ನನ್ನ ಮಗನಿಗೆ ಟಿಕೆಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದೇನೆ – ಈಶ್ವರಪ್ಪ

Public TV
1 Min Read
KS Eshwarappa 1

ಬೆಳಗಾವಿ: ಮುಂದಿನ ಚುನಾವಣೆಗೆ ನನ್ನ ಮಗನಿಗೆ ಟಿಕೆಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದೇನೆ. ಟಿಕೆಟ್ ಕೊಟ್ಟರೇ ಹಾವೇರಿಯಿಂದ ಸ್ಪರ್ಧಿಸುತ್ತಾನೆ ಎಂದು ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ.

ಬೆಳಗಾವಿ (Belagavi) ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಮುಂದಿನ ಚುನಾವಣೆಗೆ ನನ್ನ ಮಗ ಕಾಂತೇಶ್‌ಗೆ ಟಿಕೆಟ್ ಪಡೆಯಬೇಕು ಅಂತ ಪ್ರಯತ್ನಿಸುತ್ತಿದ್ದೇನೆ. ಟಿಕೆಟ್ ಕೊಟ್ಟರೆ ಚುನಾವಣೆಗೆ ನಿಲ್ಲಿಸುತ್ತೇನೆ. ಹಾವೇರಿಯಿಂದ ಕಾಂತೇಶ್ ಸ್ಪರ್ಧೆ ಮಾಡ್ತಾನೆ ಎಂದು ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ (Siddaramaiah) ಅವರು ಅಹಿಂದ ಅಂತ ಹೋಗುತ್ತಿದ್ದರು. ಆದ್ರೆ ಹಿಂದುಳಿದವರು, ದಲಿತರು ಕೈಬಿಟ್ಟರು, ಇನ್ನು ಉಳಿದಿರೋದು ಅಲ್ಪಸಂಖ್ಯಾತರು (Muslims) ಮಾತ್ರ. ಅವರನ್ನೇ ಬಳಸಿಕೊಂಡು ರಾಜಕೀಯ ಮಾಡಬೇಕು ಅನ್ನೋದು ಸಿದ್ದರಾಮಯ್ಯರ ಲೆಕ್ಕ. ದೇಶದ್ರೋಹಿಗಳಿಗೆ ತೃಪ್ತಿ ಆಗುವ ರೀತಿಯಲ್ಲಿ ಸಿದ್ದರಾಮಯ್ಯ ಮಾತಾಡ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಹೊಸವರ್ಷಾಚರಣೆಗೆ ಕ್ಷಣಗಣನೆ – ಇಂದು ರಾತ್ರಿಯಿಂದಲೇ ಬೆಂಗ್ಳೂರಿನ ಪ್ರಮುಖ ಫ್ಲೈಓವರ್‌ಗಳು ಬಂದ್‌!

ರಾಮಮಂದಿರ ಆಗಬಾರದು ಅಂತಾ ಕೋರ್ಟಿಗೆ ಹೋದವರು ಮೋದಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪಾಕಿಸ್ತಾನದವರು ಮೋದಿಯಂತಹ ಪ್ರಧಾನಿ ನಮಗೆ ಇರಬೇಕಿತ್ತು ಅಂತಾರೆ. ಆದ್ರೆ ಹಿಂದೂ ಮುಸ್ಲಿಂ ಒಟ್ಟಾಗಬಾರದು ಅನ್ನೋದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಉದ್ದೇಶ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತ್ನಿ ಮಾಡ್ರನ್‌ ಡ್ರೆಸ್‌ ಧರಿಸುತ್ತಿದ್ದಕ್ಕೆ ಕೆಂಡವಾದ ಪತಿ – ಕತ್ತು ಕೊಯ್ದು ಬರ್ಬರವಾಗಿ ಹತ್ಯೆ

ರಾಮಮಂದಿರ ಉದ್ಘಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಒಂದೊಂದೇ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ದೇಶದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೂ ಸಾರ್ಥಕವಾಯಿತು. ಭಾರತೀಯ ಸಂಸ್ಕೃತಿ ಉಳಿಸಬೇಕು ಎಂದು ಸಾವಿರಾರು ಜನ ಬಲಿದಾನ ಮಾಡಿದ್ರು, ಇದೀಗ ಅದೆಲ್ಲವೂ ಸಾರ್ಥಕವಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಸ್ಟಂಟ್ ಮಾಡ್ತಿದೆ. ಮೊದಲು ಬಿಜೆಪಿಯವರು ರಾಮಮಂದಿರ ಕಟ್ಟಿಲ್ಲ ಅನ್ನುತ್ತಿದ್ದರು. ಈಗ ಪ್ರಿಯಾಂಕ್ ಖರ್ಗೆಯವರು ರಾಮಮಂದಿರ ಕಟ್ಟಾಯಿತು, ರಾಮರಾಜ್ಯ ಯಾವಾಗ? ಅಂತಾರೆ. ಇಂತಹ ಚಿಲ್ಲರೆಗಳಿಗೆ ಉತ್ತರ ಕೊಡಬೇಕಿಲ್ಲ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

Share This Article