ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಮುಖ್ಯರಸ್ತೆಯಲ್ಲಿರುವ ಮೂಕಳ್ಳಿ ಮಾರಮ್ಮ ದೇವಾಲಯದ ಬಳಿ ಘಟನೆ ನಡೆದಿದೆ.
ಇಬ್ಬರು ಸೋಲಿಗ ಯುವಕರು ಸಾವನ್ನಪ್ಪಿದ್ದಾರೆ. ಪೊನ್ನಾಚಿ ರಾಮೇಗೌಡನಹಳ್ಳಿಯ ಶಿವಪ್ಪ (21), ಸತೀಶ (24) ಮೃತ ಬೈಕ್ ಸವಾರರಾಗಿದ್ದಾರೆ. ಅಪಘಾತವಾಗುತ್ತಿದ್ದಂತೆ ಸ್ಥಳದಿಂದ ಬಸ್ ಚಾಲಕ, ನಿರ್ವಾಹಕ ನಾಪತ್ತೆಯಾಗಿದ್ದರು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

