ್ನು ಮುಂದೆ 936 ರೂ. ಏರಿಕೆಯಾಗಲಿದೆ. ಒಟ್ಟು 115 ರೂ. ದರ ಹೆಚ್ಚಳವಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಮೊದಲು 398 ರೂ. ದರ ಇತ್ತು. ಈಗ 454 ರೂ.ಗೆ ಏರಿಕೆಯಾಗಿದೆ.
ಬೆಂಗಳೂರಿನಿಂದ ದಾವಣಗೆರೆಗೆ 320 ರೂ. ದರ ಇತ್ತು. ಇನ್ನು ಮುಂದೆ 362 ರೂ. ಆಗಲಿದ್ದು, 42 ರೂ. ಹೆಚ್ಚಳವಾಗಲಿದೆ. ಬೆಂಗಳೂರಿನಿಂದ ಮೈಸೂರಿಗೆ 141 ರೂ. ಇತ್ತು. ಭಾನುವಾರದಿಂದ 162 ರೂ. ಆಗಲಿದ್ದು 21 ರೂ. ಏರಿಕೆ ಕಾಣಲಿದೆ.
ಕಲ್ಯಾಣ ಕರ್ನಾಟಕ ಸಾರಿಗೆ
ಕಲಬುರಗಿಯಿಂದ ಧರ್ಮಸ್ಥಳಕ್ಕೆ 765 ರೂ. ಪ್ರಸ್ತುತ ದರ ಇದ್ದರೆ ಇನ್ನು ಮುಂದೆ 880 ರೂ.ಗೆ ಏರಿಕೆಯಾಗಲಿದೆ. ಕಲಬುರಗಿಯಿಂದ ಶಿವಮೊಗ್ಗಕ್ಕೆ 550 ರೂ. ದರ ಇದ್ದರೆ ಇನ್ನು ಮುಂದೆ 633 ರೂ. ಆಗಲಿದೆ.