ಬೆಂಗಳೂರು: ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಮಾತನಾಡುತ್ತಿದ್ದಾರೆ ನಾನು ಮಾತನಾಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮುನಿಸಿಕೊಂಡು ಹೋಗಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡುತ್ತಿದ್ದರು. ಅದೇ ವೇಳೆ ಸಿದ್ದರಾಮಯ್ಯ ಅವರು ಕೆಂಗಲ್ ಗೇಟ್ ಬಳಿ ಮೆಟ್ಟಿಲು ಇಳಿದುಕೊಂಡು ಬರುತ್ತಿದ್ದರು. ಈ ವೇಳೆ ಮಾಧ್ಯಮದವರು ಮಾಜಿ ಸಿಎಂ ಬಳಿ ಪ್ರತಿಕ್ರಿಯೆ ಕೇಳಿದ್ದಾರೆ. ಆಗ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ಈಶ್ವರಪ್ಪ ಅವರ ಕಡೆ ಕೈ ತೋರಿಸಿ, ನಾನು ಪ್ರತಿಕ್ರಿಯೆ ಕೊಡಲ್ಲ. ಅವರು ಮಾತನಾಡುತ್ತಿದ್ದಾರೆ ಮಾತಾಡಲಿ ಬಿಡಿ ಎಂದು ಸನ್ನೆ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾರೆ.
Advertisement
Advertisement
ವಿಧಾನಸೌಧದಲ್ಲಿ ಮಾತನಾಡಿದ ಈಶ್ವರಪ್ಪ, ಸಿಎಂ ಅವರು ಗುರುವಾರದವರೆಗೂ ಅವಕಾಶ ಕೊಡಿ ಎಂದು ಕೇಳಬಾರದಿತ್ತು. ಅತೃಪ್ತ ಶಾಸಕರಿಗೆ ಮತ್ತೆ ಬಲೆ ಬೀಸಿ ಹಣ, ಮಂತ್ರಿ ಸ್ಥಾನ ಕೊಡುವ ಆಸೆ ತೋರಿಸಿ ಅವರನ್ನು ಕರೆದುಕೊಂಡು ಬರಲು ಗುರುವಾರದವರೆಗೂ ಸಮಯ ಕೇಳಿದ್ದಾರೆ. ಈ ಸರ್ಕಾರದ ಅಭಿವೃದ್ಧಿ ಏನು ಇಲ್ಲ, ತಮಗೆ ಬೇಕಾದವರ ಮತ್ತು ಕುಟುಂಬದವರ ಅಭಿವೃದ್ಧಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ ಹೇಳುತ್ತಿದ್ದಾರೆ ಎಂದರು.
Advertisement
Advertisement
ಯಾರಿಗೋಸ್ಕರ ಈ ಸರ್ಕಾರ ಬೇಕು? ಹೀಗಾಗಿ ಗುರುವಾರದವರೆಗೂ ಕಾಯುವ ಅವಶ್ಯಕತೆ ಇಲ್ಲ ಇಂದೇ ಸಿಎಂ ರಾಜೀನಾಮೆ ಕೊಡಲಿ ಎಂದು ಈಶ್ವರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.