ಬೆಂಗಳೂರು: 2023, 2024 ಮತ್ತು 2025ನೇ ಸಾಲಿನ ಕೆ-ಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಇದುವರೆಗೂ ಮೂಲ ದಾಖಲೆಗಳ ಪರಿಶೀಲನೆಗೆ ಗೈರಾದವರ ಸಲುವಾಗಿ ಡಿ.10ರಿಂದ 12ರವರೆಗೆ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು, ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ ಮಾಡಿಸಿಕೊಳ್ಳಬೇಕು. ಎಲ್ಲವೂ ಸರಿ ಇದ್ದರೆ ಸ್ಥಳದಲ್ಲೇ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಯುಜಿ ವೈದ್ಯಕೀಯ: 3ನೇ ಸುತ್ತಿನ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಪ್ರಕಟ-ಕೆಇಎ
ಡಿ.10ರಂದು ಬೆಳಗಿನ ವೇಳೆಯಲ್ಲಿ 2023ನೇ ಸಾಲಿನ ಅಭ್ಯರ್ಥಿಗಳು ಹಾಗೂ ಅದೇ ದಿನ ಮಧ್ಯಾಹ್ನದ ನಂತರ 2024ನೇ ಸಾಲಿನ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗುತ್ತದೆ. ಡಿ.11 ಮತ್ತು 12ರಂದು 2025ನೇ ಸಾಲಿನ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಇರುತ್ತದೆ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್ ನೋಡಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂಡಿಗೋ ಸಂಕಟ; ಪಿಜಿ ವೈದ್ಯಕೀಯ ಪ್ರವೇಶಕ್ಕೆ ದಿನಾಂಕ ವಿಸ್ತರಣೆ – ಕೆಇಎ

