-ಸಿಎಂ ಮಂಗ, ಪ್ರೀಯಾಂಕ್ ಖರ್ಗೆ ಬಚ್ಚಾ ಎಂದು ಲೇವಡಿ ಮಾಡಿದ ಮಾಜಿ ಸಚಿವ
ಕೊಪ್ಪಳ: ಕಾಂಗ್ರೆಸ್‌ನಲ್ಲಿ ಎಲ್ಲರೂ ನಾನೂ ಸಿಎಂ ಆಗ್ಬೇಕು, ನಾನೂ ಸಿಎಂ ಆಗ್ಬೇಕು ಅಂತಾ ಬಯಸುತ್ತಿದ್ದಾರೆ. ಸುಮ್ಮನೆ ಸಂವಿಧಾನ (Constitution) ತಿದ್ದುಪಡಿ ಮಾಡಿ ಜಾತಿಗೊಂದು ಸಿಎಂ ಕೊಟ್ಬಿಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ವ್ಯಂಗ್ಯವಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಇನ್ನೂ ಪ್ರಿಯಾಂಕ್ ಖರ್ಗೆ (Priyank Kharge) ಸಿಎಂ ಆಗ್ತಾರೆ ಎಂಬ ವಿಷಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಮೇಶ್ವರ್ ನೋಡಿದ್ರೆ ನಾನೂ ಸಿಎಂ ಆಗ್ಬೇಕು ಅಂತಾರೆ, ಮತ್ತೊಂದು ಕಡೆ ಒಕ್ಕಲಿಗರು ಸಿಎಂ ಆಗ್ಬೇಕು ಅಂತಾ ಡಿಕೆಶಿ (DK Shivakumar) ಹೇಳ್ತಿದ್ದಾರೆ. ಈಗ ನೋಡಿದ್ರೆ ಪ್ರಿಯಾಂಕ್ ಖರ್ಗೆಗೂ ಸಿಎಂ ಆಗುವ ಆಸೆ ಬಂದಿದೆ. ಪ್ರಿಯಾಂಕ್ ಖರ್ಗೆ ಇನ್ನೂ ಬಚ್ಚ. ಅವರ ಅಪ್ಪ ಅನೇಕ ವರ್ಷ ರಾಜ್ಯದಲ್ಲಿ ಕೆಲಸ ಮಾಡಿದರೂ ಸಿಎಂ ಆಗಲಿಲ್ಲ. ಆದ್ರೆ, ಪ್ರಿಯಾಂಕ್ ಖರ್ಗೆಗೆ ಈಗಲೇ ಸಿಎಂ ಆಗುವ ಆಸೆ ಶುರುವಾಗಿದೆ. ಸಂವಿಧಾನ ತಿದ್ದುಪಡಿ ಮಾಡಿ ಜಾತಿಗೊಂದು ಮುಖ್ಯಮಂತ್ರಿ ಕೊಟ್ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಇದೇ ವೇಳೆ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿ, ಸಿದ್ದರಾಮಯ್ಯ ಅವರನ್ನ ನನಗೆ ಹೋಲಿಕೆ ಮಾಡಬೇಡಿ. ಮಂಗ ಹಾರಿದಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ಮತ್ತೊಂದು ಪಕ್ಷಕ್ಕೆ ಹಾರಿ ಹೋಗುತ್ತಾರೆ. ನಾನೊಬ್ಬನೇ ಹಿಂದುಳಿದ ವರ್ಗದ ನಾಯಕ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಬಿಟ್ಟರೆ, ಹಿಂದುಳಿದ ವರ್ಗಗಳ ಉದ್ಧಾರಕ ನಾನೇ. ಅವರಿಗಿಂತ ಒಂದು ಹೆಜ್ಜೆ ಮುಂದೆ ನಾನೇ ಎಂದು ಸಿದ್ದರಾಮಯ್ಯ ದುಡ್ಡು ಕೊಟ್ಟು ಪೋಸ್ಟರ್ ಹಾಕಿಸಿಕೊಳ್ಳುತ್ತಿದ್ದಾರೆ. ಆದ್ರೆ, ರಾಜ್ಯದಲ್ಲಿ ಯಾವುದಾದರೂ ಹಿಂದುಳಿದ ಸಮಾಜಕ್ಕೆ ಅನುದಾನ ಕೊಟ್ಟಿದ್ದಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಲೋಕಸಮರ ಗೆಲ್ಲಲು ನಿತೀಶ್ ತಂತ್ರ : ಬಿಹಾರದಲ್ಲಿ ಮೀಸಲಾತಿ ಪ್ರಮಾಣ 65% ಏರಿಕೆ – ಜಾತಿ ಸಮೀಕ್ಷೆಯಲ್ಲಿ ಏನಿದೆ?
