ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಚುನಾವಣಾ ಮತದಾನ ನಾಳೆ ನಡೆಯಲಿದ್ದು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ (Venkatesh Prasad) ಬಣ ಹಾಗೂ ಬ್ರಿಜೇಶ್ ಪಟೇಲ್ (Brijesh Patel) ಬಣಗಳ ನಡುವೆ ಭಾರೀ ಹಣಾಹಣಿ ನಡೆದಿದೆ. ಚುನಾವಣೆಯನ್ನು ಸುತ್ತುವರಿದ ವಿವಾದಗಳ ನಡುವೆ ಇಂದು ಪ್ರಸಾದ್ ಬಣವು ಕೆಎಸ್‌ಸಿಎ ಸದಸ್ಯರೊಂದಿಗೆ ಸಂವಾದ ನಡೆಸಿತು.
ಪ್ಯಾಲೇಸ್ ಮೈದಾನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೂರಾರು ಕೆಎಸ್‌ಸಿಎ ಸದಸ್ಯರು ಭಾಗವಹಿಸಿದರು. ಟೀಂ ಗೇಮ್ ಚೇಂಜರ್ಸ್ ಪರವಾಗಿ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಬ್ರಿಜೇಶ್ ಬಣದ ಆಡಳಿತದ ವೈಫಲ್ಯಗಳನ್ನು ಪ್ರಸಾದ್ ಬಣವು ಪಿಪಿಟಿ ಮೂಲಕ ಸದಸ್ಯರಿಗೆ ವಿವರಿಸಿತು. ಇದನ್ನೂ ಓದಿ: ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಆಗಲ್ಲ – ದೆಹಲಿ ಪೊಲೀಸ್ ನೋಟಿಸ್‌ಗೆ ಡಿಕೆಶಿ ಪ್ರತಿಕ್ರಿಯೆ
ಕ್ರಿಕೆಟ್ ಉದ್ಧಾರಕ್ಕಾಗಿಯೆ ಬದಲಾವಣೆ ಅಗತ್ಯ: ಅನಿಲ್ ಕುಂಬ್ಳೆ ಕಿಡಿ
ಸಂವಾದದ ಬಳಿಕ ಮಾತನಾಡಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪ್ರಸ್ತುತ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವೆಂಕಟೇಶ್ ಪ್ರಸಾದ್ ತಂಡ ಗೆಲ್ಲಲೇಬೇಕು. ರಾಜ್ಯದಲ್ಲಿ ಕ್ರಿಕೆಟ್ ಉದ್ಧಾರ ಆಗಬೇಕಾದರೆ ಬದಲಾವಣೆ ಅನಿವಾರ್ಯ. ನಾವು ಅಧಿಕಾರದಲ್ಲಿದ್ದಾಗ ಎರಡು ಹೆಜ್ಜೆ ಮುಂದೆ ಇಟ್ಟಿದ್ದೇವೆ. ಈಗ 10 ಹೆಜ್ಜೆ ಹಿಂದೆ ಹೋಗಿದ್ದೇವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಫ್ರಾಸ್ಟ್ರಕ್ಚರ್ ಬದಲಾಗಬೇಕು. ಪ್ರಸಾದ್ ತಂಡ ಇದನ್ನು ಸಾಧಿಸುವ ಸಾಮರ್ಥ್ಯ ಹೊಂದಿದೆ. ಕೆಎಸ್‌ಸಿಎನಲ್ಲಿ ದುಡ್ಡಿಗೆ ಕೊರತೆಯಿಲ್ಲ. ಆದರೆ ಕ್ರಿಕೆಟ್ ಬೆಳವಣಿಗೆ ಆಗಬೇಕು. ಮತ ಕೇವಲ ಕ್ಲಬ್‌ಗೆ ಅಲ್ಲ. ಕ್ರಿಕೆಟ್ ಕನಸು ಕಟ್ಟಿಕೊಂಡಿರುವ ಮಕ್ಕಳಿಗಾಗಿ ಎಂದರು. ಇದನ್ನೂ ಓದಿ: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ; ಇತರೆ ಏರ್‌ಲೈನ್‌ಗಳಿಂದ ದರ ಹೆಚ್ಚಳ – ಕೇಂದ್ರ ಮಧ್ಯಪ್ರವೇಶ
ಇನ್ನೂ ನಾಳೆ ನಿರ್ಣಾಯಕ ದಿನವಾಗಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಮತದಾನ ಆರಂಭವಾಗಲಿದೆ. ಅಲ್ಲದೇ ನಾಳೆಯೇ ಕೆಎಸ್‌ಸಿಎ ಹೊಸ ಆಡಳಿತ ನಿರ್ಧಾರವಾಗಲಿದ್ದು, ಪ್ರಸಾದ್-ಬ್ರಿಜೇಶ್ ಬಣಗಳ ನಡುವೆ ಕಠಿಣ ಪೈಪೋಟಿ ಎದುರಾಗಲಿದೆ. ಇದನ್ನೂ ಓದಿ: ಮೈಶುಗರ್ ಶಾಲಾ ಶಿಕ್ಷಕರಿಗೆ ನೆರವಾದ ಹೆಚ್‌ಡಿಕೆ – ಸಂಸದರ ವೇತನವನ್ನೇ ಕೊಟ್ಟ ಕೇಂದ್ರ ಸಚಿವ

