ಮೈಸೂರು: ಎಸ್‍ಡಿಪಿಐ ನಾಯಕ ಅಬ್ದುಲ್ ಮಸೀಜ್ ಕೋರ್ಟ್ ವಿರುದ್ಧ ಮಾತಾಡಿದರೂ ಬಂಧನವಾಗಿಲ್ಲ. ಕಾಂಗ್ರೆಸ್ (Congress) ಸರ್ಕಾರ ಕಾನೂನು ಉಲ್ಲಂಘನೆ ಮಾಡುವವರ ಪರವಾಗಿದೆ. ಈ ಮೂಲಕ ಮುಸಲ್ಮಾನರ ಪರವಾಗಿದೆ ಎಂದು ತೋರಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಎಸ್‍ಡಿಪಿಐನ ಅಬ್ದುಲ್ ಮಜೀದ್ ಅವರ ಜ್ಞಾನವ್ಯಾಪಿ ಮಸೀದಿಗಾಗಿ ಬಲಿದಾನಕ್ಕೆ ಸಿದ್ಧ ಎಂಬ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ರಾಜ್ಯದಲ್ಲಿ ಸರ್ಕಾರ ಬದುಕಿಲ್ಲ. ಎಸ್‍ಡಿಪಿಐ ನಾಯಕನನ್ನು ಅರೆಸ್ಟ್ ಮಾಡಬೇಕಿತ್ತು. ಬಂಧಿಸದೆ ಕಾನೂನು ಉಲ್ಲಂಘನೆ ಮಾಡುವ ವ್ಯಕ್ತಿಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಸುತ್ತೂರು ಶಾಖಾ ಮಠ ಆರಂಭಕ್ಕೆ ಚಿಂತನೆ: ಅಮಿತ್ ಶಾ
Advertisement
Advertisement
ಡಿಸಿಎಂ ತಮ್ಮ ಡಿ.ಕೆ.ಸುರೇಶ್ ಸಂಸದ ಎನ್ನುವ ಅಹಂಕಾರದಿಂದ ದಕ್ಷಿಣ ಭಾರತವನ್ನು ಬೇರೆ ರಾಷ್ಟ್ರ ಕೇಳಬೇಕಾಗುತ್ತೆ ಎಂದಿದ್ದಾರೆ. ಈ ಹೇಳಿಕೆ ಕೊಟ್ಟ ಕೂಡಲೇ ಅವರನ್ನ ಬಂಧಿಸಬೇಕಿತ್ತು. ಅವರ ಹೇಳಿಕೆಯನ್ನು ಕಾಂಗ್ರೆಸ್‍ನ ನಾಯಕರೇ ತಿರಸ್ಕಾರ ಮಾಡಿದ್ದಾರೆ. ಡಿಸಿಎಂ ಎನ್ನುವ ಅಹಂಕಾರದಲ್ಲಿ ಡಿಕೆಶಿ ನನಗೆ ಸೆಟಲ್‍ಮೆಂಟ್ ಮಾಡ್ತಾರಂತೆ. ಅರ್ಧ ಸೆಟಲ್‍ಮೆಂಟ್ ಮಾಡ್ತಿವಿ, ಇನ್ನೂ ಅರ್ಧ ಇದೆ ಎಂದಿದ್ದಾರೆ. ಈತ ಒಬ್ಬ ಗೂಂಡಾ ಉಪಮುಖ್ಯಮಂತ್ರಿ. ಇಂತಹ ಗೊಡ್ಡು ಬೆದರಿಕೆಗೆ ನಾನು ಬಗ್ಗುವುದಿಲ್ಲ. ಅವರ ಅರ್ಧ ಸೆಟಲ್‍ಮೆಂಟ್ ಇಡಿ ಮಾಡಿದೆ. ತಿಹಾರ್ ಜೈಲಿನಲ್ಲಿ ಸೆಟಲ್‍ಮೆಂಟ್ ತೆಗೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಇನ್ನೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ, ನಾನು ನೋಟಿಸ್, ಎಫ್‍ಐಆರ್‍ಗೆ ಹೆದರಲ್ಲ, ನಾನು ಕೋರ್ಟ್‍ಗೂ ಹೋಗಿ ಬಂದಿದ್ದೇನೆ. ನನಗೆ ಒಂದು ರೂ. ದಂಡವೂ ಬಿದ್ದಿಲ್ಲ. ಸಿಎಂಗೆ ಕೋರ್ಟ್ 10 ಸಾವಿರ ರೂ. ದಂಡ ವಿಧಿಸಿದೆ. ಡಿಸಿಎಂ ಜೈಲಿಗೆ ಹೋಗಿ ಬಂದಿದ್ದಾರೆ ಕುಟುಕಿದ್ದಾರೆ.
ಪುತ್ರನಿಗೆ ಟಿಕೆಟ್ ವಿಚಾರವಾಗಿ, ಲೋಕಸಭಾ ಚುನಾವಣೆಯಲ್ಲಿ ವೈಯಕ್ತಿಕ ಪ್ರಶ್ನೆ ಬರುವುದಿಲ್ಲ. ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಕುರಿತು ಚರ್ಚೆ ನಡೆಯಲಿದೆ. ಅಮಿತ್ ಶಾ ಅವರೇ ಇಲ್ಲಿ ಬಂದು ಸಭೆ ಮಾಡ್ತಿದ್ದಾರೆ. 28 ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ. ನನ್ನ ಮಗ ಓಡಾಟ ಮಾಡ್ತಿದ್ದಾನೆ. ಟಿಕೆಟ್ ಸಿಕ್ಕರೆ ಸಂತೋಷ, ಗೆಲ್ಲಿಸಿಕೊಂಡು ಬರ್ತೇವೆ. ಟಿಕೆಟ್ ಕೊಡುವ ವಿಶ್ವಾಸವಿದೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ಮತ್ತೆ ತಿಹಾರ್ ಜೈಲು ಸೇರುತ್ತಾರೆ: ಈಶ್ವರಪ್ಪ ಭವಿಷ್ಯ