ಬೆಂಗಳೂರು: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (Assistant Conservator of Forest) ಹುದ್ದೆಗಳಿಗೆ ನಾಲ್ವರು ಸದಸ್ಯರ ಸಂದರ್ಶನ ಸಮಿತಿಯನ್ನು ರಚಿಸಬೇಕೆಂದು ರಾಜ್ಯ ಸರ್ಕಾರ ನೀಡಿರುವ ನಿರ್ದೇಶನ ವಿಚಾರವಾಗಿ ಕೆಪಿಎಸ್‌ಸಿ (KPSC) ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿಗಳ ಮುಸುಕಿನ ಗುದ್ದಾಟದ ನಡೆಯಿಂದ ಸ್ಪರ್ಧಾಕಾಂಕ್ಷಿಗಳು ಬೇಸತ್ತಿದ್ದಾರೆ. ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿ ಅಸೋಸಿಯೇಷನ್ (ASCEAA) ಒತ್ತಾಯಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಸೋಸಿಯೇಷನ್ ಅಧ್ಯಕ್ಷೆ ಭವ್ಯ ನರಸಿಂಹಮೂರ್ತಿ ಅವರು, ಸರ್ಕಾರದ ನಿರ್ದೇಶನವು ಸಂದರ್ಶನದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೂಡಿದೆ. ಅಲ್ಲದೇ ಮುಂದಿನ ನೇಮಕಾತಿಗಳಲ್ಲಿ ನಡೆಯುವ ಸಂದರ್ಶನಕ್ಕೆ ಮಾದರಿಯಾಗುತ್ತದೆ ಎಂದು ಅಭ್ಯರ್ಥಿಗಳು ಭಾವಿಸಿದ್ದಾರೆ. ಆದರೆ ಕೆಪಿಎಸ್‌ಸಿ ಹೇಳುವುದೇನೆಂದರೆ, ಅವರ ಜೊತೆ ಮುಂಚಿತವಾಗಿ ಚರ್ಚಿಸದೆ ಸರ್ಕಾರ ಏಕಾಏಕಿ ಈ ವಿಷಯದ ಕುರಿತು ನಿರ್ಧರಿಸಿದೆ. ಈಗಾಗಲೇ ಎಸಿಎಫ್ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಗಳು ನಡೆದಿರುವುದರಿಂದ ಈ ಹಂತದಲ್ಲಿ ಸಂದರ್ಶನ ಸಮಿತಿ ರಚನೆಯಲ್ಲಿ ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲವೆಂದು ತಳ್ಳಿಹಾಕಿದೆ. ಇದನ್ನೂ ಓದಿ: ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು: ಡಿಕೆಶಿಗೆ ಸುಧಾಕರ್ ತಿರುಗೇಟು
Advertisement
Advertisement
ಈ ಹಿಂದೆ ಪಿಡಬ್ಲ್ಯೂಡಿ (PWD)ಯ ಸಹಾಯಕ ಅಭಿಯಂತರರು (Assistant Engineer) ಹುದ್ದೆಗೆ ಸಂದರ್ಶನದ ಸಮಿತಿ ರಚನೆಯಲ್ಲಿ ಬದಲಾವಣೆ ಹಾಗೂ 20-40 ರೂಲ್‌ನ್ನು ಇದೇ ಹಂತದಲ್ಲಿ ಆಯೋಗವು ಮಾಡಿದೆ. ಇದರಿಂದ ನೂರಾರು ಅಭ್ಯರ್ಥಿಗಳಿಗೆ ಪಾರದರ್ಶಕವಾಗಿ ಹುದ್ದೆಗಳನ್ನು ಪಡೆಯಲು ಅನುಕೂಲವಾಗಿತ್ತು. ಅಭ್ಯರ್ಥಿಗಳಿಂದ ಮೆಚ್ಚುಗೆ ಸಹ ವ್ಯಕ್ತವಾಗಿತ್ತು.
Advertisement
ಪ್ರಸ್ತುತವಾಗಿ ನ್ಯಾಯ ವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕರ ಹುದ್ದೆಗಳಿಗೂ ಸಹ ಎಸಿಎಫ್ ಸಮಿತಿಯ ರೀತಿಯಲ್ಲಿಯೇ ನಾಲ್ವರು ಸದಸ್ಯರ ಸಂದರ್ಶನ ಸಮಿತಿ ರಚಿಸಬೇಕೆಂದು ಪೊಲೀಸ್ ಇಲಾಖೆ ನಿರ್ದೇಶಿಸಿದೆ. ಇನ್ನೂ ಹಲವಾರು ಇಲಾಖೆಯು ಇದೇ ಮಾದರಿಯ ಸಂದರ್ಶನ ಸಮಿತಿಯ ಪ್ರಸ್ತಾವನೆ ನೀಡುವ ಸಂಭವವಿದೆ. ಇಂತಹ ಒಳ್ಳೆಯ ಬದಲಾವಣೆಯನ್ನು ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು ತಳ್ಳಿ ಹಾಕಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ: ಹೆಚ್.ಡಿ.ದೇವೇಗೌಡ
Advertisement
ಮಾಧ್ಯಮಗಳಲ್ಲಿ ವರಿದಿಯಾಗಿರುವಂತೆ, ಕೆಪಿಎಸ್‌ಸಿ ಸದಸ್ಯರು, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ನಡುವಿನ ಮುಸುಕಿನ ಗುದ್ದಾಟದಿಂದ ಸ್ಪರ್ಧಾಕಾಂಕ್ಷಿಗಳು ಬೇಸತ್ತಿದ್ದಾರೆ. ಕಾರ್ಯದರ್ಶಿಗಳು ಕೈಗೊಳ್ಳುವ ಪ್ರತಿಯೊಂದು ಕೆಲಸ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಿರುತ್ತದೆ ಹಾಗೂ ಪಾರದರ್ಶಕತೆ ಇರುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ ಸದಸ್ಯರು ಮತ್ತು ಅಧ್ಯಕ್ಷರು, ಕಾರ್ಯದರ್ಶಿಗಳ ನಡೆಗೆ ಸುಖಾಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸ್ಪರ್ಧಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇವುಗಳನ್ನೆಲ್ಲ ತ್ವರಿತವಾಗಿ ಸರಿಪಡಿಸಬೇಕೆಂದು ಅಸೋಸಿಯೇಷನ್ ಒತ್ತಾಯಿಸಿದೆ.
ಏನಿದು ಪ್ರಕರಣ?
ಕೆಪಿಎಸ್‌ಸಿ ಒಬ್ಬರು ಸದಸ್ಯ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸಿದ ಒಬ್ಬ ನಿವೃತ್ತ ಐಎಎಸ್ ಅಥವಾ ಐಪಿಎಸ್ ಅಧಿಕಾರಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸಿದ ಒಬ್ಬ ನಿವೃತ್ತ ಐಎಫ್‌ಎಸ್ ಅಧಿಕಾರಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸುತ್ತಿರುವ ಒಬ್ಬ ಸಂಬಂಧಿಸಿದ ವಿಷಯ ತಜ್ಞ ಹೀಗೆ ನಾಲ್ವರು, ಎಸಿಎಫ್ ಹುದ್ದೆಗಳಿಗೆ ಆಯ್ಕೆಯ ಸಂದರ್ಶನ ಸಮಿತಿಯಲ್ಲಿ ಇರಬೇಕು ಎಂದು ಕೆಪಿಎಸ್‌ಸಿಗೆ ಅರಣ್ಯ ಇಲಾಖೆ ತಿಳಿಸಿತ್ತು.