ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ತಿಂಗಳಿನಿಂದ ಸಂಚಾರ ಬಂದ್ ಆಗಿತ್ತು. ಈಗ ಮತ್ತೆ ಬಸ್ ಸಂಚಾರ ಶುರು ಆಗಿದೆ. ಆದರೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೆಬ್ಬಾವಿನ ಮರಿಯೊಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡಿದೆ.
ಮಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್ಸೊಂದು ಮಂಗಳವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರಯಾಣಿಕರ ಸಮೇತ ಬಂದಿತ್ತು. ಪ್ರಯಾಣಿಕರನ್ನ ಕೆಳಗಿಳಿಸಿ ಬಸ್ಸನ್ನು ಸ್ಯಾನಿಟೈಸರ್ ಮಾಡುವ ವೇಳೆ ಬಸ್ಸಿನ ಮೀಟರ್ ಬೋರ್ಡ್ ಬಳಿ ಹೆಬ್ಬಾವಿನ ಮರಿ ಕಾಣಿಸಿಕೊಂಡಿದೆ. ಸುಮಾರು ಒಂದೂವರೆ ಅಡಿ ಉದ್ದದ ಅಂದಾಜು ಐದು ತಿಂಗಳಿನ ಹೆಬ್ಬಾವು ಎನ್ನಲಾಗಿದೆ.
Advertisement
Advertisement
ಕೆಎಸ್‌ಆರ್‌ಟಿಸಿ ಸಿಬ್ಬಂದಿ ಗಾಬರಿಗೊಂಡು ಬಿಬಿಎಂಪಿ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಬಿಬಿಎಂಪಿ ಅರಣ್ಯಸಂರಕ್ಷಾ ಘಟಕದ ಸಿಬ್ಬಂದಿ ರಾಜೇಶ್ ಬಸ್ ನಿಲ್ದಾಣಕ್ಕೆ ಆಗಮಿಸಿ ಹೆಬ್ಬಾವಿನ ಮರಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
Advertisement
ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ತಿಂಗಳಿನಿಂದ ಮಂಗಳೂರು ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನು ನಿಲ್ಲಿಸಿಲಾಗಿತ್ತು. ಮಂಗಳವಾರ ಬೆಂಗಳೂರಿಗೆ ಮೊದಲ ಟ್ರಿಪ್ ಬಸ್ ಬಂದಿತ್ತು. ಮಂಗಳೂರಿನಲ್ಲಿ ಬಸ್ ನಿಲ್ಲಿಸಿದ್ದಾಗ ಇಂಜಿನ್ ಬಳಿ ಹೆಬ್ಬಾವಿನ ಮರಿ ಆಶ್ರಯ ಪಡೆದಿರಬಹುದು ಎನ್ನಲಾಗುತ್ತಿದೆ. ಸ್ಯಾನಿಟೈಸರ್ ಮಾಡಲು ರಾಸಾಯನಿಕ ಸಿಂಪಡನೆ ವೇಳೆ ಹೆಬ್ಬಾವಿನ ಮರಿ ಹೊರಬಂದಿದೆ.