Advertisement
Advertisement
ಕಳೆದ 2013ರಲ್ಲಿ ಜಾತಿ ಗಣತಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಮಾಡಲಿಲ್ಲ. ಇದೀಗ ಮತ್ತೇ ನವೆಂಬರ್ ತಿಂಗಳಿನಲ್ಲಿ ಕಾಂತರಾಜ್ ವರದಿ ರಿಪೋರ್ಟ್ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯ ದೇವರ ಭಕ್ತರಾಗಿದ್ದಾರೆ. ಸಿದ್ದರಾಮಯ್ಯ ಈಗ ಸುಳ್ಳುರಾಮಯ್ಯ ಆಗಿದ್ದಾರೆ. ಬಡವರಿಗೆ ಗ್ಯಾರಂಟಿ ತೋರಿಸಿ ಮೋಸ ಮಾಡಿ ಕಾಂಗ್ರೆಸ್ ನವರು ಗೆದ್ದಿದ್ದಾರೆ. ಯಾವ ಗ್ಯಾರಂಟಿಯೂ ಯಶಸ್ವಿಯಾಗಿಲ್ಲ. ಮುಂದೆ ನಮ್ಮ ಸರ್ಕಾರ ಬರುವುದಿಲ್ಲ ಎಂದು ಗೊತ್ತಾಗಿ, ಲೂಟಿಗೆ ಇಳಿದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: 90 ಸಾವಿರ ಪ್ಯಾಲೆಸ್ತೇನಿಯನ್ನರ ಬದಲು ಭಾರತೀಯರ ನೇಮಕಕ್ಕೆ ಮುಂದಾದ ಇಸ್ರೇಲ್
ಗುತ್ತಿಗೆದಾರ ಕೆಂಪಣ್ಣಗೆ ನೂರು ಸಲ ಕಮಿಷನ್ ದಾಖಲಾತಿ ನೀಡುವಂತೆ ಕೇಳಿದ್ದೆವು. ಆದ್ರೆ, ಒಂದೇ ಒಂದು ದಾಖಲಾತಿ ನೀಡಲಿಲ್ಲ. ಡಿಕೆಶಿ ಹೆಸರಿನಲ್ಲಿ ವಸೂಲಿ ಮಾಡುತ್ತಿದ್ದಾರೆ ಎಂದು ಅದೇ ಕೆಂಪಣ್ಣ ಈಗ ಹೇಳುತ್ತಿದ್ದಾರೆ. ಈ ಬಗ್ಗೆ ಸಿಎಂ, ಡಿಸಿಎಂ ಮೌನವಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಲಿ. ಸತ್ಯ ಹೊರ ಬರುತ್ತದೆ. 3 ವರ್ಷದಲ್ಲಿ ಈ ಸರ್ಕಾರ ಇರಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ನಮ್ಮಲ್ಲಿ ಸಿಎಂ ಹುದ್ದೆಯೇ ಖಾಲಿ ಇಲ್ಲ: ಸಂತೋಷ್ ಲಾಡ್ ತಿರುಗೇಟು